ಇಸ್ಪಹಾನ್ (ಇರಾನ್) : ಭಾರತದ ಫುಟ್ಬಾಲ್ ಕ್ಷೇತ್ರದಲ್ಲಿ ಹೊಸದೊಂದು ದಾಖಲೆ ಸೃಷ್ಟಿಯಾಗಿದೆ. ಇದು ೧೪ ವರ್ಷಗಳ ಬಳಿಕ ಭಾರತ ಮಾಡಿರುವ ದೊಡ್ಡ ಮಟ್ಟಿನ ಸಾಧನೆಯಾಗಿದೆ. ಇರಾನ್‌ನ ಇಸ್ಪಹಾನ್‌ನಲ್ಲಿ ನಡೆದ ೧೮ರ ವಯೋಮಿತಿಯ ಏಷ್ಯನ್ ಬಾಲಕರ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ (Volleyball Championship) ಭಾರತ ತಂಡ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಮೂರನೇ ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಭಾರತದ ಯುವ ಪಡೆ ದಕ್ಷಿಣ ಕೊರಿಯಾ ತಂಡವನ್ನು ೩-೨ ಅಂತರದಿಂದ ಸೋಲಿಸಿತು.
ಭಾರತ ತಂಡ ಆರಂಭದಲ್ಲಿ ಪಾರಮ್ಯ ಮೆರೆದು, ೨೫-೨೦, ೨೫-೨೧ ಅಂಕಗಳಿಂದ ಮೊದಲೆರಡು ಗೇಮ್‌ಗಳನ್ನು ತನ್ನದಾಗಿಸಿಕೊಂಡಿತು. ಆದರೆ, ಮೂರನೇ ಗೇಮ್‌ನಲ್ಲಿ ಕೊರಿಯಾ ತಂಡ ೨೮-೨೬ ಅಂಕಗಳಿಂದ ಜಯ ಸಾಧಿಸಿತು. ಅಂತೆಯೇ ನಾಲ್ಕನೇ ಗೇಮ್ ಕೂಡ ೨೫-೧೯ ಅಂಕಗಳಿಂದ ಎದುರಾಳಿ ತಂಡದ ಪಾಲಾಯಿತು. ನಿರ್ಣಾಯಕ ಹಾಗೂ ಐದನೇ ಗೇಮ್‌ನಲ್ಲಿ ಭಾರತ ತಂಡ ೧೫-೧೨ ಅಂಕಗಳಿಂದ ಗೆಲ್ಲುವ ಮೂಲಕ ಪದಕ ಗೆದ್ದಿತು. ಭಾರತದ ೧೮ರ ವಯೋಮಿತಿಯ ತಂಡ ಪ್ರಶಸ್ತಿ ವೇದಿಕೆಯನ್ನು ಏರಿದ್ದು ೧೪ ವರ್ಷಗಳ ಬಳಿಕ ಇದೇ ಮೊದಲು. ೨೦೦೮ರಲ್ಲಿ ಭಾರತ ತಂಡ ಚೀನಾವನ್ನು ೩-೨ ಗೇಮ್‌ಗಳಿಂದ ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿತ್ತು.
ಇರಾನ್‌ನಲ್ಲಿ ನೀಡಿರುವ ಈ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಭಾರತ ತಂಡ ೨೦೨೩ರಲ್ಲಿ ನಡೆಯಲಿರುವ ವಾಲಿಬಾಲ್ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದುಕೊಂಡಿತು.