ತರೂಬಾ (ವೆಸ್ಟ್ ಇಂಡೀಸ್): ಇಲ್ಲಿನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ಆಗಸ್ಟ್ 3ರಂದು ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಐಸಿಸಿ ಎರಡೂ ತಂಡಗಳಿಗೆ ದಂಡ ವಿಧಿಸಿದೆ ಮೊದಲ ಟಿ 20ಐ ಮುಖಾಮುಖಿಯಲ್ಲಿ ಎರಡೂ ತಂಡಗಳು ತಮ್ಮ ಬೌಲಿಂಗ್ ಇನ್ನಿಂಗ್ಸ್ನಲ್ಲಿ ಕನಿಷ್ಠ ಓವರ್ ರೇಟ್ ಕಾಪಾಡಿಕೊಂಡಿದ್ದವು.
ಭಾರತವು ತನ್ನ ಬೌಲಿಂಗ್ ಇನಿಂಗ್ಸ್ನ್ಲಿ ಒಂದು ಓವರ್ ಕಡಿಮೆ ಮಾಡಿತ್ತು. ಇದರಿಂದಾಗಿ ಹಾರ್ದಿಕ್ ಪಾಂಡ್ಯ ಬಳಗ ಶುಲ್ಕದ ಶೇಕಡಾ 5ರಷ್ಟು ಕಡಿಮೆ ದಂಡ ವಿಧಿಸಲಾಯಿತು. ಮತ್ತೊಂದೆಡೆ ವೆಸ್ಟ್ ಇಂಡೀಸ್ ಎರಡು ಓವರ್ಗಳ ಕೊರತೆಯನ್ನು ಅನುಭವಿಸಿತು. ಇದು ತಮ್ಮ ಆಟಗಾರರಿಗೆ ಪಂದ್ಯದ ಶುಲ್ಕದಲ್ಲಿ ಶೇಕಡಾ ಹತ್ತರಷ್ಟು ದಂಡ ವಿಧಿಸಲಾಗಿತ್ತು.
ಕನಿಷ್ಠ ಓವರ್ ರೇಟ್ ತಪ್ಪುಗಳಿಗೆ ಸಂಬಂಧಿಸಿದ ಆಟಗಾರರು ಮತ್ತು ಆಟಗಾರರ ಸಹಾಯಕ ಸಿಬ್ಬಂದಿಗೆ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ಗೆ ಅನುಗುಣವಾಗಿ ದಂಡ ವಿಧಿಸಲಾಗಿದೆ. ಕಾನೂನಿನ ಪ್ರಕಾರ, ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲವಾದ ಪ್ರತಿ ಓವರ್ಗೆ ಆಟಗಾರರಿಗೆ ಪಂದ್ಯದ ಶುಲ್ಕದ ಶೇಕಡಾ 5ರಷ್ಟು ದಂಡ ವಿಧಿಸಲಾಗುತ್ತದೆ. ಇದು ಪಂದ್ಯದ ಶುಲ್ಕದ ಶೇಕಡಾ 50ರ ಮಿತಿಗೆ ಒಳಪಟ್ಟಿರುತ್ತದೆ.
ವೆಸ್ಟ್ ಇಂಡೀಸ್ ನಾಯಕ ರೋವ್ಮನ್ ಪೊವೆಲ್ ಮತ್ತು ಭಾರತದ ನಾಯಕ ಹಾರ್ದಿಕ್ ಪಾಂಡ್ಯ ಇಬ್ಬರೂ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಹೆಚ್ಚುವರಿ ವಿಚಾರಣೆಯ ಅಗತ್ಯವಿಲ್ಲ. ಆನ್ ಫೀಲ್ಡ್ ಅಂಪೈರ್ ಗಳಾದ ಗ್ರೆಗೊರಿ ಬ್ರಾಥ್ ವೈಟ್ ಮತ್ತು ಪ್ಯಾಟ್ರಿಕ್ ಗಸ್ಟರ್ಡ್, ಮೂರನೇ ಅಂಪೈರ್ ನಿಗೆಲ್ ಡುಗಿಡ್ ಮತ್ತು ನಾಲ್ಕನೇ ಅಂಪೈರ್ ಲೆಸ್ಲಿ ರೀಫರ್ ಐಸಿಸಿಗೆ ವರದಿ ಮಾಡಿದೆ.
ಇದನ್ನೂ ಓದಿ : RCB Team : ಆರ್ಸಿಬಿ ಅಭಿಮಾನಿಗಳಿಗೆ ಡಬಲ್ ಖುಷಿ; ತಂಡಕ್ಕೆ ಮತ್ತೆ ಸೇರ್ಪಡೆಯಾಗುತ್ತಾರೆ ಎಬಿಡಿ!
150 ರನ್ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು. ತರೂಬಾದಲ್ಲಿ ನಡೆದ ಗೆಲುವಿನೊಂದಿಗೆ ಆತಿಥೇಯರು ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರು. ಉಳಿದ ಪಂದ್ಯಗಳು ಗಯಾನಾ ಮತ್ತು ಫ್ಲೋರಿಡಾದಲ್ಲಿ ನಡೆಯಲಿವೆ.
ಸೋಲಿಗೆ ಕಾರಣ ತಿಳಿಸಿದ ಪಾಂಡ್ಯ
ಗುರುವಾರ ರಾತ್ರಿ ನಡೆದ ವೆಸ್ಟ್ ಇಂಡೀಸ್(IND vs WI T20) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಕೇವಲ ನಾಲ್ಕು ರನ್ ಅಂತರದಿಂದ ಸೋಲು ಕಂಡಿದೆ. ತಂಡದ ಸೋಲಿಗೆ ನಾಯಕ ಹಾರ್ದಿಕ್(Hardik Pandya) ಪಾಂಡ್ಯ ಪ್ರಮುಖ ಕಾರಣವನ್ನು ತಿಳಿಸಿದ್ದಾರೆ.
ಬ್ರಿಯಾನ್ ಲಾರ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ನಿಕೋಲಾಸ್ ಪೂರಣ್(41) ಮತ್ತು ನಾಯಕ ರೋಮನ್ ಪೊವೆಲ್(48) ಅವರ ತಾಳ್ಮೆಯುತ ಆಟದಿಂದಾಗಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟಿಗೆ 149 ರನ್ ಬಾರಿಸಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ ನಾಟಕೀಯ ಕುಸಿತ ಕಂಡು ತನ್ನ ಪಾಲಿನ ಆಟದಲ್ಲಿ 9 ವಿಕೆಟ್ ಕಳೆದುಕೊಂಡು 145 ರನ್ ಗಳಿಸಿ ಸನ್ಣ ಅಂತರದಿಂದ ಸೋಲು ಕಂಡಿತು.
ಸೋಲಿನ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, ನಮ್ಮ ಬೌಲಿಂಗ್ ವಿಭಾಗ ಉತ್ತಮವಾದ ಪ್ರದರ್ಶನ ತೋರಿದೆ. ಆದರೆ ಬ್ಯಾಟಿಂಗ್ನಲ್ಲಿ ವಿಫಲವಾದೆವು. ಸತತ ವಿಕೆಟ್‌ಗಳನ್ನು ಕಳೆದುಕೊಂಡಾಗ ರನ್ ಚೇಸ್ ಮಾಡುವುದು ಕಷ್ಟವಾಗುತ್ತದೆ. ಒಟ್ಟಾರೆ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಕಾರಣ. ಒಂದು ಸೋಲಿನಿಂದ ತಂಡದ ಸಾಮರ್ಥ್ಯವನ್ನು ಅಳೆಯುವುದು ಸರಿಯಲ್ಲ. ಇನ್ನೂ ಕೂಡ ನಾಲ್ಕು ಪಂದ್ಯಗಳು ಬಾಕಿ ಉಳಿದಿವೆ ಇದರಲ್ಲಿ ತಪ್ಪನ್ನು ಸರಿಪಡಿಸಿ ಗೆಲುವಿನ ಹಳಿ ಏರುವ ವಿಶ್ವಾಸ ನಮ್ಮ ತಂಡಕ್ಕಿದೆ ಎಂದು ಪಾಂಡ್ಯ ಹೇಳಿದರು.