Site icon Vistara News

IND vs SA : ಮೂರನೇ ಪಂದ್ಯದಲ್ಲಿ ಭಾರತಕ್ಕೆ ಜಯ, ಸರಣಿ ರಾಹುಲ್ ಪಡೆಯ ಕೈವಶ

Team India

ಕೇಪ್​ಟೌನ್​ : ಬೌಲಿಂಗ್ ಹಾಗೂ ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಏಕ ದಿನ ಸರಣಿಯ ಮೂರನೇ ಪಂದ್ಯದಲ್ಲಿ 78 ರನ್​ಗಳ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯನ್ನು 2-1 ಅಂತರದಿಂದ ಕೈವಶ ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಭಾರತ ತಂಡ ಎರಡನೇ ಪಂದ್ಯದಲ್ಲಿ ಸೋಲು ಎದುರಿಸಿತ್ತು. ಇದು ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾದ ನೆಲದಲ್ಲಿ ಐದು ವರ್ಷಗಳ ಬಳಿಕ ಲಭಿಸಿದ ಏಕ ದಿನ ಸರಣಿ ವಿಜಯವಾಗಿದೆ. ಈ ಹಿಂದೆ 2018ರಲ್ಲಿ ವಿರಾಟ್​ ಕೊಹ್ಲಿ ನೇತೃತ್ವದ ಭಾರತ ತಂಡ ಏಕ ದಿನ ಸರಣಿಯಲ್ಲಿ ಗೆಲುವು ಕಂಡಿತ್ತು. ಆದರೆ, 2022ರ ಪ್ರವಾಸದಲ್ಲಿ ಭಾರತ ತಂಡ 3-0 ಹೀನಾಯ ಸೋಲಿಗೆ ಒಳಗಾಗಿತ್ತು. ಆ ವೇಳೆ ಕೆ ಎಲ್ ರಾಹುಲ್ ಭಾರತ ತಂಡವನ್ನು ಮುನ್ನಡೆಸಿದ್ದರು. ಅದಕ್ಕೀಗ ಸೇಡು ತೀರಿಸಿಕೊಂಡಿದ್ದಾರೆ ರಾಹುಲ್​.

ಭಾರತ ತಂಡದ ಗೆಲುವಿನಲ್ಲಿ ಏಕ ದಿನ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಬಾರಿಸಿದ ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರ ವಹಿಸಿದರು. ಬೌಲಿಂಗ್​ನಲ್ಲಿ ಅರ್ಶ್​ದೀಪ್ ಸಿಂಗ್ ಮಿಂಚಿದರು. ಅವರು 9 ಓವರ್ ಎಸೆದು 30 ರನ್​ ನೀಡಿ 4 ವಿಕೆಟ್​ ಉರುಳಿಸಿ ಮಿಂಚಿದರು.

ಇಲ್ಲಿನ ಬೊಲ್ಯಾಂಡ್ ಪಾರ್ಕ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 296 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 45.5 ಓವರ್​ಗಳಲ್ಲಿ 218 ರನ್​ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು.

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 59 ರನ್ ಬಾರಿಸಿತು. ಆದರೆ ರೀಜಾ ಹೆಂಡ್ರಿಕ್ಸ್ 19 ರನ್​ಗೆ ಔಟಾದ ಬಳಿಕ ಭಾರತಕ್ಕೆ ಹಿಡಿತ ಸಿಕ್ಕಿತು. ಆದರೆ ಮತ್ತೊಂದು ತುದಿಯಲ್ಲಿ ಟೋನಿ ಜೋರ್ಜಿ ಭಾರತದ ಬೌಲರ್​ಗಳ ಬೆವರಿಳಿಸಲು ಆರಂಭಿಸಿದರು. ಏತನ್ಮಧ್ಯೆ ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ವ್ಯಾನ್​ ಡೆರ್ ಡಸ್ಸೆನ್​ 2 ರನ್​ಗೆ ಔಟಾದರು. ಬಳಿಕ ಬಂದ ಏಡೆನ್​ ಮಾರ್ಕ್ರಮ್​ 36 ರನ್ ಬಾರಿಸಿ ಭಾರತ ತಂಡಕ್ಕೆ ಭಯ ಹುಟ್ಟಿಸಿದರು. ಅವರನ್ನು ವಾಷಿಂಗ್ಟನ್​ ಸುಂದರ್​ ಪೆವಿಲಿಯನ್​ಗೆ ಕಳುಹಿಸಿದರು.

ಈ ವೇಳೆ ಮತ್ತೊಂದು ಶತಕ ಬಾರಿಸು ಹುಮ್ಮಸ್ಸಿನೊಂದಿಗೆ ಆಡುತ್ತಿದ್ದ ಜೋರ್ಜಿಯನ್ನು ಅರ್ಶ್​ದೀಪ್​ ಸಿಂಗ್​ ಎಲ್​ಬಿಡಬ್ಲ್ಯು ಬಲೆಗೆ ಕೆಡವಿದರು. ನಂತರದ ಕ್ಲಾಸೆನ್ ಕೂಡ 21 ರನ್ ಬಾರಿಸಿ ಔಟಾದರು. ಕೇಶವ್​ ಮಹಾಜಾರ್​ 14 ರನ್ ಬಾರಿಸಿದರು.

ಸಂಜು ಚೊಚ್ಚಲ ಶತಕದ ಸಾಧನೆ

ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಮೊದಲೆರಡು ವಿಕೆಟ್​ಗಳನ್ನು ಬೇಗನೆ ಕಳೆದುಕೊಂಡಿತು. ರಜತ್​ 22 ರನ್​ಗೆ ಔಟಾದರೆ, ಸಾಯಿ ಸುದರ್ಶನ್​ 10 ರನ್​ಗೆ ಸೀಮಿತಗೊಂಡತು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಸಂಜು ಸ್ಯಾಮ್ಸನ್​​ ಅತ್ಯಂತ ತಾಳ್ಮೆಯಿಂದ ಆಡಿ ಶತಕ ಬಾರಿಸಿದರು. ಅವರ ಸಾಥ್​ ನೀಡಿದ ರಾಹುಲ್​ 21 ರನ್ ಬಾರಿಸಿ ಔಟಾದರು. ಕ್ರಮಾಂಕದಲ್ಲಿ ಹಿಂಬಡ್ತಿ ಪಡೆದ ತಿಲಕ್ ವರ್ಮಾ ದೀರ್ಘ ಅವಧಿಯ ಹಿನ್ನಡೆಯನ್ನು ಸರಿದೂಗಿಸಿದರು.

ಇದನ್ನೂ ಓದಿ: KL Rahul : ದ. ಆಫ್ರಿಕಾ ವಿರುದ್ಧ 3ನೇ ಪಂದ್ಯದ ವೇಳೆ ವಿಶೇಷ ದಾಖಲೆ ಬರೆದ ರಾಹುಲ್​

ದಕ್ಷಿಣ ಆಫ್ರಿಕಾದ ವೇಗದ ಬೌಲರ್​ಗಳನ್ನು ಸತತವಾಗಿ ಹಿಮ್ಮೆಟ್ಟಿಸಿದ ಸಂಜು ಸ್ಯಾಮ್ಸನ್​ 66 ಎಸೆತಕ್ಕೆ ಅರ್ಧ ಶತಕ ಬಾರಿಸಿದರು. ಬಳಿಕ ವೇಗದ ಹೆಚ್ಚಿಸಿ ಶತಕದ ಗೌರವವನ್ನು ತಮ್ಮದಾಗಿಸಿಕೊಂಡರು. ಅವರ ಇನಿಂಗ್ಸ್​ನಲ್ಲಿ 6 ಫೋರ್ ಹಾಗೂ 3 ಸಿಕ್ಸರ್​ಗಳು ಸೇರಿಕೊಂಡಿದ್ದವು.

ಅವರು 77 ಎಸೆತಕ್ಕೆ 55 ರನ್ ಬಾರಿಸಿದರು. ಕೊನೆಯಲ್ಲಿ ರಿಂಕು ಸಿಂಗ್​ 2 ಸಿಕ್ಸರ್ ಹಾಗೂ 3 ಫೋರ್ ಸಮೇತ 38 ರನ್ ಬಾರಿಸಿ ತಂಡದ ಮೊತ್ತ ಏರಲು ನೆರವಾದರು. ವಾಷಿಂಗ್ಟನ್ ಸುಂದರ್​ 9 ಎಸೆತಕ್ಕೆ 14 ರನ್ ಬಾರಿಸಿದರು.

Exit mobile version