ind vs wi : ಗೆಲುವಿನ ಸಂಭ್ರಮದ ನಡುವೆ ವಿಂಡೀಸ್ ತಂಡಕ್ಕೆ ಫೈನ್​ ಹಾಕಿದ ಐಸಿಸಿ! - Vistara News

ಕ್ರಿಕೆಟ್

ind vs wi : ಗೆಲುವಿನ ಸಂಭ್ರಮದ ನಡುವೆ ವಿಂಡೀಸ್ ತಂಡಕ್ಕೆ ಫೈನ್​ ಹಾಕಿದ ಐಸಿಸಿ!

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ (ind vs wi) ಮೊದಲ ಟಿ20 ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕೆ ಐಸಿಸಿ ದಂಡ ವಿಧಿಸಲಾಗಿದೆ.

VISTARANEWS.COM


on

ind vs wi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತರೂಬಾ (ವೆಸ್ಟ್​ ಇಂಡೀಸ್​): ಇಲ್ಲಿನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ಆಗಸ್ಟ್ 3ರಂದು ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಐಸಿಸಿ ಎರಡೂ ತಂಡಗಳಿಗೆ ದಂಡ ವಿಧಿಸಿದೆ ಮೊದಲ ಟಿ 20ಐ ಮುಖಾಮುಖಿಯಲ್ಲಿ ಎರಡೂ ತಂಡಗಳು ತಮ್ಮ ಬೌಲಿಂಗ್ ಇನ್ನಿಂಗ್ಸ್​ನಲ್ಲಿ ಕನಿಷ್ಠ ಓವರ್ ರೇಟ್​ ಕಾಪಾಡಿಕೊಂಡಿದ್ದವು.

ಭಾರತವು ತನ್ನ ಬೌಲಿಂಗ್ ಇನಿಂಗ್ಸ್​ನ್ಲಿ ಒಂದು ಓವರ್ ಕಡಿಮೆ ಮಾಡಿತ್ತು. ಇದರಿಂದಾಗಿ ಹಾರ್ದಿಕ್​ ಪಾಂಡ್ಯ ಬಳಗ ಶುಲ್ಕದ ಶೇಕಡಾ 5ರಷ್ಟು ಕಡಿಮೆ ದಂಡ ವಿಧಿಸಲಾಯಿತು. ಮತ್ತೊಂದೆಡೆ ವೆಸ್ಟ್ ಇಂಡೀಸ್ ಎರಡು ಓವರ್​ಗಳ ಕೊರತೆಯನ್ನು ಅನುಭವಿಸಿತು. ಇದು ತಮ್ಮ ಆಟಗಾರರಿಗೆ ಪಂದ್ಯದ ಶುಲ್ಕದಲ್ಲಿ ಶೇಕಡಾ ಹತ್ತರಷ್ಟು ದಂಡ ವಿಧಿಸಲಾಗಿತ್ತು.

ಕನಿಷ್ಠ ಓವರ್ ರೇಟ್ ತಪ್ಪುಗಳಿಗೆ ಸಂಬಂಧಿಸಿದ ಆಟಗಾರರು ಮತ್ತು ಆಟಗಾರರ ಸಹಾಯಕ ಸಿಬ್ಬಂದಿಗೆ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ಗೆ ಅನುಗುಣವಾಗಿ ದಂಡ ವಿಧಿಸಲಾಗಿದೆ. ಕಾನೂನಿನ ಪ್ರಕಾರ, ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲವಾದ ಪ್ರತಿ ಓವರ್​ಗೆ ಆಟಗಾರರಿಗೆ ಪಂದ್ಯದ ಶುಲ್ಕದ ಶೇಕಡಾ 5ರಷ್ಟು ದಂಡ ವಿಧಿಸಲಾಗುತ್ತದೆ. ಇದು ಪಂದ್ಯದ ಶುಲ್ಕದ ಶೇಕಡಾ 50ರ ಮಿತಿಗೆ ಒಳಪಟ್ಟಿರುತ್ತದೆ.

ವೆಸ್ಟ್ ಇಂಡೀಸ್ ನಾಯಕ ರೋವ್ಮನ್ ಪೊವೆಲ್ ಮತ್ತು ಭಾರತದ ನಾಯಕ ಹಾರ್ದಿಕ್ ಪಾಂಡ್ಯ ಇಬ್ಬರೂ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಹೆಚ್ಚುವರಿ ವಿಚಾರಣೆಯ ಅಗತ್ಯವಿಲ್ಲ. ಆನ್ ಫೀಲ್ಡ್ ಅಂಪೈರ್ ಗಳಾದ ಗ್ರೆಗೊರಿ ಬ್ರಾಥ್ ವೈಟ್ ಮತ್ತು ಪ್ಯಾಟ್ರಿಕ್ ಗಸ್ಟರ್ಡ್, ಮೂರನೇ ಅಂಪೈರ್ ನಿಗೆಲ್ ಡುಗಿಡ್ ಮತ್ತು ನಾಲ್ಕನೇ ಅಂಪೈರ್ ಲೆಸ್ಲಿ ರೀಫರ್ ಐಸಿಸಿಗೆ ವರದಿ ಮಾಡಿದೆ.

ಇದನ್ನೂ ಓದಿ : RCB Team : ಆರ್​ಸಿಬಿ ಅಭಿಮಾನಿಗಳಿಗೆ ಡಬಲ್ ಖುಷಿ; ತಂಡಕ್ಕೆ ಮತ್ತೆ ಸೇರ್ಪಡೆಯಾಗುತ್ತಾರೆ ಎಬಿಡಿ!

150 ರನ್​ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು. ತರೂಬಾದಲ್ಲಿ ನಡೆದ ಗೆಲುವಿನೊಂದಿಗೆ ಆತಿಥೇಯರು ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರು. ಉಳಿದ ಪಂದ್ಯಗಳು ಗಯಾನಾ ಮತ್ತು ಫ್ಲೋರಿಡಾದಲ್ಲಿ ನಡೆಯಲಿವೆ.

ಸೋಲಿಗೆ ಕಾರಣ ತಿಳಿಸಿದ ಪಾಂಡ್ಯ

ಗುರುವಾರ ರಾತ್ರಿ ನಡೆದ ವೆಸ್ಟ್​ ಇಂಡೀಸ್(IND vs WI T20)​ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಕೇವಲ ನಾಲ್ಕು ರನ್​ ಅಂತರದಿಂದ ಸೋಲು ಕಂಡಿದೆ. ತಂಡದ ಸೋಲಿಗೆ ನಾಯಕ ಹಾರ್ದಿಕ್​(Hardik Pandya) ಪಾಂಡ್ಯ ಪ್ರಮುಖ ಕಾರಣವನ್ನು ತಿಳಿಸಿದ್ದಾರೆ.

ಬ್ರಿಯಾನ್​ ಲಾರ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ನಿಕೋಲಾಸ್‌ ಪೂರಣ್‌(41) ಮತ್ತು ನಾಯಕ ರೋಮನ್‌ ಪೊವೆಲ್‌(48) ಅವರ ತಾಳ್ಮೆಯುತ ಆಟದಿಂದಾಗಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟಿಗೆ 149 ರನ್​ ಬಾರಿಸಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ ನಾಟಕೀಯ ಕುಸಿತ ಕಂಡು ತನ್ನ ಪಾಲಿನ ಆಟದಲ್ಲಿ 9 ವಿಕೆಟ್​ ಕಳೆದುಕೊಂಡು 145 ರನ್​ ಗಳಿಸಿ ಸನ್ಣ ಅಂತರದಿಂದ ಸೋಲು ಕಂಡಿತು.

ಸೋಲಿನ ಬಳಿಕ ಮಾತನಾಡಿದ ನಾಯಕ ಹಾರ್ದಿಕ್​ ಪಾಂಡ್ಯ, ನಮ್ಮ ಬೌಲಿಂಗ್​ ವಿಭಾಗ ಉತ್ತಮವಾದ ಪ್ರದರ್ಶನ ತೋರಿದೆ. ಆದರೆ ಬ್ಯಾಟಿಂಗ್​ನಲ್ಲಿ ವಿಫಲವಾದೆವು. ಸತತ ವಿಕೆಟ್‌ಗಳನ್ನು ಕಳೆದುಕೊಂಡಾಗ ರನ್‌ ಚೇಸ್‌ ಮಾಡುವುದು ಕಷ್ಟವಾಗುತ್ತದೆ. ಒಟ್ಟಾರೆ ಸೋಲಿಗೆ ಬ್ಯಾಟಿಂಗ್​ ವೈಫಲ್ಯವೇ ಕಾರಣ. ಒಂದು ಸೋಲಿನಿಂದ ತಂಡದ ಸಾಮರ್ಥ್ಯವನ್ನು ಅಳೆಯುವುದು ಸರಿಯಲ್ಲ. ಇನ್ನೂ ಕೂಡ ನಾಲ್ಕು ಪಂದ್ಯಗಳು ಬಾಕಿ ಉಳಿದಿವೆ ಇದರಲ್ಲಿ ತಪ್ಪನ್ನು ಸರಿಪಡಿಸಿ ಗೆಲುವಿನ ಹಳಿ ಏರುವ ವಿಶ್ವಾಸ ನಮ್ಮ ತಂಡಕ್ಕಿದೆ ಎಂದು ಪಾಂಡ್ಯ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

USA vs CAN: ಆರನ್ ಜೋನ್ಸ್ ಪ್ರಚಂಡ ಬ್ಯಾಟಿಂಗ್​; ಗೆಲುವಿನ ಶುಭಾರಂಭ ಕಂಡ ಅಮೆರಿಕ

USA vs CAN: ಭಾನುವಾರ ನಡೆದ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಉದ್ಘಾಟನ ಪಂದ್ಯದಲ್ಲಿಕೆನಡಾ ವಿರುದ್ಧ ಅಮೆರಿಕ(USA vs CAN) 7 ವಿಕೆಟ್​ಗಳ ಗೆಲುವು ಸಾಧಿಸಿತು.

VISTARANEWS.COM


on

USA vs CAN
Koo

ನ್ಯೂಯಾರ್ಕ್​: ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಅಮೆರಿಕ(USA vs CAN) ಗೆಲುವಿನ ಖಾತೆ ತೆರೆದಿದೆ. ಭಾನುವಾರ ನಡೆದ ಬೃಹತ್​ ಮೊತ್ತದ ಮೇಲಾಟದಲ್ಲಿ ಕೆನಡಾ ವಿರುದ್ಧ 7 ವಿಕೆಟ್​ಗಳ ಗೆಲುವು ಸಾಧಿಸಿ ಮೆರೆದಾಡಿದೆ. ಜತೆಗೆ ‘ಎ’ ಗುಂಪಿನಲ್ಲಿ ಅಂಕದ ಖಾತೆ ತೆರೆದಿದೆ.

ಇಲ್ಲಿನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ, ಡಲ್ಲಾಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಕೆನಡಾ ತಂಡ ನವನೀತ್ ಧಲಿವಾಲ್(61) ಮತ್ತು ನಿಕೋಲಸ್ ಕಿರ್ಟನ್(51) ಅರ್ಧಶತಕದ ಬ್ಯಾಟಿಂಗ್​ ನೆರವಿನಿಂದ 5 ವಿಕೆಟ್​ಗೆ 194 ರನ್​ ಬಾರಿಸಿತು. ಜವಾಬಿತ್ತ ಅಮೆರಿಕ ಈ ಬೃಹತ್​ ಮೊತ್ತವನ್ನು 17.4 ಓವರ್​ಗಳಲ್ಲಿ ಕೇವಲ 3 ವಿಕೆಟ್​ ಕಳೆದುಕೊಂಡು 197 ರನ್​ ಬಾರಿಸಿ ಅಮೋಘ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಯುಎಸ್​ಎ ಗರಿಷ್ಠ ಮೊತ್ತ ಚೇಸ್​ ಮಾಡಿದ ದಾಖಲೆ ಬರೆಯಿತು. ಇದಕ್ಕೂ ಮುನ್ನ 168 ರನ್​ಗಳನ್ನು ಚೇಸ್ ಮಾಡಿದ್ದು ತಂಡದ ಅತ್ಯುತ್ತಮ ಸಾಧನೆಯಾಗಿತ್ತು. ಇದೀಗ ಟಿ20 ವಿಶ್ವಕಪ್​ನ ಚೊಚ್ಚಲ ಪಂದ್ಯದಲ್ಲೇ ಐತಿಹಾಸಿಕ ಗೆಲುವು ದಾಖಲಿಸಿದೆ.

ಚೇಸಿಂಗ್​ ವೇಳೆ ಅಮೆರಿಕ ಆರಂಭಿಕ ಆಘಾತ ಎದುರಿಸಿತು. ತಂಡ ಖಾತೆ ತೆರೆಯುವ ಮುನ್ನವೇ ಸ್ಟೀವನ್ ಟೇಲರ್(0) ಶೂನ್ಯಕ್ಕೆ ವಿಕೆಟ್​ ಕೈಚೆಲ್ಲಿದರು. 42 ರನ್​ ಒಟ್ಟುಗೂಡುವಷ್ಟರಲ್ಲಿ ಮೊನಾಂಕ್ ಪಟೇಲ್(16) ವಿಕೆಟ್​ ಕೂಡ ಬಿತ್ತು. ಈ ವೇಳೆ ಜತೆಗೂಡಿದ ಆಂಡ್ರೀಸ್ ಗೌಸ್ ಮತ್ತು ಆರನ್ ಜೋನ್ಸ್ ಬಿರುಸಿನ ಬ್ಯಾಟಿಂಗ್​ ಮೂಲಕ ಅರ್ಧಶತಕ ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಉತ್ತಮ ಹಿಡಿತ ಸಾಧಿಸಿದ್ದ ಕೆನಡಾ ಬೌಲರ್​ಗಳು ಗೌಸ್ ಮತ್ತು ಜೋನ್ಸ್ ಬ್ಯಾಟಿಂಗ್​ ಆರ್ಭಟದ ಮುಂದೆ ಸಂಪೂರ್ಣ ಲಯ ಕಳೆದುಕೊಂಡರು.

ಉಭಯ ಆಟಗಾರರು ಸೇರಿಕೊಂಡು ಸಿಕ್ಸರ್​ ಮತ್ತು ಬೌಂಡರಿಗಳ ಸುರಿಮಳೆಗೈದರು. ಕಿಕ್ಕಿರಿದು ನೆರೆದ ತವರಿನ ವೀಕ್ಷಕರಿಗೆ ಭರಪೂರ ರಂಜನೆ ಲಭಿಸಿತು. ಈ ಜೋಡಿ ಮೂರನೇ ವಿಕೆಟ್​ಗೆ ಬರೋಬ್ಬರಿ 131 ರನ್​ಗಳ ಅಮೂಲ್ಯ ಜತೆಯಾಟ ನಡೆಸಿತು. ಆಂಡ್ರೀಸ್ ಗೌಸ್ 46 ಎಸೆತಗಳಿಂದ 7 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 65 ರನ್​ ಬಾರಿಸಿದರು. ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ಆರನ್ ಜೋನ್ಸ್ 40 ಎಸೆತಗಳಿಂದ ಬರೋಬ್ಬರಿ 10 ಸಿಕ್ಸರ್​ ಮತ್ತು 4 ಬೌಂಡರಿ ಸಿಡಿಸಿ ಅಜೇಯ 94 ರನ್​ ಬಾರಿಸಿದರು. ಗೆಲುವಿಗೆ ನಾಲ್ಕು ರನ್​ ಬೇಕಿದ್ದಾಗ ಸಿಕ್ಸರ್​ ಬಡಿದಟ್ಟಿ ತಂಡಕ್ಕೆ ಗೆಲುವು ತಂದುಕೊಟ್ಟುರು. ನ್ಯೂಜಿಲ್ಯಾಂಡ್​ ತಂಡ ತೊರೆದು ಅಮೆರಿಕ ಪರ ಆಡುತ್ತಿರುವ ಕೋರಿ ಆ್ಯಂಡರ್ಸನ್​ ಅಜೇಯ 3 ರನ್​ ಬಾರಿಸಿದರು. ಬೌಲಿಂಗ್​ನಲ್ಲಿ ಒಂದು ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಕೆನಡಾ ಪರ ನವನೀತ್ ಧಲಿವಾಲ್(61) ಮತ್ತು ನಿಕೋಲಸ್ ಕಿರ್ಟನ್(51) ಅರ್ಧಶತಕ ಬಾರಿಸಿ ಮಿಂಚಿದರು. ಉಳಿದಂತೆ ಶ್ರೇಯಸ್ ಮೊವ್ವ(32) ಆರಂಭಿಕ ಆಟಗಾರ ಆರನ್ ಜಾನ್ಸನ್(23) ರನ್​ ಬಾರಿಸಿದರು. ಬೃಹತ್​ ಮೊತ್ತ ಪೇರಿಸಿದರು ಕೂಡ ಬೌಲರ್​ಗಳಿಂದ ಸಂಘಟಿತ ಪ್ರದರ್ಶನ ಕಂಡು ಬಾರದ ಕಾರಣ ಪಂದ್ಯವನ್ನು ಕಳೆದುಕೊಂಡರು.

Continue Reading

ಕ್ರೀಡೆ

Rohit Sharma: ರೋಹಿತ್​ ಅಪ್ಪಿಕೊಳ್ಳಲು ಯತ್ನಿಸಿದ ಅಭಿಮಾನಿಯನ್ನು ಹೆಡೆಮುರಿ ಕಟ್ಟಿದ ನ್ಯೂಯಾರ್ಕ್ ಪೊಲೀಸ್; ವಿಡಿಯೊ ವೈರಲ್​

Rohit Sharma: ಬೇರೆ ದೇಶದಲ್ಲಿ ಈ ರೀತಿ ಮೈದಾನಕ್ಕೆ ನುಗ್ಗಿದರೆ ಎಚ್ಚರಿಕೆ ನೀಡಿ ಕಳಿಸಲಾಗುತ್ತದೆ. ಆದರೆ ಅಮೆರಿಕದಲ್ಲಿ ಮಾತ್ರ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಯಾರು ಏನೇ ಹೇಳಿದರು ಕೂಡ ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹಂಚಿಕೊಂಡು ಜಾಗ್ರತೆ ವಹಿಸಿ. ಇಲ್ಲಿ ಹುಚ್ಚಾಟ ನಡೆಸಿದರೆ ಜೈಲು ಕಂಬಿ ಎಣಿಸುವುದು ನಿಶ್ಚಿತ ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

VISTARANEWS.COM


on

Rohit Sharma
Koo

ನ್ಯೂಯಾರ್ಕ್: ಬಾಂಗ್ಲಾದೇಶ(IND vs BAN) ವಿರುದ್ಧ ನಿನ್ನೆ(ಶನಿವಾರ) ನಡೆದ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಯ ಅಭ್ಯಾಸ ಪಂದ್ಯದ ವೇಳೆ ರೋಹಿತ್​ ಶರ್ಮ(Rohit Sharma) ಅವರ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ರೋಹಿತ್​ ಅವರನ್ನು ಅಪ್ಪಿಕೊಂಡಿದ್ದಾನೆ. ಈ ವೇಳೆ ನ್ಯೂಯಾರ್ಕ್​ನ ಪೊಲೀಸ್‌ ಪಡೆ ಶರವೇಗದಲ್ಲಿ ಓಡಿ ಒಂದು ಈ ಅಭಿಮಾನಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ.

ಭಾರತ ತಂಡ ಫೀಲ್ಡಿಂಗ್​ ನಡೆಸುತ್ತಿದ್ದ ವೇಳೆ ಅಭಿಮಾನಿಯೊಬ್ಬ ಟೀಮ್​ ಇಂಡಿಯಾದ ಜೆರ್ಸಿ ತೊಟ್ಟು ನೇರವಾಗಿ ಮೈದಾನಕ್ಕೆ ಓಡಿ ಬಂದು ರೋಹಿತ್​ ಅವರನ್ನು ಅಪ್ಪಿಕೊಂಡು ಕಾಲಿಗೆ ಬಿದ್ದಿದ್ದಾನೆ. ಇದೇ ವೇಳೆ ಇಲ್ಲಿನ ಪೊಲೀಸ್‌ ಪಡೆ ಆತನನ್ನು ಮೈದಾನದಲ್ಲೇ ಕೈಗೆ ಕೋಳ ಹಾಕಿ ಎಳೆದುಕೊಂಡು ಹೋಗಿದ್ದಾರೆ. ಈ ವೇಳೆ ರೋಹಿತ್​ ಮತ್ತು ಟೂರ್ನಿಯ ಸಂಘಟಕರು ಆತನಿಗೆ ಏನು ಮಾಡಬೇಡಿ ಎಂದು ಹೇಳಿದರೂ ಕೂಡ ಕೆಳದೆ 2 ಪೊಲೀಸರು ಆತನ್ನು ಉಗ್ರಮಾಮಿಯನ್ನು ಬಂಧಿಸಿದಂತೆ ಎಳೆದುಕೊಂಡು ಹೋಗಿದ್ದಾರೆ. ಈತನಿಗೆ ಜೈಲು ಶಿಕ್ಷೆ ಖಚಿತ ಎನ್ನಲಾಗಿದೆ.

ಬೇರೆ ದೇಶದಲ್ಲಿ ಈ ರೀತಿ ಮೈದಾನಕ್ಕೆ ನುಗ್ಗಿದರೆ ಎಚ್ಚರಿಕೆ ನೀಡಿ ಕಳಿಸಲಾಗುತ್ತದೆ. ಆದರೆ ಅಮೆರಿಕದಲ್ಲಿ ಮಾತ್ರ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಯಾರು ಏನೇ ಹೇಳಿದರು ಕೂಡ ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹಂಚಿಕೊಂಡು ಜಾಗ್ರತೆ ವಹಿಸಿ. ಇಲ್ಲಿ ಹುಚ್ಚಾಟ ನಡೆಸಿದರೆ ಜೈಲು ಕಂಬಿ ಎಣಿಸುವುದು ನಿಶ್ಚಿತ ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ರಿಷಭ್​ ಪಂತ್​ ಅವರ ಅರ್ಧಶತಕ ಮತ್ತು ಪಾಂಡ್ಯ ಅವರ ಅಜೇಯ 40 ರನ್​ಗಳ ನೆರವಿನಿಂದ 5 ವಿಕೆಟಿಗೆ 182 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾ 8 ವಿಕೆಟ್ ಕಳೆದುಕೊಂಡು 121 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಬಾಂಗ್ಲಾ ತಂಡ ಇದಕ್ಕೂ ಮುನ್ನ ಆಡಿದ ಅಭ್ಯಾಸ ಪಂದ್ಯದಲ್ಲಿ ಅಮೆರಿಕ ವಿರುದ್ಧವೂ ಸೋಲು ಕಂಡಿತ್ತು.

ಇದನ್ನೂ ಓದಿ IND vs BAN: ಪಾಂಡ್ಯ ಬಲಿಷ್ಠ ಹೊಡೆತಕ್ಕೆ ನೆತ್ತರು ಚೆಲ್ಲಿದ ಬಾಂಗ್ಲಾ ಬೌಲರ್; ವಿಡಿಯೊ ವೈರಲ್​

ಐಪಿಎಲ್​ನಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ವಿಫಲವಾಗಿದ್ದ ಹಾರ್ದಿಕ್​ ಪಾಂಡ್ಯ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆದಿದ ಪಾಂಡ್ಯ ಬಿರುಸಿನ ಬ್ಯಾಟಿಂಗ್​ ಮೂಲಕ ಕೇವಲ 23 ಎಸೆತಗಳಿಂದ 2 ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ ಅಜೇಯ 40 ರನ್ ಚಚ್ಚಿದರು. ಒಂದು ವಿಕೆಟ್​ ಕೂಡ ಕಿತ್ತರು.ಕಾರು ಅಪಘಾತದ ಬಳಿಕ ಮೊದಲ ಬಾರಿ ಟೀಮ್​ ಇಂಡಿಯಾ ಪರ ಆಡಿದ ರಿಷಭ್​ ಪಂತ್​ ಪ್ರಚಂಡ ಬ್ಯಾಟಿಂಗ್​ ನಡೆಸುವ ಮೂಲಕ ಗಮನಸೆಳೆದರು. ತಮ್ಮ ನೆಚ್ಚಿನ ಒನ್​ ಹ್ಯಾಂಡ್​ ಸಿಕ್ಸರ್​ ಕೂಡ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಿದ ಪಂತ್​ ಬರೋಬ್ಬರಿ 4 ಬೌಂಡರಿ ಮತ್ತು 4 ಸಿಕ್ಸರ್​ ಬಾರಿಸಿ 53 ರನ್​ ಗಳಿಸಿದರು.

Continue Reading

ಕ್ರೀಡೆ

IND vs BAN: ಪಾಂಡ್ಯ ಬಲಿಷ್ಠ ಹೊಡೆತಕ್ಕೆ ನೆತ್ತರು ಚೆಲ್ಲಿದ ಬಾಂಗ್ಲಾ ಬೌಲರ್; ವಿಡಿಯೊ ವೈರಲ್​

IND vs BAN:ಕಾರು ಅಪಘಾತದ ಬಳಿಕ ಮೊದಲ ಬಾರಿ ಟೀಮ್​ ಇಂಡಿಯಾ ಪರ ಆಡಿದ ರಿಷಭ್​ ಪಂತ್​ ಪ್ರಚಂಡ ಬ್ಯಾಟಿಂಗ್​ ನಡೆಸುವ ಮೂಲಕ ಗಮನಸೆಳೆದರು. ಮೂರನೇ ಕ್ರಮಾಂಕದಲ್ಲಿ ಆಡಿದ ಪಂತ್​ ಬರೋಬ್ಬರಿ 4 ಬೌಂಡರಿ ಮತ್ತು 4 ಸಿಕ್ಸರ್​ ಬಾರಿಸಿ 53 ರನ್​ ಗಳಿಸಿದರು.

VISTARANEWS.COM


on

IND vs BAN
Koo

ನ್ಯೂಯಾರ್ಕ್: ಶನಿವಾರ ರಾತ್ರಿ ನಡೆದ ಬಾಂಗ್ಲಾದೇಶ(IND vs BAN) ವಿರುದ್ಧದ ಟಿ20 ವಿಶ್ವಕಪ್​ ಟೂರ್ನಿಯ(ICC Mens T20 World Cup) ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ 60 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಐಪಿಎಲ್​ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ಹಾರ್ದಿಕ್​ ಪಾಂಡ್ಯ(Hardik Pandya) ಈ ಪಂದ್ಯದಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದರು. ಇದೇ ವೇಳೆ ಪಾಂಡ್ಯ ಬಾರಿಸಿದ ಪವರ್​ ಫುಲ್​ ಹೊಡೆತವೊಂದು​ ಶೋರಿಫುಲ್ ಇಸ್ಲಾಂ(Shoriful Islam) ಅವರ ಕೈಗೆ ತಾಗಿ ಗಾಯಗೊಂಡ ಘಟನೆಯೂ ಸಂಭವಿಸಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ರಿಷಭ್​ ಪಂತ್​ ಅವರ ಅರ್ಧಶತಕ ಮತ್ತು ಪಾಂಡ್ಯ ಅವರ ಅಜೇಯ 40 ರನ್​ಗಳ ನೆರವಿನಿಂದ 5 ವಿಕೆಟಿಗೆ 182 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾ 8 ವಿಕೆಟ್ ಕಳೆದುಕೊಂಡು 121 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಬಾಂಗ್ಲಾ ತಂಡ ಇದಕ್ಕೂ ಮುನ್ನ ಆಡಿದ ಅಭ್ಯಾಸ ಪಂದ್ಯದಲ್ಲಿ ಅಮೆರಿಕ ವಿರುದ್ಧವೂ ಸೋಲು ಕಂಡಿತ್ತು.

ಇದನ್ನೂ ಓದಿ T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

ಭಾರತದ ಬ್ಯಾಟಿಂಗ್​ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಸ್ಟ್ರೈಕ್​ನಲ್ಲಿದ್ದರು. ಬೌಲಿಂಗ್ ನಡೆಸುತ್ತಿದ್ದ ಶೋರಿಫುಲ್ ಇಸ್ಲಾಂ ಐದನೇ ಎಸೆತವನ್ನು ಯಾರ್ಕರ್ ಎಸೆದರು. ಈ ಎಸೆತವನ್ನು ಪಾಂಡ್ಯ ಬಲವಾಗಿ ಬೀಸಿದರು. ನೇರವಾಗಿ ಬಂದ ಚೆಂಡನ್ನು ತಡೆಯುವ ಯತ್ನದಲ್ಲಿ ಶೋರಿಫುಲ್ ಇಸ್ಲಾಂ ಅಂಗೈಗೆ ಗಾಯ ಮಾಡಿಕೊಂಡರು. ಚೆಂಡು ರಬಸವಾಗಿ ಬಂದಿದ್ದರಿಂದ ಶೋರಿಫುಲ್ ಎಡಗೈಗೆ ಗಾಯವಾಯಿತು. ಬಳಿಕ ರಕ್ತ ಸುರಿಯಲಾರಂಭಿಸಿತು. ಬೌಲರ್ ಮೈದಾನದಲ್ಲಿ ನರಳುತ್ತಿರುವುದನ್ನು ನೋಡಿದ ಫಿಸಿಯೋ ತಕ್ಷಣವೇ ಮೈದಾನಕ್ಕೆ ಬಂದು ಶೋರಿಫುಲ್ ಅವರನ್ನು ಅಲ್ಲಿಂದ ಕರೆದೊಯ್ದರು. ಮೈದಾನ ತೊರೆದ ಕಾರಣ ಕೊನೆಯ ಎಸೆತವನ್ನು ತಂಜಿಮ್ ಹಸನ್ ಬೌಲ್ ಮಾಡಿ ಓವರ್​ ಪೂರ್ತಿಗೊಳಿಸಿದರು. ಗಾಯವನ್ನು ನೋಡುವಾಗ ಶೋರಿಫುಲ್ ಲೀಗ್​ ಹಂತದ ಪಂದ್ಯವನ್ನಾಡುವುದು ಕೂಡ ಅನುಮಾನ ಎನ್ನುವಂತಿದೆ.

ಐಪಿಎಲ್​ನಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ವಿಫಲವಾಗಿದ್ದ ಹಾರ್ದಿಕ್​ ಪಾಂಡ್ಯ ಅವರನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಿದಾಗ ಹಲವರು ಆಯ್ಕೆ ಸಮಿತಿಯ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆದರೆ ಪಾಂಡ್ಯ ಅಭ್ಯಾಸ ಪಂದ್ಯದಲ್ಲಿ ಆಲ್​ರೌಂಡರ್​ ಪ್ರದರ್ಶನ ತೋರುವ ಮೂಲಕ ಆಯ್ಕೆ ಸಮಿತಿ ಮತ್ತು ತಂಡದ ವಿಶ್ವಾಸ ಹೆಚ್ಚಿಸುವಂತೆ ಮಾಡಿದ್ದಾರೆ. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆದಿದ ಪಾಂಡ್ಯ ಬಿರುಸಿನ ಬ್ಯಾಟಿಂಗ್​ ಮೂಲಕ ಕೇವಲ 23 ಎಸೆತಗಳಿಂದ 2 ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ ಅಜೇಯ 40 ರನ್ ಚಚ್ಚಿದರು. ಒಂದು ವಿಕೆಟ್​ ಕೂಡ ಕಿತ್ತರು.

ಕಾರು ಅಪಘಾತದ ಬಳಿಕ ಮೊದಲ ಬಾರಿ ಟೀಮ್​ ಇಂಡಿಯಾ ಪರ ಆಡಿದ ರಿಷಭ್​ ಪಂತ್​ ಪ್ರಚಂಡ ಬ್ಯಾಟಿಂಗ್​ ನಡೆಸುವ ಮೂಲಕ ಗಮನಸೆಳೆದರು. ತಮ್ಮ ನೆಚ್ಚಿನ ಒನ್​ ಹ್ಯಾಂಡ್​ ಸಿಕ್ಸರ್​ ಕೂಡ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಿದ ಪಂತ್​ ಬರೋಬ್ಬರಿ 4 ಬೌಂಡರಿ ಮತ್ತು 4 ಸಿಕ್ಸರ್​ ಬಾರಿಸಿ 53 ರನ್​ ಗಳಿಸಿದರು.

Continue Reading

ಕ್ರೀಡೆ

T20 World Cup : ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 60 ರನ್​ ಭರ್ಜರಿ ವಿಜಯ ಸಾಧಿಸಿದ ಭಾರತ

T20 World Cup : ಇಲ್ಲಿನ ನಸ್ಸಾವು ಕೌಂಟಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್​ಗೆ 182 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಬಾಂಗ್ಲಾದೇಶ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ಗೆ 120 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

T 20 world cup
Koo

ನ್ಯೂಯಾರ್ಕ್​​: ಟಿ20 ವಿಶ್ವ ಕಪ್​ ಅಭಿಯಾನದ (T20 World Cup) ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿದೆ. ತನ್ನ ನೆರೆಯ ದೇಶ ಬಾಂಗ್ಲಾ ವಿರುದ್ಧದ ಹಣಾಹಣಿಯಲ್ಲಿ 60 ರನ್​ಗಳ ಭರ್ಜರಿ ವಿಜಯ ತನ್ನದಾಗಿಸಿಕೊಂಡಿದೆ. ವಿಕೆಟ್​ ಕೀಪರ್​ ಬ್ಯಾಟರ್ ರಿಷಭ್​ ಪಂತ್(53 ರನ್​, 32 ಎಸೆತ)​ ಹಾಗೂ ಹಾರ್ದಿಕ್ ಪಾಂಡ್ಯ (23 ಎಸೆತಕ್ಕೆ 43 ರನ್​) ಭಾರತ ಪರ ಬ್ಯಾಟಿಂಗ್​ನಲ್ಲಿ ಮಿಂಚಿದರೆ ಬೌಲಿಂಗ್​ನಲ್ಲಿ ಅರ್ಶ್​ದೀಪ್​ ಸಿಂಗ್​ (2 ವಿಕೆಟ್) ಪಡೆದರು. ಈ ಗೆಲುವಿನೊಂದಿಗೆ ಭಾರತ ತಂಡ ತನ್ನ ವಿಶ್ವಾಸ ಪ್ರದರ್ಶಿಸಿತು.

ಇಲ್ಲಿನ ನಸ್ಸಾವು ಕೌಂಟಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್​ಗೆ 182 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಬಾಂಗ್ಲಾದೇಶ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ಗೆ 120 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ಭಾರತ ಪರ ಇನಿಂಗ್ಸ್ ಆರಂಭಿಸಲು ಅವಕಾಶ ಪಡೆದ ಸಂಜು ಸ್ಯಾಮ್ಸನ್​ ಬ್ಯಾಟಿಂಗ್​ನಲ್ಲಿ ವೈಫಲ್ಯ ಕಂಡರು. ಅವರು 1 ರನ್​ಗೆ ಔಟಾದರು. ರೋಹಿತ್ ಶರ್ಮಾ ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಇರದೇ 23 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. 59 ರನ್​ಗಳಿಗೆ 2 ವಿಕೆಟ್​ ನಷ್ಟ ಮಾಡಿಕೊಂಡ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ಆದರೆ ಬಳಿಕ ರಿಷಭ್​ ಪಂತ್​ ಹಾಗೂ ಸೂರ್ಯಕುಮಾರ್ ಯಾದವ್​ ಇನಿಂಗ್ಸ್​ ಕಟ್ಟಿದರು. ಪಂತ್ 32 ಎಸೆತಗಳಿಗೆ 4 ಸಿಕ್ಸರ್​ ಹಾಗೂ ಅಷ್ಟೇ ಸಂಖ್ಯೆಯ ಫೋರ್​ನೊಂದಿಗೆ 53 ರನ್ ಬಾರಿಸಿದರೆ ಸೂರ್ಯಕುಮಾರ್ ಯಾದವ್​​ 18 ಎಸೆತಕ್ಕೆ 4 ಫೋರ್​ ಸಮೇತ 31 ರನ್ ಕೊಡುಗೆ ಕೊಟ್ಟರು. ಹೀಗಾಗಿ ಭಾರತದ ರನ್​ 3 ವಿಕೆಟ್​ 103 ತಲುಪಿತು.

ಇದನ್ನೂ ಓದಿ: Dinesh Karthik: ಜನ್ಮದಿನದಂದೇ ಕ್ರಿಕೆಟ್‌ ಬದುಕಿಗೆ ದಿನೇಶ್‌ ಕಾರ್ತಿಕ್‌ ಭಾವುಕ ವಿದಾಯ; ಕೊಡುಗೆ ನೆನೆದ ಆರ್‌ಸಿಬಿ ಫ್ಯಾನ್ಸ್

ಶಿವಂ ದುಬೆ 14 ಎಸೆತಕ್ಕೆ 13 ರನ್ ಬಾರಿಸಿ ಔಟಾದರೆ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 24 ಎಸೆತಕ್ಕೆ 2 ಫೋರ್ ಹಾಗೂ 4 ಸಿಕ್ಸರ್ ಸಮೇತ 4 ರನ್ ಬಾರಿಸಿದರು. ಜಡೇಜ ಕೊಡುಗೆ 4 ರನ್​.

ಬಾಂಗ್ಲಾ ಬ್ಯಾಟಿಂಗ್ ವೈಫಲ್ಯ

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಬಾಂಗ್ಲಾ ದೇಶದ ಆರಂಭಿಕರು ಲಗುಬಗನೆ ವಿಕೆಟ್​ ಕಳೆದುಕೊಂಡರು. ತಂಜಿದ್​ ಹಸನ್​ 17 ರನ್ ಬಾರಿಸಿದರೆ ಸೌಮ್ಯ ಸರ್ಕಾರ್​ ಶೂನ್ಯಕ್ಕೆ ಔಟಾದರು. ಲಿಟನ್​ ದಾಸ್ 7 ರನ್ ಬಾರಿಸಿದರೆ ನಜ್ಮುಲ್ ಹೊಸೈನ್ ಕೂಡ ಸೊನ್ನೆ ಸುತ್ತಿದರು. 39 ರನ್​ಗೆ 4 ವಿಕೆಟ್ ಕಳೆದುಕೊಂಡು ಬಾಂಗ್ಲಾ ಗೆಲುವಿನ ಆಸೆ ಕೈಬಿಟ್ಟಿತು. ಬಳಿಕ ಶಕಿಬ್ ಅಲ್ ಹಸನ್​ 28 ರನ್ ಹಾಗೂ ಮಹಮ್ಮದುಲ್ಲಾ 40 ರನ್ ಬಾರಿಸುವ ಮೂಲಕ ತಂಡದ ಮರ್ಯಾದೆ ಕಾಪಾಡಿದರು. ಭಾರತ ಪರ ಬೌಲಿಂಗ್​ನಲ್ಲಿ ಅರ್ಶ್​ದೀಪ್ ಸಿಂಗ್​ ಮತ್ತು ಶಿವಂ ದುಬೆ ತಲಾ ಎರಡು ವಿಕೆಟ್ ಕಬಳಿಸಿದರು.

Continue Reading
Advertisement
Foeticide Case Foeticide another Case in Bagalkot
ಬಾಗಲಕೋಟೆ16 mins ago

Foeticide Case: ಬಾಗಲಕೋಟೆಯಲ್ಲಿ ಮತ್ತೊಂದು ಭ್ರೂಣ ಹತ್ಯೆ: ಗಾಢ ನಿದ್ರೆಯಲ್ಲಿದ್ದಾರಾ ಅಧಿಕಾರಿಗಳು?

Healthy Sandwich Spread
ಆರೋಗ್ಯ21 mins ago

Healthy Sandwich Spread: ಮನೆಯಲ್ಲೇ ಮಾಡಿ ಕಡಿಮೆ ಕ್ಯಾಲರಿಯ ಆರೋಗ್ಯಕರ ಸ್ಯಾಂಡ್‌ವಿಚ್‌ ಸ್ಪ್ರೆಡ್‌!

Taiwan Athletics Open
ಕ್ರೀಡೆ33 mins ago

Taiwan Athletics Open: ತೈವಾನ್‌ ಓಪನ್​ನಲ್ಲಿ ಚಿನ್ನ ಗೆದ್ದ ಕನ್ನಡಿಗ ಡಿ.ಪಿ. ಮನು

Assembly Election Results 2024:
ದೇಶ34 mins ago

Assembly Election Results 2024: ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ, ಸಿಕ್ಕಿಂನಲ್ಲಿ ಕ್ಲೀನ್‌ ಸ್ವೀಪ್‌ನತ್ತ SKM

Man
ಆರೋಗ್ಯ34 mins ago

Health Tips For Rainy Season: ಮಳೆಗಾಲ ಶುರುವಾಗಿದೆ, ಅನಾರೋಗ್ಯಕ್ಕೆ ತುತ್ತಾಗದಿರಲು ಈ ಸಲಹೆ ಪಾಲಿಸಿ

WhatsApp Features
ಗ್ಯಾಜೆಟ್ಸ್39 mins ago

WhatsApp Features: ವಾಟ್ಸ್ ಆ್ಯಪ್ ನಲ್ಲಿರುವ ಈ 7 ವಿಶೇಷ ಫೀಚರ್ ಗಳ ಬಗ್ಗೆ ಗೊತ್ತೇ? ನೀವೂ ಬಳಸಿ

USA vs CAN
ಕ್ರೀಡೆ58 mins ago

USA vs CAN: ಆರನ್ ಜೋನ್ಸ್ ಪ್ರಚಂಡ ಬ್ಯಾಟಿಂಗ್​; ಗೆಲುವಿನ ಶುಭಾರಂಭ ಕಂಡ ಅಮೆರಿಕ

Arvind Kejriwal
ದೇಶ1 hour ago

Arvind Kejriwal: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಇಂದು ಮತ್ತೆ ತಿಹಾರ್‌ ಜೈಲಿಗೆ

Deepika Padukone clicks selfies with fans dinner outing with family
ಬಾಲಿವುಡ್1 hour ago

Deepika Padukone: ಫ್ಯಾಮಿಲಿ ಜತೆ ಜಾಲಿ ಮಾಡುತ್ತಿರುವ ಪ್ರೆಗ್ನೆಂಟ್‌ ದೀಪಿಕಾ ಪಡುಕೋಣೆ

Rohit Sharma
ಕ್ರೀಡೆ2 hours ago

Rohit Sharma: ರೋಹಿತ್​ ಅಪ್ಪಿಕೊಳ್ಳಲು ಯತ್ನಿಸಿದ ಅಭಿಮಾನಿಯನ್ನು ಹೆಡೆಮುರಿ ಕಟ್ಟಿದ ನ್ಯೂಯಾರ್ಕ್ ಪೊಲೀಸ್; ವಿಡಿಯೊ ವೈರಲ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Liquor ban
ಬೆಂಗಳೂರು18 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ7 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು7 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 weeks ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

ಟ್ರೆಂಡಿಂಗ್‌