Site icon Vistara News

Asian Games : ಏಷ್ಯನ್​ ಗೇಮ್ಸ್​ನಲ್ಲಿ ಹೊಸ ದಾಖಲೆಯೊಂದಿಗೆ ಚಿನ್ನ ಗೆದ್ದ ಪುರುಷರ ರಿಲೇ ತಂಡ

Relay Team

ಹ್ಯಾಂಗ್ಝೌ: ಚೀನಾದಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಏಷ್ಯನ್​ ಗೇಮ್ಸ್​ನಲ್ಲಿ (Asian Games) ಭಾರತದ ಅಥ್ಲೀಟ್​ಗಳ ಪದಕಗ ಬೇಟೆ ಮುಂದುವರಿದಿದೆ. ಭಾರತದ ಸ್ಟಾರ್​ ಜಾವೆಲಿನ್​ ಎಸೆತಗಾಗ ನೀರಜ್​ ಚೋಪ್ರಾ ಅವರು ಬುಧವಾರ ಸಂಜೆ ನಡೆದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಬೆನ್ನಲ್ಲೇ ಪುರುಷರ 4X400 ಮೀಟರ್​ ರಿಲೇ ತಂಡವೂ ಸ್ವರ್ಣ ಪದಕಕ್ಕೆ ಕೊರಳೊಡ್ಡಿದೆ. ಈ ಮೂಲಕ ಭಾರತದ ಪದಕಗಳ ಚಿನ್ನದ ಪದಕಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಬುಧವಾರ ಮೂರು ಚಿನ್ನದ ಪದಕಗಳು ಲಭಿಸಿದಂತಾಗಿದೆ. ಅಲ್ಲದೆ, ಒಟ್ಟು ಪದಕಗಳ ಸಂಖ್ಯೆಯೂ 81ಕ್ಕೆ ಏರಿದೆ. ಇದು ಏಷ್ಯನ್ ಗೇಮ್ಸ್ ಇತಿಹಾದಲ್ಲಿ ಭಾರತದ ಅಥ್ಲೀಟ್​ಗಳು ಗೆದ್ದಿರುವ ಗರಿಷ್ಠ ಪದಕಗಳ ಸಂಖ್ಯೆಯಾಗಿದೆ.

ಮೊಹಮ್ಮದ್ ಅನಾಸ್ ಯ್ಯಾಯ್ಯಾ, ಅಮೋಜ್ ಜಾಕೋಬ್​, ಮೊಹಮ್ಮದ್ ಅಜ್ಮಲ್​ ಹಾಗೂ ರಾಜೇಶ್ ರಮೇಶ್ ಅವರಿದ್ದ ಪುರುಷರ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. 3.01. 58 ಸೆಕೆಂಡ್​ಗಳಲ್ಲಿ ಓಟ ಮುಗಿಸಿದ ಈ ತಂಡ ರಾಷ್ಟ್ರೀಯ ದಾಖಲೆಯನ್ನೂ ಮುರಿದಿದೆ.

ಇದಕ್ಕಿಂತ ಮೊದಲು ಭಾರತದ ಸ್ಟಾರ್​ ಜಾವೆಲಿನ್ ಎಸೆತಗಾರ ನೀರಜ್​ ಸತತ ಎರಡನೇ ಬಾರಿ ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದಾರೆ.. ಅವರು 2018ರ ಆವೃತ್ತಿಯಲ್ಲೂ ಚಿನ್ನದ ಪದಕ ಗೆದ್ದಿದ್ದರು. ಇತ್ತೀಚಿಗೆ ನಡೆದ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಚಿನ್ನದ ಪದಕ ಗೆದ್ದಿರುವ ಬಳಿಕ ಅವರು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಗಳಿಸಿದ ಎರಡನೇ ಚಿನ್ನದ ಪದಕವಾಗಿದೆ.

ಬುಧವಾರ ಸಂಜೆ ನಡೆದ ಸ್ಪರ್ಧೆಯಲ್ಲಿ ನೀರಜ್​ ಚೋಪ್ರಾ ಅವರ 88. 88 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಪದಕ ಗೆದ್ದುಕೊಂಡರು. ಭಾರತದವರೇ ಆದ ಕಿಶೋರ್​ ಜೆನ್ನಾ ಅವರು 87.54 ಮೀಟರ್​ ದೂರಕ್ಕೆ ಎಸೆದು ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತದ ಚಿನ್ನದ ಪದಕದ ಒಟ್ಟು ಗಳಿಕೆ 17ಕ್ಕೆ ಏರಿಕೆಯಾಗಿದೆ. ಬೆಳ್ಳಿಯ ಪದಕ 30 ಆಗಿದೆ.

ಭಾರತದ ಪದಕ ಪಟ್ಟಿ

ಚಿನ್ನ: 18

ಬೆಳ್ಳಿ: 31

ಕಂಚು: 32

ಬುಧವಾರ ಏಷ್ಯನ್​ ಗೇಮ್ಸ್​ನ 11ನೇ ದಿನ ಭಾರತ ಚಿನ್ನ ಮತ್ತು ಕಂಚಿನ ಪದಕ ಗೆಲ್ಲುವ ಮೂಲಕ ಪದಕದ ಖಾತೆ ತೆರೆದಿತ್ತು. ಮಿಕ್ಸೆಡ್ ಕಾಂಪೌಂಡ್ ಆರ್ಚರಿಯಲ್ಲಿ​ ಓಜಾಸ್ ಮತ್ತು ಜ್ಯೋತಿ ವೆನ್ನಮ್ ಚಿನ್ನಕ್ಕೆ ಗುರಿ ಇರಿಸಿದರೆ, ರಾಮ್ ಬಾಬು ಮತ್ತು ಮಂಜು ರಾಣಿ 35ಕೀ.ಮೀ ಓಟದ ನಡಿಗೆ(ರೇಸ್​ ವಾಕ್​) ಮಿಶ್ರ ತಂಡದಲ್ಲಿ ಕಂಚು ಗೆದ್ದರು. ಈ ಮೂಲಕ ಭಾರತದ ಪದಕಗಳ ಸಂಖ್ಯೆ 71ಕ್ಕೇರಿದೆ. ಇದು ಏಷ್ಯಾಡ್​ನಲ್ಲಿ ಭಾರತ ಗೆದ್ದ ದಾಖಲೆಯ ಪದಕವಾಗಿದೆ.

ಇದನ್ನೂ ಓದಿ : Asian Games : ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಜಾವೆಲಿನ್ ಎಸೆತಗಾರ ನೀರಜ್​ ಚೋಪ್ರಾ

ಆರ್ಚರಿ ರೋಚಕ ಫೈನಲ್​ ಪಂದ್ಯದಲ್ಲಿ ಓಜಾಸ್ ಮತ್ತು ಜ್ಯೋತಿ ವೆನ್ನಮ್ ಜೋಡಿ ಕೇವಲ ಒಂದು ಅಂಕದ ಮುನ್ನಡೆಯಿಂದ ಚಿನ್ನ ತಮ್ಮದಾಗಿಸಿಕೊಂಡರು. ಹಾಲಿ ಚಾಂಪಿಯನ್​ ದಕ್ಷಿಣ ಕೊರಿಯಾವನ್ನು 159-158 ಅಂಕಗಳಿಂದ ಸೋಲಿಸಿದ ಭಾರತ ಐತಿಹಾಸಿಕ ಚಿನ್ನ ಗೆದ್ದಿತು.

ಬುಧವಾರ ಬೆಳಗ್ಗೆ ನಡೆದ ಈ ಸ್ಫರ್ದೆಯಲ್ಲಿ ಭಾರತೀಯ ತಂಡ 5:51:14 ಸೆಂಕೆಡ್​ನಲ್ಲಿ ಗುರು ತಲುಪಿ ಮೂರನೇ ಸ್ಥಾನ ಪಡೆದ ಕಂಚಿಗೆ ತೃಪ್ತಿಪಟ್ಟಿತ್ತು. ಇಂದು ನಡೆಯುವ ಜಾವೆಲಿನ್​ ಎಸೆತದಲ್ಲಿ ನೀರಜ್​ ಚೋಪ್ರಾ ಮಹಿಳಾ ಬಾಕ್ಸಿಂಗ್​ ಫೈನಲ್ಸ್​ನಲ್ಲಿ ಲವ್ಲಿನಾ ಬೋರ್ಗಹೈನ್‌(Lovlina Borgohain) ಕಣಕ್ಕಿಳಿಯಲಿದ್ದಾರೆ. ಇವರ ಮೇಲೆ ಚಿನ್ನದ ನಿರೀಕ್ಷೆ ಇರಿಸಲಾಗಿದೆ. ಆರ್ಚರಿಯಲ್ಲಿ ಕೆಲ ಸ್ಪರ್ಧಿಗಳು ಫೈನಲ್​ ತಲುಪಿದ್ದು ಪದಕ ಖಾತ್ರಿ ಪಡಿಸಿದ್ದಾರೆ.

ದಾಖಲೆ ಬರೆದ ಭಾರತ
ಭಾರತದ ಪದಕ ಗಳಿಕೆ 71ಕ್ಕೇರುವ ಮೂಲಕ ದಾಖಲೆಯೊಂದನ್ನು ಬರೆದಿದೆ. ಭಾರತ 2010ರಲ್ಲಿ 65 ಪದಕ 2018ರಲ್ಲಿ 70 ಪದಕ ಗೆದ್ದಿತ್ತು. ಈ ಬಾರಿ 71 ಪದಕ ಗೆಲ್ಲುವ ಮೂಲಕ ಹಳೆಯ ದಾಖಲೆಯನ್ನು ಮುರಿದಿದೆ. ಸದ್ಯ 16 ಚಿನ್ನ, 26 ಬೆಳ್ಳಿ ಹಾಗೂ 29 ಕಂಚು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರಿದಿದೆ.

ಬುಧವಾರದ ಫಲಿತಾಂಶಗಳು

ಆರ್ಚರಿ: ಭಾರತದ ಜ್ಯೋತಿ ಸುರೇಖಾ ವೆನ್ನಮ್ ಮತ್ತು ಪ್ರವೀಣ್ ಓಜಾಸ್ ಡಿಯೋಟಾಲೆ ಕಾಂಪೌಂಡ್ ಆರ್ಚರಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ.

ಕುಸ್ತಿ: ಪುರುಷರ ಗ್ರೀಕೋ-ರೋಮನ್ 87 ಕೆಜಿ ವಿಭಾಗದಲ್ಲಿ ಸುನಿಲ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ.

ಬಾಕ್ಸಿಂಗ್: ಮಹಿಳೆಯರ 57 ಕೆಜಿ ವಿಭಾಗದ ಸೆಮಿಫೈನಲ್ನಲ್ಲಿ ಸೋತು ಕಂಚಿನ ಪದಕ ಗೆದ್ದ ಪರ್ವೀನ್

ಮಹಿಳೆಯರ 75 ಕೆಜಿ ವಿಭಾಗದ ಫೈನಲ್ನಲ್ಲಿ ಚೀನಾದ ಲಿ ಕಿಯಾನ್ ವಿರುದ್ಧ ಸೋತ ಲೊವ್ಲಿನಾ ಬೊರ್ಗೊಹೈನ್ ಬೆಳ್ಳಿ ಪದಕ ಗೆದ್ದರು.

ಅಥ್ಲೆಟಿಕ್ಸ್: 35 ಕಿ.ಮೀ ಓಟದ ಮಿಶ್ರ ತಂಡ ಫೈನಲ್ನಲ್ಲಿ ಭಾರತಕ್ಕೆ ಕಂಚಿನ ಪದಕ

ಮಹಿಳೆಯರ 800 ಮೀಟರ್ ಫೈನಲ್​ನಲ್ಲಿ ಹರ್ಮಿಲನ್ ಬೈನ್ಸ್ ಬೆಳ್ಳಿ ಗೆದಿದ್ದಾರೆ.

ಪುರುಷರ 5000 ಮೀಟರ್ ಫೈನಲ್ನಲ್ಲಿ ಅವಿನಾಶ್ ಸಾಬ್ಲೆ ಬೆಳ್ಳಿ ಗೆದ್ದರು

ಸ್ಕ್ವಾಷ್: ಮಿಶ್ರ ಡಬಲ್ಸ್ ಸೆಮಿಫೈನಲ್ನಲ್ಲಿ ಭಾರತದ ಅನಾಹತ್ ಸಿಂಗ್ ಮತ್ತು ಅಭಯ್ ಸಿಂಗ್ ಜೋಡಿಗೆ ಮಲೇಷ್ಯಾದ ಐಫಾ ಬಿಂಟಿ ಮತ್ತು ಮೊಹಮ್ಮದ್ ಸಯಾಫಿಕ್ ವಿರುದ್ಧ ಸೋತು ಕಂಚಿನ ಪದಕ

ಮಿಶ್ರ ಡಬಲ್ಸ್ ಸೆಮಿಫೈನಲ್ನಲ್ಲಿ ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಸಂಧು ಹಾಂಕಾಂಗ್ನ ಕಾ ಯಿ ಲೀ ಮತ್ತು ಚಿ ಹಿಮ್ ವಾಂಗ್ ಅವರನ್ನು ಸೋಲಿಸಿ ಫೈನಲ್​​ಗೆ ಪ್ರವೇಶಿಸಿದ್ದಾರೆ.

Exit mobile version