ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ (CWG- 2022) ಭಾರತದ ಪುರುಷರ ಟೇಬಲ್ ಟೆನಿಸ್ ತಂಡ ಬಂಗಾರದ ಪದಕ ಗೆದ್ದಿದೆ. ಇದು ಕಾಮನ್ವೆಲ್ತ್ ಗೇಮ್ಸ್ ಆರಂಭಗೊಂಡ ಬಳಿಕ ಭಾರತಕ್ಕೆ ಲಭಿಸಿದ ಐದನೇ ಚಿನ್ನದ ಪದಕವಾಗಿದೆ. ಇದರೊಂದಿಗೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ೧೧ಕ್ಕೇರಿದೆ.
ಮಂಗಳವಾರ ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಸಿಂಗಾಪುರ ತಂಡದ ವಿರುದ್ಧ ೩-೧ ಅಂತರದ ಗೆಲುವು ಸಾಧಿಸಿದ ಭಾರತ ತಂಡದ ಸದಸರಯ ಬಂಗಾರದ ಪದಕಕ್ಕೆ ಕೊರಳೊಡ್ದಿದ್ದಾರೆ.
ಶರತ್ ಕಮಾಲ್, ಜಿ. ಸತಿಯನ್, ಹರ್ಮೀತ್ ದೇಸಾಯಿ ಹಾಗೂ ಸನಿಲ್ ಶೆಟ್ಟಿ ಅವರಿದ್ದ ತಂಡ ಟೇಬಲ್ ಟೆನಿಸ್ ಪಂದ್ಯದಲ್ಲ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿಕೊಂಡಿದೆ. ೨೦೧೮ರ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಟೇಬಲ್ ಟೆನಿಸ್ ತಂಡ ಚಿನ್ನದ ಪದಕ ಗೆದ್ದಿತ್ತು. ಇದೀಗ ಮತ್ತೊಂದು ಪದಕ ಗೆದ್ದಿದೆ.
ಮೊದಲ ಪಂದ್ಯದಲ್ಲಿ ಸತಿಯನ್ ಗುಣಶೇಖರನ್ ಹಾಗೂ ಹರ್ಮೀತ್ ದೇಸಾಯಿ ಅವರಿದ್ದ ತಂಡ ಯಾಂಗ್ ಐಸಾಕ್ ಕ್ವೆಕ್ ಹಾಗೂ ಯೆನ್ ಕೊಯೆನ್ ಪಾಂಗ್ ಜೋಡಿಯ ವಿರುದ್ಧ ೧೩-೧೧, ೧೧-೭, ೧೧- ೫ ಸೆಟ್‌ಗಳಿಂದ ಗೆಲುವು ಸಾಧಿಸಿತು. ಸಿಂಗಲ್ಸ್ ವಿಭಾಗದ ಎರಡನೇ ಪಂದ್ಯದಲ್ಲಿ ಅಚಂತಾ ಶರತ್ ಕಮಾಲ್ ೭-೧೧, ೧೪-೧೨, ೩-೧೧, ೧೧-೯ ಸೆಟ್‌ಗಳಿಂದ ಎದುರಾಳಿ ಜಿ ಯು ಕ್ಲಾರೆನ್ಸ್ ಸೋತರು. ಹೀಗಾಗಿ ಪಂದ್ಯ ೧-೧ರ ಸಮಬಲದಲ್ಲಿ ಬಂದು ನಿಂತಿತು. ಆದರೆ, ಮೂರನೇ ಪಂದ್ಯದಲ್ಲಿ ಸತಿಯನ್ ಗುಣಶೇಖರನ್ ಸಿಂಗಾಪುರದ ಎದುರಾಳಿ ವಿರುದ್ಧ ಗೆಲುವು ಸಾಧಿಸುವುದರೊಂದಿಗೆ ಭಾರತಕ್ಕೆ ೨-೧ ಮುನ್ನಡೆ ಲಭಿಸಿತು. ಅಂತೆಯೇ ಕೊನೇ ಪಂದ್ಯದಲ್ಲಿ ಹರ್ಮಿತ್ ದೇಸಾಯಿ ಅವರು ಅದಕ್ಕಿಂತ ಮೊದಲು ಶರತ್ ಕಮಾಲ್‌ಗೆ ಸೋಲುಣಿಸಿದ್ದ ಜಿ ಯು ಕ್ಲಾರೆನ್ಸ್‌ಗೆ ೧೧-೮, ೧೧-೫, ೧೧-೬ ನೇರ ಸೆಟ್‌ಗಳಿಂದ ಸೋಲುಣಿಸಿ ಭಾರತ ಬಂಗಾರದ ಪದಕ ಗೆಲ್ಲುವಲ್ಲಿ ನೆರವಾದರು.
ಇದನ್ನೂ ಓದಿ | CWG – 2022 | ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಚರಿತ್ರೆ ಸೃಷ್ಟಿಸಿದ ಭಾರತದ ಲಾನ್ ಬೌಲ್ ತಂಡ