Site icon Vistara News

Asian Games 2023 : ಸ್ಕ್ವಾಷ್​ನಲ್ಲಿ ಭಾರತಕ್ಕೆ ಕಂಚಿನ ಪದಕ

Asia Cup sqaush team

ಹಾಂಗ್ಝೌ : ಏಷ್ಯನ್ ಗೇಮ್ಸ್ ನ (Asian Games 2023) ಸೆಮಿಫೈನಲ್ ನಲ್ಲಿ ಭಾರತದ ಮಹಿಳೆಯರ ಸ್ಕ್ವಾಷ್ ತಂಡ ಚೀನಾದ ಹಾಂಕಾಂಗ್ ವಿರುದ್ಧ 1-2 ಗೋಲುಗಳಿಂದ ಸೋತು ಕಂಚಿನ ಪದಕ ಗೆದ್ದುಕೊಂಡಿದೆ.

ಕೇವಲ 22 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾರತದ ತನ್ವಿ ಖನ್ನಾ ಅವರು ಸಿನ್ ಯುಕ್ ಚಾನ್ ವಿರುದ್ಧ 6-11, 7-11, 3-11 ನೇರ ಗೇಮ್ ಗಳಿಂದ ಸೋತರು. ಎರಡನೇ ಪಂದ್ಯದಲ್ಲಿ ಜೋಶ್ನಾ ಚಿನ್ನಪ್ಪ 7-11, 11-7, 9-11, 11-6, 11-8 ಸೆಟ್ ಗಳಿಂದ ತ್ಜೆ ಲೋಕ್ ಹೋ ವಿರುದ್ಧ ಗೆಲುವು ಸಾಧಿಸಿದ ಸಮಬಲಗೊಳಿಸಿದರು.

ನಿರ್ಣಾಯಕ ಮುಖಾಮುಖಿಯಲ್ಲಿ ಅನಾಹತ್ ಸಿಂಗ್ 8-11, 7-11, 10-12 ಅಂತರದಲ್ಲಿ ಕಾ ಯಿ ಲೀ ವಿರುದ್ಧ ಸೋತರು. ಪಂದ್ಯದ ಮೂರನೇ ಗೇಮ್ ನಲ್ಲಿ, ಅನಾಹತ್ ಬಹುತೇಕ ಅಸಾಧಾರಣ ಪುನರಾಗಮನವನ್ನು ಮಾಡಿದರು. ಆಟವನ್ನು ವಿಸ್ತರಿಸಲು ಆರು ಅಂಕಗಳನ್ನು ಗಳಿಸಿದರು. ಆದರೆ ಲೀ ಗೆಲುವಿಗೆ ಅವಕಾಶ ಕೊಡಲಿಲ್ಲ.

ಈ ಮೂಲಕ ಭಾರತ 8 ಚಿನ್ನ ಸೇರಿದಂತೆ 31 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಶೂಟಿಂಗ್​ನಲ್ಲಿ ಎರಡು ಚಿನ್ನ, ಎರಡು ಬೆಳ್ಳಿ

ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ ಶೂಟರ್​ ಪಲಕ್​ ಚಿನ್ನ ಗೆದ್ದರೆ ಇಶಾ ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡರು.

ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್​ನಲ್ಲಿ ಪಲಕ್ 242.1 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಚಿನ್ನ ಗೆದ್ದರು. ಇಶಾ 239.7 ಅಂಕಗಳೊಂದಿಗೆ ಬೆಳ್ಳಿ ಪದಕದೊಂದಿಗೆ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. ಪಾಕಿಸ್ತಾನದ ತಲಾತ್ 218.2 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು.

ಪುರುಷರ ತಂಡಕ್ಕೆ ಚಿನ್ನ

ಶುಕ್ರವಾರ ಪುರುಷರ 50 ಮೀಟರ್ ರೈಫಲ್ 3ಪಿ ತಂಡ ಸ್ಪರ್ಧೆಯಲ್ಲಿ ಭಾರತ 1769 ಅಂಕಗಳೊಂದಿಗೆ ಚಿನ್ನ ಗೆದ್ದಿದೆ. ತಂಡದಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಸ್ವಪ್ನಿಲ್ ಸುರೇಶ್ ಕುಸಲೆ ಮತ್ತು ಅಖಿಲ್ ಶಿಯೋರನ್ ಇದ್ದರು. ವೈಯಕ್ತಿಕ ಅರ್ಹತಾ ಸುತ್ತಿನಲ್ಲಿ ಸ್ವಪ್ನಿಲ್ ಒಟ್ಟು 591-33x ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಐಶ್ವರ್ಯಾ 591-27x ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ಅಖಿಲ್ 587-30x ಅಂಕಗಳೊಂದಿಗೆ ಐದನೇ ಸ್ಥಾನ ಪಡೆದರು. ಮೂವರೂ ಫೈನಲ್ ಗೆ ಪ್ರವೇಶ ಪಡೆದುಕೊಂಡರು.

ಇದನ್ನೂ ಓದಿ : World Cup 2023 : ವಿಶ್ವ ಕಪ್​ ಆಡಲು ಬಂದ ಪಾಕ್​ ತಂಡದ ಊಟಕ್ಕೆ ಬೀಫ್​ ಕೊಡಲ್ಲ ಎಂದ ಭಾರತ

ಮಹಿಳೆಯರ ತಂಡಕ್ಕೆ ಬೆಳ್ಳಿ

ಪಾಲಕ್, ಇಶಾ ಸಿಂಗ್ ಮತ್ತು ದಿವ್ಯಾ ತಡಿಗೋಲ್ ಅವರನ್ನೊಳಗೊಂಡ ಭಾರತೀಯ ಶೂಟಿಂಗ್ ತಂಡ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದೆ. ಈ ಮೂಲಕ ಭಾರತ ಆರನೇ ದಿನದ ಸ್ಪರ್ಧೆಯಲ್ಲಿ ಶುಭಾರಂಭ ಮಾಡಿದೆ.

10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಭಾರತ 1731-50 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದು ಎರಡನೇ ಸ್ಥಾನ ಪಡೆಯಿತು. ಚೀನಾ 1736-66x ಅಂಕಗಳೊಂದಿಗೆ ಚಿನ್ನ ಗೆದ್ದುಕೊಂಡಿತು. ಭಾರತೀಯ ತಂಡದಲ್ಲಿ ಪಾಲಕ್, ಇಶಾ ಸಿಂಗ್ ಮತ್ತು ದಿವ್ಯಾ ಸುಬ್ಬರಾಜು ತಡಿಗೋಳ್ ಇದ್ದರು. ಅಲ್ಲದೆ, ಅರ್ಹತಾ ಸುತ್ತಿನಲ್ಲಿ ಇಶಾ ಐದನೇ ಸ್ಥಾನ ಪಡೆದರೆ, ಪಾಲಕ್ ಏಳನೇ ಸ್ಥಾನ ಪಡೆದರು. ಈ ಜೋಡಿ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ಫೈನಲ್ಗೆ ಅರ್ಹತೆ ಪಡೆದಿದೆ. ಇದು ಭಾರತದ ಪಾಲಿಗೆ ದಿನದ ಮೊದಲ ಪದಕ ಎನಿಸಿಕೊಂಡಿತು.

ಟೆನಿಸ್​ನಲ್ಲಿ ಬೆಳ್ಳಿ

ಟೆನಿಸ್​ನ ಡಬಲ್ಸ್​ನ ಫೈನಲ್​ನಲ್ಲಿ ಭಾರತದ ಜೋಡಿಯಾಗಿರುವ ಸಾಕೇತ್ ಮೈನೇನಿ ಹಾಗೂ ರಾಮ್​ಕುಮಾರ್ ರಾಮನಾಥನ್​ ಅವರು ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ಈ ಜೋಡಿ ಚೈನಿಸ್​ ತೈಪೆಯ ಜೇಸನ್​ ಮತ್ತು ಸು ವಿರುದ್ದ 4-6, 4-6 ಅಂತರದಿಂದ ಪರಾಜಯ ಎದುರಿಸುವ ಮೂಲಕ ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟರು.

Exit mobile version