Site icon Vistara News

ind vs eng : ಎರಡನೇ ಟೆಸ್ಟ್​ಗೆ ನಾಲ್ಕು ಬಲಿಷ್ಠ ಆಟಗಾರರೇ ಇಲ್ಲ, ಭಾರತ ತಂಡ ಗೆಲ್ಲುವುದು ಹೇಗೆ?

Team India

ಬೆಂಗಳೂರು: ಭಾರತ ಕ್ರಿಕೆಟ್​ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ (ind vs eng) 28 ಸೋಲಿಗೆ ಒಳಗಾಗಿದೆ. 198 ರನ್​ಗಳ ಮುನ್ನಡೆಯನ್ನು ಪಡೆದುಕೊಂಡಿದ್ದ ಹೊರತಾಗಿಯೂ ಎರಡನೇ ಇನಿಂಗ್ಸ್​ನಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯದಿಂದಾಗಿ ಭಾರತ ತಂಡ ಮುಖಭಂಗ ಅನುಭವಿಸಿದೆ. ಭಾರತ ತಂಡಕ್ಕೆ ಸರಣಿಯಲ್ಲಿ ಇನ್ನು ನಾಲ್ಕು ಪಂದ್ಯಗಳು ಬಾಕಿ ಇವೆ. ಹೀಗಾಗಿ ಸರಣಿ ಗೆಲ್ಲಬೇಕಾದರೆ ಅದರಲ್ಲಿ ಕನಿಷ್ಠ ಪಕ್ಷ ಮೂರು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಆದರೆ, ಭಾರತ ತಂಡಕ್ಕೆ ಸೋಲಿನ ನಡುವೆ ಇನ್ನೊಂದು ಆಘಾತಕಾರಿ ಸುದ್ದಿ ಬಂದಿದೆ. ಮುಂದಿನದ ಪಂದ್ಯದಲ್ಲಿ ಭಾರತ ತಂಡದಲ್ಲಿ ಪ್ರಮುಖ ನಾಲ್ವರು ಆಟಗಾರರು ಇರುವುದಿಲ್ಲ.

ಮೊದಲ ಇನಿಂಗ್ಸ್​ನಲ್ಲಿ 87 ರನ್​ ಗಳಿಸುವ ಜತೆಗೆ ಪ್ರಮುಖ ಮೂರು ವಿಕೆಟ್ ಉರುಳಿಸಿದ್ದ ಆಲ್​ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡಿದ್ದಾರೆ. ಅವರು ಮುಂದಿನ ಪಂದ್ಯಕ್ಕೆ ಲಭ್ಯರಿಲ್ಲ. ಅವರು ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಇದೇ ವೇಳೆ ಕೆ. ಎಲ್​ ರಾಹುಲ್ ಕೂಡ ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರಕ್ಕೆ ಉಳಿದಿದ್ದಾರೆ. ಇಷ್ಟಕ್ಕೆ ಮುಗಿದಿಲ್ಲ. ಭಾರತ ತಂಡ ಇನ್ನೂ ಇಬ್ಬರು ಪ್ರಮುಖ ಆಟಗಾರರ ಸೇವೆಯನ್ನು ಕಳೆದುಕೊಂಡಿದ್ದಾರೆ. ಅವರೇ ವಿರಾಟ್​ ಕೊಹ್ಲಿ ಹಾಗೂ ಮೊಹಮ್ಮದ್ ಶಮಿ. ಇವರಿಬ್ಬರೂ ಸೇರಿದಂತೆ ಒಟ್ಟು ನಾಲ್ಕು ಆಟಗಾರರು ಮುಂದಿನ ಪಂದ್ಯಕ್ಕೆ ಲಭ್ಯರಿಲ್ಲ. ಇದರಿಂದ ಭಾರತಕ್ಕೆ ದೊಡ್ಡ ಹಿನ್ನಡೆಯಾಗುವುದು ಖಚಿತ.

ಇದನ್ನೂ ಓದಿ : Ind vs Eng : ಇಂಗ್ಲೆಂಡ್ ವಿರುದ್ಧ ಸೋಲು; 91 ವರ್ಷಗಳ ಬಳಿಕ ಭಾರತದ ಕಳಪೆ ದಾಖಲೆ

ವಿರಾಟ್​ ಕೊಹ್ಲಿ ಸರಣಿ ಆರಂಭಕ್ಕೆ ಮೊದಲೇ ಮೊದಲೆರಡು ಪಂದ್ಯಗಳಿಗೆ ಖಾಸಗಿ ಸಮಸ್ಯೆ ಹಿನ್ನೆಲೆಯಲ್ಲಿ ಲಭ್ಯರಿಲ್ಲ ಎಂದು ಘೋಷಿಸಿದ್ದರು. ಅವರು ಮುಂದಿನ ಮೂರು ಪಂದ್ಯಗಳಿಗೆ ಲಭ್ಯರಿದ್ದಾರೆಯೇ ಕಾದು ನೋಡಬೇಕಾಗಿದೆ. ಮೊಹಮ್ಮದ್ ಶಮಿಯೂ ವಿಶ್ವ ಕಪ್​ ಸಮಯದಲ್ಲಿ ಉಂಟಾದ ಗಾಯದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಮೊದಲೆರಡು ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಅವರ ಸುಧಾರಣೆ ಎಷ್ಟರ ಮಟ್ಟಿಗೆ ಇದೆ ಎಂದೇ ಗೊತ್ತಿಲ್ಲ.

ಎರಡನೇ ಪಂದ್ಯಕ್ಕೆ ಜಡೇಜಾ, ರಾಹುಲ್ ಔಟ್​; ಇನ್ನಿಬ್ಬರಿಗೆ ಅವಕಾಶ

ಬೆಂಗಳೂರು: ಹೈದರಾಬಾದ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ (Ind vs Eng) ಟೆಸ್ಟ್​​ ಸರಣಿಯ ಆರಂಭಿಕ ಪಂದ್ಯದಲ್ಲಿ ಸೋಲನುಭವಿಸಿದ ಭಾರತಕ್ಕೆ ಡಬಲ್ ಹೊಡೆತ ಬಿದ್ದಿದೆ. ಆಲ್​ರೌಂಡರ್​ ರವೀಂದ್ರ ಜಡೇಜಾ ಮತ್ತು ವಿಕೆಟ್​ಕೀಪರ್​ ಬ್ಯಾಟರ್​ ಕೆಎಲ್ ರಾಹುಲ್ ಫೆಬ್ರವರಿ 2ರಿಂದ ವಿಶಾಖಪಟ್ಟಣಂನಲ್ಲಿ ಪ್ರಾರಂಭವಾಗುವ ಎರಡನೇ ಟೆಸ್ಟ್​ನಿಂದ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ.

ಹೈದರಾಬಾದ್ ವಿರುದ್ಧದ ಪಂದ್ಯದ ನಾಲ್ಕನೇ ದಿನದಂದು ಜಡೇಜಾ ಬ್ಯಾಟಿಂಗ್ ಮಾಡುವಾಗ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ತಂಡದ ಮ್ಯಾನೇಜ್ಮೆಂಟ್ ಸ್ಕ್ಯಾನ್​ಗಾಗಿ ಕಾಯುತ್ತಿದೆ ಎಂದು ಹಿಂದೆ ವರದಿಯಾಗಿತ್ತು. ಇದೀಗ ವರದಿ ಬಂದಿತ್ತು. ಈಗ ಅವರನ್ನು ಆಟದಿಂದ ಹೊರಗಿಟ್ಟಿದೆ. ಏತನ್ಮಧ್ಯೆ, ರಾಹುಲ್ ಬಲ ಕ್ವಾಡ್ರಿಸೆಪ್ಸ್ ನೋವಿನಿಂದ ಬಳಲುತ್ತಿದ್ದಾರೆ ಮತ್ತು ಆಟದಿಂದ ಹೊರಗುಳಿಯಲಿದ್ದಾರೆ.

ಇವರಿಬ್ಬರು ಹೊರಗುಳಿದ ನಂತರ, ಆಯ್ಕೆ ಸಮಿತಿಯು ಸರ್ಫರಾಜ್ ಖಾನ್, ಸೌರಭ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಎರಡನೇ ಟೆಸ್ಟ್​ ತಂಡಕ್ಕೆ ಸೇರಿಸಿದೆ.

ಎರಡನೇ ಪಂದ್ಯಕ್ಕೆ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್.

Exit mobile version