Site icon Vistara News

ICC World Cup : ಚಿಗುರಿದ ಆಸೆ; ಟಿ20 ವಿಶ್ವ ಕಪ್ ಗೆಲ್ಲೋದು ಭಾರತವೇ ಎಂದ ಮಾಜಿ ಕೋಚ್​

Team india

ನವದೆಹಲಿ: ಮುಂದಿನ ವರ್ಷ ಜೂನ್​ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ 2024 (ICC World Cup) ಟ್ರೋಫಿಯನ್ನು ಭಾರತವೇ ಗೆಲ್ಲುತ್ತದೆ ಎಂಬುದಾಗಿ ಭಾರತ ತಂಡದ ಮಾಜಿ ಕೋಚ್​ ರವಿ ಶಾಸ್ತ್ರಿ ಹೇಳಿದ್ದಾರೆ. ಈ ಮೂಲಕ ಅವರು ಏಕ ದಿನ ವಿಶ್ವ ಕಪ್​ನ ಸೋಲಿನ ಬೇಸರದಲ್ಲಿರುವ ಭಾರತೀಯ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದ್ದಾರೆ. ಟೀಮ್ ಇಂಡಿಯಾ ಕಪ್​ ಗೆಲ್ಲಬಲ್ಲ ಪ್ರಮುಖ ತಂಡ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ಭಾರತ ಇತ್ತೀಚೆಗೆ ತವರಿನಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತು ಮತ್ತು ಐಸಿಸಿ ಟ್ರೋಫಿಗಳ ಬರವನ್ನು ವಿಸ್ತರಿಸಿಕೊಂಡಿತು. 2013ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಕೊನೆಯ ಬಾರಿ ಐಸಿಸಿ ಟ್ರೋಫಿ ಗೆದ್ದುಕೊಂಡಿತ್ತು. ಹೀಗಾಗಿ ಆ ಬರವನ್ನು ನೀಗಿಸುವ ಅವಕಾಶವನ್ನು ಭಾರತ ಮತ್ತೊಂದು ಬಾರಿ ನಷ್ಟ ಮಾಡಿಕೊಂಡಿತ್ತು. ಈ ಭಾರತದ ಕ್ರಿಕೆಟ್​ ಅಭಿಮಾನಿಗಳಿಗೆ ಈ ಬೇಸರ ಇನ್ನೂ ಇದೆ.

2013ರಿಂದ ಭಾರತ ಎರಡು ಏಕ ದಿನ ವಿಶ್ವ ಕಪ್​ 2 ಟಿ 20 ವಿಶ್ವಕಪ್​ಗಳಲ್ಲಿ ಮತ್ತು ಒಂದು ಚಾಂಪಿಯನ್ಸ್ ಟ್ರೋಫಿಯ ನಾಕೌಟ್​ ಹಂತ ತಲುಪಿದೆ. ಆದರೆ ಪ್ರಶಸ್ತಿಯನ್ನು ಗೆಲ್ಲಲು ವಿಫಲಗೊಂಡಿತ್ತು 2021 ಮತ್ತು 2023ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಮೊದಲ ಎರಡು ಫೈನಲ್​ಗಳಲ್ಲಿ ಸೋತಿತ್ತು.

ಭಾರತ ಶೀಘ್ರದಲ್ಲೇ ವಿಶ್ವಕಪ್ ಗೆಲ್ಲುವುದನ್ನು ನಾನು ನೋಡುತ್ತಿದ್ದೇನೆ. ಇದು ಸುಲಭವಾಗಿ 50 ಓವರ್​ಗಳ ಕ್ರಿಕೆಟ್​ ಟೂರ್ನಿಯಾಗಿರದು. ಏಕೆಂದರೆ ನಾವು ಮತ್ತೆ ತಂಡವನ್ನು ಪುನರ್ನಿರ್ಮಿಸಬೇಕಾಗುತ್ತದೆ. ಆದರೆ 20 ಓವರ್​ಗಳ ಆದರೆ, ಮುಂದಿನ ವರ್ಷವೇ ಟಿ20 ವಿಶ್ವ ಕಪ್​ ಇದೆ. ಭಾರತಕ್ಕೆ ತುಂಬಾ ಗಂಭೀರ ಸವಾಲುಗಳಿವೆ. ಇದು ಆಟದ ಚಿಕ್ಕ ಸ್ವರೂಪವಾಗಿದೆ. ತಂಡದ ಗಮನ ಅದರ ಮೇಲೆ ಇಡಬೇಕಾಗುತ್ತದೆ “ಎಂದು ಶಾಸ್ತ್ರಿ ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಅದ್ಭುತ ಯಾನವಾಗಿದೆ

ಪ್ರಾಮಾಣಿಕವಾಗಿ ಹೇಳುವುದಾದರೆ. ನಾವು ಪ್ರಬಲ ತಂಡವಾಗಿದ್ದರೂ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದು ಹೊರಗಿನಿಂದ ಇನ್ನೂ ನೋವುಂಟು ಮಾಡುತ್ತದೆ. ಪಂದ್ಯಾವಳಿಯ ಮಧ್ಯದ ಹಂತದಲ್ಲಿ ಬೌಲಿಂಗ್ ಎದ್ದು ನಿಂತ ರೀತಿಯನ್ನು ನೋಡಿದರೆ, ಭಾರತ ತಂಡಕ್ಕೆ ಉತ್ತಮ, ಉತ್ತಮ ಅವಕಾಶವಿತ್ತು ಎಂದು ನಾವೆಲ್ಲರೂ ಭಾವಿಸಿದ್ದೆವು. ಆದರೆ ಎಲ್ಲವೂ ಸುಲಭವಲ್ಲ. ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ಕೂಡ ಒಂದು ವಿಶ್ವಕಪ್ ಗೆಲ್ಲಲು ಆರು ವಿಶ್ವಕಪ್ ಗಳಿಗಾಗಿ ಕಾಯಬೇಕಾಯಿತು. ನೀವು ವಿಶ್ವಕಪ್ ಗಳನ್ನು ಸುಲಭವಾಗಿ ಗೆಲ್ಲುವುದಿಲ್ಲ, ವಿಶ್ವಕಪ್ ಗೆಲ್ಲಲು ನೀವು ಆ ದಿನದಂದು ಉತ್ತಮವಾಗಿರಬೇಕು. ನೀವು ಈ ಹಿಂದೆ ಏನು ಮಾಡಿದ್ದೀರಿ ಎಂಬುದು ಲೆಕ್ಕಕ್ಕೆ ಬರುವುದಿಲ್ಲ” ಎಂದು ಶಾಸ್ತ್ರಿ ಹೇಳಿದ್ದಾರೆ.

ಇದನ್ನೂ ಓದಿ : Hardik Pandya : ಮನೆಗೆ ಬಂದೆ; ಹಾರ್ದಿಕ್ ಪಾಂಡ್ಯ ಈ ರೀತಿ ಹೇಳಿಕೆ ನೀಡಲೊಂದು ಕಾರಣವಿದೆ

ನಾಕೌಟ್ ಸುತ್ತುಗಳಲ್ಲಿ ಆಸ್ಟ್ರೇಲಿಯಾ ಬಲಿಷ್ಠವಾಗುತ್ತಾ ಬಂತು. ಮೊದಲ ಎರಡು ಪಂದ್ಯಗಳನ್ನು ಸೋತ ನಂತರವೂ ವಿಶ್ವಕಪ್ ಗೆಲ್ಲುವ ಹಾದಿಗೆ ಮರಳಿದತು ಎಂದು ಶಾಸ್ತ್ರಿ ಒತ್ತಿ ಹೇಳಿದರು.

“ಫೈನಲ್​ನಲ್ಲಿ ತಂಡ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಪಂದ್ಯಾವಳಿ ಪ್ರಾರಂಭವಾಗುವ ಮೊದಲೇ, ಏನಾಗುತ್ತದೆ ಎಂದು ನಮಗೆ ತಿಳಿದಿತ್ತು. ಅಗ್ರ ನಾಲ್ಕು ತಂಡಗಳು ಸೆಮಿಫೈನಲ್​ಗೆ ಬರುತ್ತವೆ. ಬಳಿಕ ಫೈನಲ್ ಎಂದುಕೊಂಡಿರುತ್ತೇವೆ. ಆದರೆ, ಆಸ್ಟ್ರೇಲಿಯಾ ಅದ್ಭುತ ಪ್ರದರ್ಶನ ನೀಡಿತು. ಅವರು ಮೊದಲ ಎರಡು ಪಂದ್ಯಗಳನ್ನು ಕಳೆದುಕೊಂಡರು. ಆದರೆ ಬಳಿಕ ಕಲಿತುಕೊಂಡರು ಎಂದು ಶಾಸ್ತ್ರಿ ಹೇಳಿಕೊಂಡಿದ್ದಾರೆ.

ವಿಶ್ವ ಕಪ್​ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಭಾರತ 2-0 ಮುನ್ನಡೆಯನ್ನು ಪಡೆದುಕೊಂಡಿದೆ.

Exit mobile version