ದುಬೈ : ಏಷ್ಯಾ ಕಪ್‌ನ ಅತ್ಯಂತ ರೋಚಕ ಹಣಾಹಣಿಯಾಗಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮ ಟಾಸ್ ಗೆದ್ದಿದ್ದು, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ದುಬೈ ಇಂಟರ್‌ನ್ಯಾಷನ್ ಸ್ಟೇಡಿಯಮ್‌ನಲ್ಲಿ ಈ ಪಂದ್ಯ ನಡೆಯುತ್ತಿದ್ದು, ಎದುರಾಳಿ ಬಾಬರ್ ಅಜಮ್ ಬಳಗವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿ ಗೆಲ್ಲುವ ಯೋಜನೆಯನ್ನು ನಾಯಕ ರೋಹಿತ್ ಶರ್ಮ ರೂಪಿಸಿದ್ದಾರೆ.
ಭಾರತ ತಂಡ ಪ್ರಕಟಿಸಲಾಗಿದ್ದು, ಕಾಯಂ ವಿಕೆಟ್‌ಕೀಪರ್ ರಿಷಭ್ ಪಂತ್ ಅವರನ್ನು ಬೆಂಚು ಕಾಯಿಸಲಾಗಿದ್ದು, ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಲಾಗಿದೆ. ಅಂತೆಯೇ ಅರ್ಶ್‌ದೀಪ್ ಸಿಂಗ್ ಹಾಗೂ ಆವೇಶ್ ಖಾನ್ ಇಬ್ಬರೂ ಅವಕಾಶ ಪಡೆದುಕೊಂಡಿದ್ದಾರೆ. ಪಾಕಿಸ್ತಾನ ತಂಡದ ಪರ ನಾಸಿನ್ ಶಾ ಪದಾರ್ಪಣೆ ಮಾಡಿದ್ದಾರೆ.
ಏಷ್ಯಾ ಕಪ್‌ನಲ್ಲಿ ಇದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ 15 ನೇ ಪಂದ್ಯವಾಗಿದ್ದು ಇದುವರೆಗಿನ ೧೪ ಹಣಾಹಣಿಗಳಲ್ಲಿ ಭಾರತ ೮, ಪಾಕಿಸ್ತಾನ ೫ ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಪ್ರಕಟವಾಗಿಲ್ಲ.
ತಂಡಗಳು
ಭಾರತ : ರೋಹಿತ್ ಶರ್ಮ (ನಾಯಕ), ಕೆ ಎಲ್. ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಯಜ್ವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್.
ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಇಫ್ತಿಕಾರ್ ಅಹಮದ್, ಆಸಿಫ್ ಅಲಿ, ಖುಷ್‌ದಿಲ್ ಶಾ, ಮೊಹಮ್ಮದ್ ನವಾಜ್, ಶದಬ್ ಖಾನ್, ನಾಸಿಮ್ ಶಾ, ಹ್ಯಾರಿಸ್ ರವೂಫ್, ಶಹನವಾಜ್ ದಹಾನಿ.
ಇದನ್ನೂ ಓದಿ | IND vs PAK | ಭಾರತ- ಪಾಕಿಸ್ತಾನ ಪಂದ್ಯದ ಜಾಹೀರಾತು ಬೆಲೆ 10 ಸೆಕೆಂಡ್‌ಗೆ 18 ಲಕ್ಷ ರೂಪಾಯಿ!