ಹ್ಯಾಂಗ್ಝ್: ಭಾರತದ ಶೂಟರ್ಗಳು ಏಷ್ಯನ್ ಗೇಮ್ಸ್ನಲ್ಲಿ (Asian Games 2023) ಪರಾಕ್ರಮ ಮೆರೆದಿದ್ದಾರೆ. ಮಹಿಳೆಯರು ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದ ಬೆನ್ನಲ್ಲೇ ಪುರುಷರ ತಂಡ ಕಂಚಿನ ಪದಕಕ್ಕೆ ಕೊರಳೊಡ್ಡಿದೆ. ಸ್ಕೀಟ್-50 ತಂಡ ಪುರುಷರ ವಿಭಾಗದಲ್ಲಿ ಭಾರತ 355 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದುಕೊಂಡಿತು. ಈ ತಂಡದಲ್ಲಿ ಅನಂತ್ ಜೀತ್ ಸಿಂಗ್, ಗುರ್ಜೋತ್ ಸಿಂಗ್ ಮತ್ತು ಅಂಗದದದ ವೀರ್ ಸಿಂಗ್ ಬಜ್ವಾ ಇದ್ದರು. ಅನಂತ್ 121 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದು. ಫೈನಲ್ನಲ್ಲಿ ಅವಕಾಶ ಪಡೆಯಲಿದ್ದಾರೆ. ಉಳಿದಿಬ್ಬರು ಫೈನಲ್ ಅವಕಾಶ ನಷ್ಟ ಮಾಡಿಕೊಂಡಿದ್ದಾರೆ.
Remarkable display of skill and teamwork⚡👍
— SAI Media (@Media_SAI) September 27, 2023
The Skeet Men's Team secures the BRONZE MEDAL! 🥉🇮🇳
Their precision shooting has earned 🇮🇳 a place on the podium, and we couldn't be prouder! 🌟🎯#Cheer4India#Hallabol#JeetegaBharat#BharatAtAG22 pic.twitter.com/FfaqFlRubI
ಇದರೊಂದಿಗೆ ಭಾರತಕ್ಕೆ ಏಷ್ಯಾ ಕಪ್ನ ನಾಲ್ಕನೇ ದಿನ ಸ್ಪರ್ಧೆಯಲ್ಲಿ 4 ಪದಕಗಳು ಲಭಿಸಿವೆ. ಇದೇ ವೇಳೆ ಹಾಲಿ ಆವೃತ್ತಿಯಲ್ಲಿ 19ನೇ ಪದಕ ಲಭಿಸಿದಂತಾಗಿದೆ.
ಭಾರತದ ಪದಕಗಳ ಪಟ್ಟಿ
- ಚಿನ್ನ: 5
- ಬೆಳ್ಳಿ: 5
- ಕಂಚು: 9
4ನೇ ದಿನದಾಟದಲ್ಲಿ ಭಾರತದ ಫಲಿತಾಂಶ ಪ್ರಕಟ
ವುಶು: ಪುರುಷರ ದಾವೋಶು ಫೈನಲ್ನಲ್ಲಿ ರೋಹಿತ್ ಜಾಧವ್ 8ನೇ ಸ್ಥಾನ
ಈಜು: ಮಹಿಳೆಯರ 100 ಮೀಟರ್ ಬಟರ್ ಫ್ಲೈ ಹೀಟ್ಸ್ ನಲ್ಲಿ ನೀನಾ ವೆಂಕಟೇಶ್ 1:03:89 ಸಮಯದೊಂದಿಗೆ ಫೈನಲ್ ಗೆ ಅರ್ಹತೆ ಪಡೆಯಲು ವಿಫಲರಾದರು
ಮಹಿಳೆಯರ 100 ಮೀಟರ್ ಬ್ಯಾಕ್ಸ್ಟ್ರೋಕ್ ಹೀಟ್ಸ್ನಲ್ಲಿ ಮಾನಾ ಪಟೇಲ್ 13ನೇ ಸ್ಥಾನ ಪಡೆದರು.
ಶೂಟಿಂಗ್: ಭಾರತದ ಆಶಿ ಚೌಕ್ಸೆ, ಮನಿನಿ ಕೌಶಿಕ್ ಮತ್ತು ಸಿಫ್ಟ್ ಕೌರ್ ಸಮ್ರಾ 50 ಮೀಟರ್ ರೈಫಲ್ 3 ಸ್ಥಾನಗಳ ಮಹಿಳಾ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರು.
ಮಹಿಳೆಯರ 50 ಮೀಟರ್ ರೈಫಲ್ 3 ಸ್ಥಾನಗಳ ವೈಯಕ್ತಿಕ ಸ್ಪರ್ಧೆಯಲ್ಲಿ ಸಿಫ್ಟ್ ಕೌರ್ ಸಮ್ರಾ ಚಿನ್ನ ಗೆದ್ದು ವಿಶ್ವ ದಾಖಲೆ, ಏಷ್ಯನ್ ಗೇಮ್ಸ್ ದಾಖಲೆಯನ್ನು ಮುರಿದರು
ಮಹಿಳೆಯರ 50 ಮೀಟರ್ ರೈಫಲ್ 3 ಸ್ಥಾನಗಳ ವೈಯಕ್ತಿಕ ಸ್ಪರ್ಧೆಯಲ್ಲಿ ಆಶಿ ಚೌಕ್ಸೆ ಕಂಚಿನ ಪದಕ ಗೆದ್ದರು
ಇದನ್ನೂ ಓದಿ : Asian Games 2023 : ವಿಶ್ವ ದಾಖಲೆಯೊಂದಿಗೆ ಶೂಟಿಂಗ್ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಸಿಫ್ಟ್ ಕೌರ್
ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಭಾರತ (ಮನು ಭಾಕರ್, ಇಶಾ ಸಿಂಗ್, ರಿದಮ್ ಸಾಂಗ್ವಾನ್) ಚಿನ್ನ ಗೆದ್ದರು
ಮಹಿಳೆಯರ 25 ಮೀಟರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಮನು ಭಾಕರ್ ಅಗ್ರಸ್ಥಾನ ಪಡೆದರೆ, ಇಶಾ ಐದನೇ ಸ್ಥಾನ ಮತ್ತು ರಿದಮ್ ಏಳನೇ ಸ್ಥಾನ ಪಡೆದರು
ಸ್ಕೀಟ್-50 ತಂಡ ಪುರುಷರ ವಿಭಾಗದಲ್ಲಿ ಭಾರತದ ಅನಂತ್ ಜೀತ್ ಸಿಂಗ್, ಗುರ್ಜೋತ್ ಸಿಂಗ್ ಮತ್ತು ಅಂಗದ್ ವೀರ್ ಸಿಂಗ್ ಬಜ್ವಾ ಕಂಚಿನ ಪದಕ ಗೆದ್ದಿದ್ದಾರೆ.
ಫೆನ್ಸಿಂಗ್: 16ನೇ ಸುತ್ತಿನಲ್ಲಿ ಸಿಂಗಾಪುರ ವಿರುದ್ಧ 30-45 ಅಂತರದಲ್ಲಿ ಸೋತ ಭಾರತ ಪುರುಷರ ತಂಡ
ಸೈಕ್ಲಿಂಗ್: ರೊನಾಲ್ಡೊ ಸಿಂಗ್ 16ನೇ ಸುತ್ತಿನಲ್ಲಿ ಜಪಾನ್ನ ಶಿಂಜಿ ನಕಾನೊ ವಿರುದ್ಧ ಸೋತರು
ಸ್ಕ್ವಾಷ್: ಕುವೈತ್ ವಿರುದ್ಧ ಭಾರತಕ್ಕೆ 3-0 ಅಂತರದ ಗೆಲುವು
ಮಹಿಳಾ ಪೂಲ್ ಬಿ: ನೇಪಾಳವನ್ನು 3-0 ಅಂತರದಿಂದ ಮಣಿಸಿದ ಭಾರತ