ಬರ್ಮಿಂಗ್ಹಮ್ : ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ ಭಾರತದ ಬ್ಯಾಡ್ಮಿಂಟನ್ ಮಿಶ್ರ ತಂಡ, ಕಾಮನ್ವೆಲ್ತ್ ಗೇಮ್ಸ್‌ನ (CWG- 2022) ಸೆಮಿ ಫೈನಲ್ಸ್ ಹಂತಕ್ಕೇರಿದೆ. ಭಾನುವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಆಫ್ರಿಕಾ ವಿರುದ್ಧ ಭಾರತ ಆಟಗಾರರು ಸಂಪೂರ್ಣವಾಗಿ ಪಾರಮ್ಯ ಮೆರೆದು, ೩-೦ ಅಂತರದಿಂದ ವಿಜಯೋತ್ಸವ ಆಚರಿಸಿದರು.
ಬೆಸ್ಟ್ ಆಫ್ ಫೈವ್ ಸ್ಪರ್ಧೆಯ ಮೊದಲ ಪಂದ್ಯದಲ್ಲಿ ಭಾರತದ ಮಿಶ್ರ ಡಬಲ್ಸ್ ಜೋಡಿಯಾಗಿರುವ ಸುಮೀತ್ ರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ೨೧-೯, ೨೧-೧೧ ನೇರ ಗೇಮ್‌ಗಳಿಂದ ದಕ್ಷಿಣ ಆಫ್ರಿಕಾದ ಜರೆಡ್ ಎಲಿಯಟ್ ಹಾಗೂ ಡಿಯೆಡ್ರಾ ಜೋರ್ಡನ್ ವಿರುದ್ಧ ಜಯ ಸಾಧಿಸಿದರು. ಎರಡನೇ ಪಂದ್ಯದಲ್ಲಿ ಲಕ್ಷ್ಯ ಸೇನ್ ೨೧-೯, ೨೧-೧೧ ಗೇಮ್‌ಗಳಿಂದ ಕಡೆನ್ ಕಕೊರಾ ವಿರುದ್ಧ ಜಯ ಸಾಧಿಸಿದರು.
ಮೂರನೇ ಪಂದ್ಯದಲ್ಲಿ ಭಾರತದ ಆಕರ್ಷಿ ಕಶ್ಯಪ್ ಅವರ ದಕ್ಷಿಣ ಆಫ್ರಿಕಾದ ಜೊಹಾನಿಟಾ ಶೋಲ್ಡ್ಸ್ ವಿರುದ್ಧ ೨೧-೧೧, ೨೧-೧೬ ಗೇಮ್‌ಗಳಿಂದ ಜಯ ಸಾಧಿಸಿದರು. ಸೋಮವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಭಾರತ ತಂಡ ಬಲಿಷ್ಠ ಸಿಂಗಾಪುರವನ್ನು ಎದುರಿಸಲಿದೆ.