ಹರಾರೆ : ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ (IND vs ZIM ODI) ಮೊದಲ ಪಂದ್ಯದಲ್ಲಿ ಭಾರತ ತಂಡ ೧೦ ವಿಕೆಟ್‌ಗಳಿಂದ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಸರಣಿಯಲ್ಲಿ ೧-೦ ಮುನ್ನಡೆ ಪಡೆದುಕೊಂಡಿದೆ. ಆರಂಭಿಕ ಬ್ಯಾಟರ್‌ಗಳಾದ ಶಿಖರ್ (೮೧*) ಧವನ್ ಹಾಗೂ ಶುಬ್ಮನ್ ಗಿಲ್ (೮೨*) ಜೋಡಿಯ ಮುರಿಯದ ಶತಕದ ಜತೆಯಾಟ ಭಾರತದ ಗೆಲುವಿನ ಸುಲಭವಾಗಿಸಿದತು. ಅದಕ್ಕಿಂತ ಮೊದಲು ಭಾರತದ ಬೌಲರ್‌ಗಳು ಆತಿಥೇಯ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿಯುವ ಮೂಲಕ ಗೆಲುವಿಗೆ ಅಡಿಪಾಯ ಹಾಕಿಕೊಟ್ಟಿದ್ದರು.
ಹರಾರೆ ಸ್ಪೋರ್ಟ್ ಕ್ಲಬ್ ಗ್ರೌಂಡ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡ ೪೦.೩ ಓವರ್‌ಗಳಲ್ಲಿ ೧೮೯ ರನ್‌ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಭಾರತ 30.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 192 ರನ್ ಬಾರಿಸಿ ಜಯ ಸಾಧಿಸಿತು.
ಹಿಂದಿನ ವೆಸ್ಟ್ ಇಂಡೀಸ್ ವಿರುದ್ಧದ ಏಕ ದಿನ ಸರಣಿಯಲ್ಲಿ ಉತ್ತಮ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ್ದ ಭಾರತ ತಂಡದ ಆರಂಭಿಕ ಜೋಡಿ ಶಿಖರ್ ಧವನ್ ಹಾಗೂ ಶುಬ್ಮನ್ ಗಿಲ್ ಆರಂಭದಿಂದಲೇ ಜಿಂಬಾಬ್ವೆ ಬೌಲರ್‌ಗಳು ಪರಿತಪಿಸುವಂತೆ ಮಾಡಿದರು. ೧೧.೨ ಓವರ್‌ಗಳಲ್ಲಿ ೫೦ ರನ್ ಬಾರಿಸಿದ ಈ ಜೋಡಿ ಗೆಲುವಿನ ವಿಶ್ವಾಸ ಮೂಡಿಸಿತು. ೧೯. ಓವರ್‌ಗಳಲ್ಲಿ ೧೦೦ ರನ್ ಪೂರೈಸಿದ ನಂತರದಲ್ಲಿ ನಿರಂತರವಾಗಿ ರನ್ ಗಳಿಸುತ್ತಾ ಸಾಗಿ ಭಾರತಕ್ಕೆ ಗೆಲುವು ತಂದುಕೊಟ್ಟಿತು. ಶಿಖರ್ ಧವನ್ ೬೮ ಎಸೆತಗಳಲ್ಲಿ ಅರ್ಧ ಶತಕ ಬಾರಿಸುವ ಜತೆಗೆ ೧೧೩ ಎಸೆತಗಳಲ್ಲಿ ೮೧ ರನ್ ಬಾರಿಸಿದರು. ವೇಗವಾಗಿ ರನ್ ಗಳಿಸಿದ ಶುಬ್ಮನ್ ಗಿಲ್ ೭೨ ಎಸೆತಗಳಲ್ಲಿ ೮೨ ರನ್ ಬಾರಿಸಿದರು.
ಮಿಂಚಿದ ಬೌಲರ್‌ಗಳು
ಮೊದಲು ಬ್ಯಾಟಿಂಗ್‌ಗೆ ಆಹ್ವಾನ ಪಡೆದ ಜಿಂಬಾಬ್ವೆ ತಂಡ ಭಾರತದ ಬೌಲರ್‌ಗಳ ಪರಾಕ್ರಮಕ್ಕೆ ಬೆಚ್ಚಿಬಿತ್ತು. ೬೬ ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಏತನ್ಮಧ್ಯೆ, ರೇಗಿಸ್ ಚಕಬ್ವಾ ೩೫ ರನ್ ಬಾರಿಸಿದರೆ, ಕೊನೆಯಲ್ಲಿ ಬ್ರಾಡ್ ಎವಾನ್ಸ್ ಅಜೇಯ ೩೩ ರನ್ ಹಾಗೂ ರಿಚರ್ಡ್ ಎನ್‌ಗರವ ೩೪ ರನ್ ಗಳಿಸಿದರು. ಇವರಿಬ್ಬರು ೯ನೇ ವಿಕೆಟ್‌ಗೆ ೭೦ ರನ್ ಬಾರಿಸುವ ಮೂಲಕ ತಂಡ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದರು. ಭಾರತದ ಬೌಲಿಂಗ್ ಪರ ದೀಪಕ್ ಚಾಹರ್ ೨೭ ರನ್‌ಗಳಿಗೆ ೩ ವಿಕೆಟ್ ಕಬಳಿಸಿದರೆ, ಪ್ರಸಿದ್ಧ್ ಕೃಷ್ಣ ೫೦ ರನ್‌ಗಳಿಗೆ ೩ ವಿಕೆಟ್ ತಮ್ಮದಾಗಿಸಿಕೊಂಡರು. ಸ್ಪಿನ್ನರ್ ಅಕ್ಷರ್ ಪಟೇಲ್ ೨೪ ರನ್‌ಗಳಿಗೆ ೩ ವಿಕೆಟ್ ಉರುಳಿಸಿದರು.
ಸ್ಕೋರ್ ವಿವರ
ಜಿಂಬಾಬ್ವೆ : 40.3 ಓವರ್‌ಗಳಲ್ಲಿ ೧೮೯ (ರೆಗಿಸ್ ಚಕಬ್ವಾ ೩೫, ಬ್ರಾಡ್ ಎವಾನ್ಸ್ ಅಜೇಯ ೩೩, ರಿಚರ್ಡ್ ಎನ್‌ಗರವ ೩; ದೀಪಕ್ ಚಾಹರ್ ೨೭ಕ್ಕೆ೩, ಪ್ರಸಿದ್ಧ್ ಕೃಷ್ಣ ೫೦ಕ್ಕೆ೩, ಅಕ್ಷರ್ ಪಟೇಲ್ ೨೪ಕ್ಕೆ೩).
ಭಾರತ : 30.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ೧೯೨ (ಶಿಖರ್ ಧವನ್ ೮೧*, ಶುಬ್ಮನ್ ಗಿಲ್ ೮೨*)
ಇದನ್ನೂ ಓದಿ | IND vs ZIM ODI | ದೀಪಕ್ ಚಾಹರ್ ಭರ್ಜರಿ ರೀ ಎಂಟ್ರಿ, 7 ಓವರ್‌ಗಳಲ್ಲಿ 3 ವಿಕೆಟ್ ಕಬಳಿಸಿದ ಮಧ್ಯಮ ವೇಗಿ