ಕೊಲಂಬೊ: ಭಾರತ ಮತ್ತು ಶ್ರೀಲಂಕಾ ನಡುವಿನ(India vs Sri Lanka Final) ಏಷ್ಯಾಕಪ್ ಫೈನಲ್(asia cup 2023 final) ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಇಂದು ಪಂದ್ಯ ನಡೆಯುವುದು ಅನುಮಾನ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಕಾರಣ ಕೊಲಂಬೊದಲ್ಲಿ(weather forecast colombo) ಸಂಜೆಯ ವೇಳೆ ಶೇ.90ರಷ್ಟು ಮಳೆಯಾಗಲಿದೆ ಎಂದು ಈಗಾಗಲೇ ಎಚ್ಚರಿಕೆ ನೀಡಿದೆ. ಇದೇ ಕಾರಣಕ್ಕೆ ಮೀಸಲು(asia cup 2023 final reserve day) ದಿನವನ್ನು ಕೂಡ ನಿಗದಿಪಡಿಸಲಾಗಿದೆ. ಸೋಮವಾರ ಮೀಸಲು ದಿನವಾಗಿದೆ. ಆದರೆ ಮೀಸಲು ದಿನವೂ ಮಳೆಯಿಂದ ಪಂದ್ಯ ರದ್ದಾದರೆ ವಿಜೇತರ ನಿರ್ಧಾರ ಹೇಗೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಕಾಡಿದೆ.
ಮಳೆಯ ಕಣ್ಣಾಮುಚ್ಚಾಲೆ
ಅಕ್ಯೂವೆದರ್ ವರದಿ ಪ್ರಕಾರ ಪಂದ್ಯ ನಡೆಯುವ ಕೊಲಂಬೊದಲ್ಲಿ ಶೇ. 90 ರಷ್ಟು ಮಳೆಯಾಗಲಿದೆ ಎಂದು ತಿಳಿಸಿದೆ. ಅಲ್ಲದೆ ಇಲ್ಲಿ ಮೋಡ ಕವಿದ ವಾತಾವರಣವಿದ್ದು ಮಳೆಯ ಕಣ್ಣಾಮುಚ್ಚಾಲೆ ಆಟ ತಪ್ಪಿದ್ದಲ್ಲ ಎಂದು ಹೇಳಿದೆ. ಪಂದ್ಯ ಆರಂಭಗೊಂಡು ಸುಮಾರ 20 ಓವರ್ಗಳ ತನಕ ಮಳೆ ಬಾರದಿದ್ದರೂ ಸಂಜೆಯ ವೇಳೆ ಮಳೆ ಖಚಿತ ಎಂದು ತಿಳಿಸಿದೆ. ಸೆಪ್ಟೆಂಬರ್ 10ರಂದು ನಡೆಯಬೇಕಿದ್ದ ಭಾರತ ಮತ್ತು ಪಾಕ್ ನಡುವಣ ಪಂದ್ಯವೂ ಮಳೆಯಿಂದ ಅರ್ಧಕ್ಕೆ ನಿಂತು ಹೋಗಿ ಬಳಿಕ ಮೀಸಲು ದಿನಕ್ಕೆ ವಿಸ್ತರಿಸಲ್ಪಟ್ಟಿತ್ತು. ಇದೀಗ ಈ ಪಂದ್ಯವೂ ಮೀಸಲು ದಿನಕ್ಕೆ ಸಾಗುವ ಸಾಧ್ಯತೆ ಅಧಿಕವಾಗಿದೆ.
ಮಳೆಯಿಂದಾಗಿ ಭಾನುವಾರ ಪಂದ್ಯ ನಡೆಯದೇ ಹೋದರೆ, ಅಂದರೆ ಮೊದಲ ಇನಿಂಗ್ಸ್ ಮುಗಿದು ದ್ವಿತೀಯ ಇನಿಂಗ್ಸ್ನಲ್ಲಿ ಕನಿಷ್ಠ 20 ಓವರ್ ಆಟವೂ ಸಾಧ್ಯವಾಗದೆ ಇದ್ದರೆ ಆಗ ಮೀಸಲು ದಿನವನ್ನು ಬಳಕೆ ಮಾಡಲಾಗುತ್ತದೆ. ಪಂದ್ಯ ಯಾವ ಹಂತದಲ್ಲಿ ಸ್ಥಗಿತಗೊಂಡಿರುತ್ತದೆಯೋ ಅಲ್ಲಿಂದಲೇ ಸೋಮವಾರದಂದು ಪಂದ್ಯ ಮುಂದುವರಿಯಲಿದೆ.
ಮೀಸಲು ದಿನವೂ ಪಂದ್ಯ ರದ್ದಾದರೆ
ಒಂದು ವೇಳೆ ಭಾನುವಾರ ಮಳೆಯಿಂದ ಪಂದ್ಯ ಮೀಸಲು ದಿನಕ್ಕೆ ಮುಂದುವರಿದರೆ, ಮೀಸಲು ದಿನವೂ ಪಂದ್ಯ ಸಂಪೂರ್ಣವಾಗಿ ನಡೆಯದೇ ಹೋಗಿ ಫಲಿತಾಂಶ ಬಾರದಿದ್ದರೆ ಆಗ ಎರಡೂ ತಂಡಗಳನ್ನು ಜಂಟಿ ವಿಜೇತರನ್ನಾಗಿ ಘೋಷಿಸಲಾಗುತ್ತದೆ. ಹೀಗಾದರೆ ಹಾಲಿ ಚಾಂಪಿಯನ್ ಲಂಕಾ ಪ್ರಶಸ್ತಿಯನ್ನು ತನ್ನ ಬಳಿಯೇ ಉಳಿಸಿಕೊಂಡ ಹಿರಿಮೆಗೆ ಪಾತ್ರವಾಗಲಿದೆ. ಕಳೆದ ಬಾರಿ ಯುಎಇಯಲ್ಲಿ ನಡೆದ ಫೈನಲ್ನಲ್ಲಿ ಪಾಕಿಸ್ತಾನವನ್ನು ಮಣಿಸಿ ಕಪ್ ಗೆದ್ದ ಸಾಧನೆ ಮಾಡಿತ್ತು.
The Battle for the Asian Crown! 🏆👑
— Sri Lanka Cricket 🇱🇰 (@OfficialSLC) September 14, 2023
Join us on September 17th at RPICS, Colombo for an epic showdown!
Secure your tickets today – https://t.co/9abfJNKjPZ#AsiaCup2023 #SLvIND pic.twitter.com/jsYVGgVkLM
5 ಬದಲಾವಣೆ
ಬಾಂಗ್ಲಾದೇಶ ವಿರುದ್ಧದ ಔಪಚಾರಿಕ ಪಂದ್ಯಕ್ಕೆ 5 ಬದಲಾವಣೆ ಮಾಡಿದ್ದ ಭಾರತ ತಂಡ ಈ ಪಂದ್ಯಕ್ಕೆ ಮತ್ತೆ ಬದಲಾವಣೆ ಮಾಡಲಿದೆ. ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ, ಉಪನಾಯಕ ಹಾರ್ದಿಕ್ ಪಾಂಡ್ಯ, ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಮ್ಮದ್ ಸಿರಾಜ್ ಮತ್ತು ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ. ಹೀಗಾಗಿ ಇವರ ಸ್ಥಾನದಲ್ಲಿ ಆಡಿದ ಆಟಗಾರರು ಜಾಗ ಬಿಡಬೇಕಿದೆ.
ಇದನ್ನೂ ಓದಿ Asia Cup 2023 Final: ಲಂಕಾ-ಭಾರತ ಫೈನಲ್ ಪಂದ್ಯಕ್ಕೆ ಮಳೆ ಭೀತಿ; ಮೀಸಲು ದಿನ ಇದೆಯೇ?
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ,,ಕೆ.ಎಲ್ ರಾಹುಲ್(ವಿಕೆಟ್ ಕೀಪರ್),ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್.
ಶ್ರೀಲಂಕಾ: ದಸುನ್ ಶಾನಕ (ನಾಯಕ), ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್ (ಉಪನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದುನಿತ್ ವೆಲ್ಲಲಗೆ, ಮಥೀಶ ಪತಿರಾಣ, ಕಸುನ್ ರಜಿತ, ದುಶಾನ್ ಹೇಮಂತ.