Site icon Vistara News

Ind vs Aus : ಟೆಸ್ಟ್​​ನಲ್ಲಿ ಆಸೀಸ್​ ವಿರುದ್ಧ ಜಯ; ಭಾರತೀಯ ಮಹಿಳೆಯರ ಚಾರಿತ್ರಿಕ ಸಾಧನೆ

ind vs aus

ಮುಂಬಯಿ: ಭಾರತದ ಕ್ರಿಕೆಟ್​ ಕ್ಷೇತ್ರದಲ್ಲಿ ಇತಿಹಾಸವೊಂದು ಸೃಷ್ಟಿಯಾಗಿದೆ. ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ (Ind vs Aus ) ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿ ಗೆಲುವು ಸಾಧಿಸಿದೆ. ಭಾರತದ ಪಾಲಿಗೆ ಇದು ಮೊದಲ ಸರಣಿ ಗೆಲವು ಕೂಡ ಹೌದು. ಇದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಮರಣೀಯ ದಿನವಾಗಲಿದೆ. ಹರ್ಮನ್ ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾವು ಅಲಿಸಾ ಹೀಲಿ ನೇತೃತ್ವದ ತಂಡವನ್ನು 8 ವಿಕೆಟ್​ಗಳಿಂದ ಹೀನಾಯವಾಗಿ ಸೋಲಿಸುವ ಮೂಲಕ ಈ ಕೀರ್ತಿ ತನ್ನದಾಗಿಸಿಕೊಂಡಿದೆ. ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿಕೊಂಡು ಬಂದಿದ್ದ ಭಾರತೀಯ ಪಡೆ ಪಂದ್ಯದ ನಾಲ್ಕನೇ ದಿನ ಗೆಲುವ ಸಾಧಿಸಿದೆ.

ಆಸ್ಟ್ರೇಲಿಯಾ ವಿರುದ್ಧ ಈ ಮೊದಲ ಗೆಲುವಿಗೂ ಮುನ್ನ ಭಾರತ ಮಹಿಳಾ ಕ್ರಿಕೆಟ್ ತಂಡ ಆಸೀಸ್ ವಿರುದ್ಧ 10 ಪಂದ್ಯಗಳನ್ನು ಆಡಿತ್ತು. 6ರಲ್ಲಿ ಸೋಲು ಮತ್ತು 4ರಲ್ಲಿ ಡ್ರಾ ಮಾಡಿಕೊಂಡಿತ್ತು.

ಇಲ್ಲಿನ ಐತಿಹಾಸಿಕ ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ನಾಲ್ಕನೇ ದಿನ ಭಾರತ ತಂಡದ ಗೆಲುವಿಗೆ 75 ರನ್​ಗಳ ಅಗತ್ಯವಿತ್ತು. ಎರಡು ವಿಕೆಟ್​ಗಳನ್ನು ಕಳೆದಕೊಂಡು ಈ ಗಡಿ ದಾಟಿದ ಭಾರತದ ಮಹಿಳೆಯರ ಬಳಗ ಸುಲಭ ಗೆಲುವು ತನ್ನದಾಗಿಸಿಕೊಂಡಿದೆ. ಇದು ಆತಿಥೇಯ ಭಾರತದ ಪಾಲಿಗೆ ನಂಬಲಾಗದ ಪ್ರದರ್ಶನ ಮತ್ತು ಭಾರತವು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಗೆಲುವು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಮೊದಲ ದಿನ ಆಸ್ಟ್ರೇಲಿಯಾವನ್ನು 219 ರನ್ ಗಳಿಗೆ ಆಲೌಟ್ ಮಾಡಿತು. ಮಧ್ಯಮ ಕ್ರಮಾಂಕದಲ್ಲಿ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನಾ, ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್ ಮತ್ತು ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಾಕರ್ – ಇವರೆಲ್ಲರೂ ಗಮನಾರ್ಹ ಕೊಡುಗೆ ಪಡೆದ ಭಾರತ ಮೊದಲ ಇನಿಂಗ್ಸ್​ನಲ್ಲಿ 187 ರನ್ ಗಳ ಮುನ್ನಡೆ ಸಾಧಿಸಿತು. ಆಸ್ಟ್ರೇಲಿಯಾದ 4ನೇ ಕ್ರಮಾಂಕದ ಆಟಗಾರ್ತಿ ತಹ್ಲಿಯಾ ಮೆಕ್ಗ್ರಾತ್ ಮೂರನೇ ದಿನದಾಟದಲ್ಲಿ ಎರಡನೇ ಅರ್ಧಶತಕ ಬಾರಿಸಿದರು. ಮೂರನೇ ದಿನದಅಂತಿಮ ದಿನದ ಅಂತಿಮ ಸೆಷನ್​ನಲ್ಲಿ ಹರ್ಮನ್​​ಪ್ರೀತ್​ ಕೌರ್ ಎರಡು ಪ್ರಮುಖ ವಿಕೆಟ್​ಗಳನ್ನು ಪಡೆದರು.

ಇದನ್ನೂ ಓದಿ: WFI Polls Row: ಹೊಸ ಕುಸ್ತಿ ಒಕ್ಕೂಟವೇ ರದ್ದು; ಕುಸ್ತಿಪಟುಗಳ ಬಿಗಿಪಟ್ಟಿಗೆ ಚಿತ್‌ ಆದ ಕೇಂದ್ರ

ನಾಲ್ಕನೇ ದಿನ ಭಾರತೀಯ ಬೌಲರ್​ಗಳು ಬೆಳಗ್ಗಿನ ಅವಧಿಯಲ್ಲಿ ಕೇವಲ 28 ರನ್​ಗಳಿಎಗ ಕೊನೆಯ ಐದು ವಿಕೆಟ್​​ಗಳನ್ನು ಪಡೆದರು. 75 ರನ್​ಗಳ ಗುರಿ ಬೆನ್ನತ್ತಿದ ಭಾರತ ಪರ ಶೆಫಾಲಿ ವರ್ಮಾ ಮೊದಲ ಓವರ್​ನಲ್ಲೇ ಬೌಂಡರಿ ಬಾರಿಸಿ ಔಟಾದರು. ಬಳಿಕ ರಿಚಾ ಘೋಷ್​ 13 ರನ್​ಗಳಿಗೆ ಔಟಾದರು. ಬಳಿಕ ಸ್ಮೃತಿ ಮಂಧಾನಾ 38 ಹಾಗೂ ಜೆಮಿಮಾ 12 ರನ್ ಬಾರಿಸುವ ಮೂಲಕ ಭಾರತ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರ್

Exit mobile version