ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ (Ind vs SA) ಭಾರತ ತಂಡ 106 ರನ್ಗಳ ಬೃಹತ್ ಅಂತರದ ಗೆಲುವು ದಾಖಲಿಸಿದೆ. ಶತಕ ಬಾರಿಸಿದ ಸೂರ್ಯಕುಮಾರ್ ಯಾದವ್ (100) ಹಾಗೂ 17 ರನ್ಗಳಿಗೆ 5 ವಿಕೆಟ್ ಉರುಳಿಸಿದ ಕುಲ್ದೀಪ್ ಯಾದವ್ ಮೂರನೇ ಪಂದ್ಯ ಗೆಲುವಿನ ರೂವಾರಿಗಳೆನಿಸಿಕೊಂಡರು. ಇದು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತಕ್ಕೆ ಲಭಿಸಿದ ಇದುವರೆಗಿನ ಗರಿಷ್ಠ ರನ್ಗಳ ಅಂತರದ ಗೆಲುವಾಗಿದೆ. ಈ ಇದರೊಂದಿಗೆ ಸರಣಿಯು 1-1 ಅಂತರದಿಂದ ಸಮಬಲಗೊಂಡಿತು. ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರೆ, ಎರಡನೇ ಹಣಾಹಣಿಯಲ್ಲಿ ಭಾರತ ತಂಡ ಐದು ವಿಕೆಟ್ಗಳ ಸೋಲಿಗೆ ಒಳಗಾಗಿತ್ತು. ಆದರೆ, ಮೂರನೇ ಪಂದ್ಯದಲ್ಲಿ ಭಾರತ ಬಳಗ ಬೃಹತ್ ವಿಜಯವನ್ನು ತನ್ನದಾಗಿಸಿಕೊಂಡಿದೆ.
ಇಲ್ಲಿನ ದಿ ವಾಂಡರರ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 13.5 ಓವರ್ಗಳಲ್ಲಿ 95 ರನ್ಗಳಿಗೆ ಆಲ್ಔಟ್ ಆಯಿತು. ಭಾರತದ ಬೌಲರ್ಗಳ ಮುಂದೆ ತಣ್ಣಗಾದ ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್ಗಳು ಸತತವಾಗಿ ವಿಕೆಟ್ ಒಪ್ಪಿಸಿದರು. ನಾಯಕ ಏಡೆನ್ ಮಾರ್ಕ್ರಮ್ 14 ಎಸೆತಕ್ಕೆ 25 ರನ್ ಬಾರಿಸಿದರೆ, ಡೇವಿಡ್ ಮಿಲ್ಲರ್ 25 ಎಸೆತಕ್ಕೆ 35 ರನ್ ಬಾರಿಸಿದ್ದು ಹರಿಣಗಳ ಪಡೆಯ ಪಾಲಿಗೆ ಗರಿಷ್ಠ ರನ್ ಎನಿಸಿಕೊಂಡಿತು. ಡೆನ್ವೊನ್ ಪೆರೆರಾ 12 ರನ್ ಬಾರಿಸಿದರೆ ಉಳಿದವರೆಲ್ಲರೂ ಒಂದಂಕಿ ಮೊತ್ತಕ್ಕೆ ಸೀಮಿತಗೊಂಡರು.
🇿🇦 won the toss, but 🇮🇳 decided to smash it first 💪
— Royal Challengers Bangalore (@RCBTweets) December 14, 2023
Time for some magic with the ball now, boys ✨⏭️#PlayBold #SAvIND #TeamIndia pic.twitter.com/L8z9accKyN
ಬರ್ತ್ಡೇ ಬಾಯ್ ಕುಲ್ದೀಪ್ ಯಾದವ್ ಮಾರಕ ದಾಳಿ ಸಂಘಟಿಸಿ ದಕ್ಷಿಣ ಆಫ್ರಿಕಾದ ಬ್ಯಾಟರ್ಗಳು ನಿರುತ್ತರರಾಗುವಂತೆ ನೋಡಿಕೊಂಡರು. 2.5 ಓವರ್ಗಳಲ್ಲಿ 17 ರನ್ ನೀಡಿದ ಅವರು 5 ವಿಕೆಟ್ ಸಾಧನೆ ಮಾಡಿದರು.
Stand-in #TeamIndia captain @imjadeja dismisses the South African captain off his first ball 😮
— Star Sports (@StarSportsIndia) December 14, 2023
Tune-in to the 3rd #SAvIND T20I
LIVE NOW | Star Sports Network#Cricket pic.twitter.com/dsLp3H9PFi
ಸೂರ್ಯ ಶತಕದ ಸಂಭ್ರಮ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಮೊದಲ ಎರಡು ವಿಕೆಟ್ಗಳನ್ನು 29 ರನ್ಗಳಿಗೆ ಕಳೆದುಕೊಂಡಿತು. ಆದರೆ ಆ ಬಳಿಕ ಜತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ಯಶಸ್ವಿ ಜೈಸ್ವಾಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ 132 ರನ್ಗಳ ಜತೆಯಾಟ ನೀಡುವ ಮೂಲಕ ಕುಸಿದ ಭಾರತಕ್ಕೆ ನೆರವಾದರು. ಇಬ್ಬರೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಜೈಸ್ವಾಲ್ 60 ರನ್ಗಳಿಗೆ ಔಟಾದರು. ಆ ಬಳಿಕವೂ ಬ್ಯಾಟಿಂಗ್ ಅಬ್ಬರ ಮುಂದುವರಿಸಿದ ಸೂರ್ಯಕುಮಾರ್ ಶತಕ ಬಾರಿಸಿದರು. ಇದು ಅವರ ಪಾಲಿನ 4ನೇಋ ಟಿ20 ಶತಕವಾಗಿದೆ.
Arsh's 2️⃣6️⃣th T20I scalp this year ☝️
— Punjab Kings (@PunjabKingsIPL) December 14, 2023
Joint-most among full-member nation players 🔥#ArshdeepSingh #SAvINDpic.twitter.com/Z37wWzYSui
ರೋಹಿತ್ ಸಾಲಿಗೆ ಸೂರ್ಯ
55 ಎಸೆತಗಳಲ್ಲಿ 4ನೇ ಟಿ20 ಶತಕ ಬಾರಿಸಿದ 33ರ ಹರೆಯದ ಸೂರ್ಯಕುಮಾರ್ , ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ರೋಹಿತ್ ಶರ್ಮಾ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರ ಸಾಲಿಗೆ ಸೇರಿಕೊಂಡರು. ಸೂರ್ಯಕುಮಾರ್ ಯಾದವ್ 7 ಬೌಂಡರಿ ಮತ್ತು 8 ಸಿಕ್ಸರ್ಗಳನ್ನು ಒಳಗೊಂಡ 100 ರನ್ ಗಳಿಸುವ ಮೂಲಕ ಭಾರತವನ್ನು 201 ರನ್ಗಳ ಕಡೆಗೆ ಮುನ್ನಡೆಸಿದರು.
ಇದನ್ನೂ ಓದಿ : Suryakumar Yadav : ವಿರಾಟ್ ಕೊಹ್ಲಿಯ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ 20 ಐ ಸ್ವರೂಪದಲ್ಲಿ ನಾಲ್ಕು ಶತಕಗಳನ್ನು ಗಳಿಸಿದ ಮೊದಲ ಆಟಗಾರ. ಆಸ್ಟ್ರೇಲಿಯಾದ ಸ್ಫೋಟಕ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಕಳೆದ ತಿಂಗಳು ಗುವಾಹಟಿಯಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ನೇ ಟಿ 20 ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಸೂರ್ಯಕುಮಾರ್ ಯಾದವ್ ಅವರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.