ಕೊಲೊಂಬೊ: ಕಳೆದ ಆವೃತ್ತಿಯ ಏಷ್ಯಾ ಕಪ್ ಚಾಂಪಿಯನ್ ಶ್ರೀಲಂಕಾ (Asia Cup 2023) ತಂಡದ ವಿರುದ್ಧದ ನಿರಾಯಸ ಗೆಲುವು ಸಾಧಿಸಿದ ಭಾರತ ತಂಡದ ಟ್ರೋಫಿ ಎತ್ತಿ ಹಿಡಿದಿದೆ. ಇದು ಭಾರತ ತಂಡದ ಪಾಲಿಗೆ ಎಂಟನೇ ಚಾಂಪಿಯನ್ಷಿಪ್ ಆಗಿದ್ದು, ಏಷ್ಯಾ ಕಪ್ನಲ್ಲಿ ತನ್ನ ಪಾರಮ್ಯ ಮುಂದುವರಿಸಿದೆ. ಫೈನಲ್ ಪಂದ್ಯದ ಗೆಲುವಿನಲ್ಲಿ ಭಾರತ ತಂಡದ ಬೌಲರ್ ಮೊಹಮ್ಮದ್ ಸಿರಾಜ್ ಪ್ರಮುಖ ಪಾತ್ರ ವಹಿಸಿದರು. ಅವರು ಲಂಕಾ ತಂಡದ ಪ್ರಮುಖ ಆರು ವಿಕೆಟ್ಗಳನ್ನು ಉರುಳಿಸಿ ಮಿಂಚಿದರು.
𝙒𝙃𝘼𝙏. 𝘼. 𝙒𝙄𝙉! 😎
— BCCI (@BCCI) September 17, 2023
A clinical show in the summit clash! 👌👌
A resounding 10-wicket win to clinch the #AsiaCup2023 title 👏👏
Well done, #TeamIndia! 🇮🇳#INDvSL pic.twitter.com/M9HnJcVOGR
ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಮಾಡಿತು. ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ 15.2 ಓವರ್ಗಳಲ್ಲಿ 50 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ 6.1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 51 ರನ್ ಮಾಡಿ 10 ವಿಕೆಟ್ ಗೆಲುವು ಸಾಧಿಸಿ ಟ್ರೋಫಿ ಎತ್ತಿ ಹಿಡಿಯಿತು. ಶುಭ್ ಮನ್ ಗಿಲ್ 27 ರನ್ ಹಾಗೂ ಇಶಾನ್ ಕಿಶನ್ 23 ರನ್ ಬಾರಿಸಿದರು.
ಭಾರತದ ದಾಖಲೆ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆತಿಥೇಯ ಶ್ರೀಲಂಕಾ ತಂಡವನ್ನು ಕೇವಲ 50 ರನ್ಗಳಿಗೆ ಆಲ್ಔಟ್ ಮಾಡಿದೆ. ಇದು ಏಕದಿನ ಮಾದರಿಯಲ್ಲಿ ಭಾರತ ವಿರುದ್ಧ ಶ್ರೀಲಂಕಾ ತಂಡ ಬಾರಿಸಿದ ಅತ್ಯಂತ ಕನಿಷ್ಠ ಮೊತ್ತವಾಗಿದೆ. ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ಬ್ಯಾಟರ್ಗಳು ಸಂಪೂರ್ಣ ವೈಫಲ್ಯ ಕಂಡರು. ಕುಸಾಸ್ ಮೆಂಡಿಸ್ (17) ಹಾಗೂ ದುಶಾನ್ ಹೇಮಂತ (13) ಬಿಟ್ಟರೆ ಉಳಿದ ಯಾವ ಆಟಗಾರರೂ ಎರಂಡಕಿ ಮೊತ್ತ ದಾಟಲಿಲ್ಲ.
ಭಾರತ ತಂಡದ ಪರವಾಗಿ ಮೊಹಮ್ಮದ್ ಸಿರಾಜ್ ಜೀವನ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಶ್ರೀಲಂಕಾದ ಬ್ಯಾಟರ್ಗಳೆಲ್ಲರೂ ಪತರಗುಟ್ಟುವಂತೆ ಮಾಡಿದ ಅವರು ತಮ್ಮ 7 ಓವರ್ಗಳ ಸ್ಪೆಲ್ನಲ್ಲಿ 21 ರನ್ ನೀಡಿ 6 ವಿಕೆಟ್ ಕಬಳಿಸಿದ್ದಾರೆ. ತಮ್ಮ ಬೆಂಕಿಯುಂಡೆಯಂಥ ಚೆಂಡುಗಳ ಮೂಲಕ ಲಂಕಾದ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ಮಾಡಿದ್ದಾರೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ 2.2 ಓವರ್ಗಳ 3 ರನ್ ಬಾರಿಸಿ 3 ವಿಕೆಟ್ ಪಡೆದರು. ಜಸ್ಪ್ರಿತ್ ಬುಮ್ರಾ ತಮ್ಮ 5 ಓವರ್ಗಳ ಸ್ಪೆಲ್ನಲ್ಲಿ 23 ರನ್ಗಳಿಗೆ 1 ವಿಕೆಟ್ ಪಡೆದರು.
ಲಂಕಾದ ಕಳಪೆ ಬ್ಯಾಟಿಂಗ್
ಬ್ಯಾಟಿಂಗ್ ಆರಂಭಿಸಿದ ಲಂಕಾ ತಂಡ ಒಂದು ರನ್ಗೆ 1 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಕಳಪೆ ಆರಂಭ ಪಡೆಯಿತು. ಕುಸಾಲ್ ಪೆರೆರಾ ಶೂನ್ಯಕ್ಕೆ ಔಟಾದರು. ಇದಾದ ಬಳಿಕ 8 ರನ್ಗೆ 2 ನೇ ವಿಕೆಟ್ ಪತನಗೊಂಡಿತು. ಕುಸಾಲ್ ಮೆಂಡಿಸ್ 17 ರನ್ ಬಾರಿಸಿ ಸ್ವಲ್ಪ ಹೊತ್ತು ಉಳಿದರು. ಅವರು ಸಿರಾಜ್ ಬೌಲಿಂಗ್ಗೆ ಬೌಲ್ಡ್ ಆದರು. ಬಳಿಕ ಬಂದ ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಧನಂಜಯ ಡಿಸಿಲ್ವಾ 4 ರನ್ಗೆ ಔಟಾದರೆ, ದಸುನ್ ಶನಕ ಶೂನ್ಯಕ್ಕೆ ಪೆವಿಲಿಯನ್ಗೆ ಮರಳಿದರು. ದುನಿತ್ ವೆಲ್ಲಾಲಗೆ 8 ರನ್ಗೆ ಪೆವಿಲಿಯನ್ಗೆ ಮರಳಿದರೆ, 13 ರನ್ ಬಾರಿಸಿದ ದುಶಾನ್ ಔಟಾಗದೇ ಉಳಿದರು. ಪ್ರಮೋದ್ ಮದುಶಾನ್ 1 ರನ್ ಹಾಗೂ ಮತೀಶಾ ಮತಿರಾಣಾ ಶೂನ್ಯಕ್ಕೆ ಔಟಾದರು.
ಏಷ್ಯಾಕಪ್ನಲ್ಲಿ ದಾಖಲೆ
ಏಷ್ಯಾ ಕಪ್ನ ಏಕದಿನ ಮಾದರಿಯಲ್ಲಿ ಅತಿ ಕಡಿಮೆ ರನ್ ನೀಡಿ 6 ವಿಕೆಟ್ ಪಡೆದ ಲಂಕಾದ ಅಜಂತಾ ಮೆಂಡೀಸ್ ಅವರ ದಾಖಲೆಯನ್ನು ಸಿರಾಜ್ ಸರಿಗಟ್ಟಿದರು. ಮೆಂಡೀಸ್ 2008ರಲ್ಲಿ 13 ರನ್ಗೆ 6 ವಿಕೆಟ್ ಕಡೆವಿದ್ದರು. ಇದು ಈವರೆಗಿನ ಏಷ್ಯಾಕಪ್ ದಾಖಲೆಯಾಗಿತ್ತು. ಈಗ ಈ ದಾಖಲೆಯನ್ನು ಸಿರಾಜ್ ಸರಿಗಟ್ಟಿದ್ದಾರೆ. ಸಿರಾಜ್ ಕೂಡ 13 ರನ್ಗೆ 6 ವಿಕೆಟ್ ಕಿತ್ತರು.