Site icon Vistara News

CWG- 2022 | ಭಾರತ ಬ್ಯಾಡ್ಮಿಂಟನ್‌ ತಂಡಕ್ಕೆ ಬೆಳ್ಳಿಯ ಬೆಡಗು, ಮಲೇಷ್ಯಾ ಚಾಂಪಿಯನ್‌

CWG-2022

ಬರ್ಮಿಂಗ್ಹಮ್‌: ಭಾರತ ಮಿಶ್ರ ಬ್ಯಾಡ್ಮಿಂಟನ್‌ ತಂಡ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG- 2022) ಬೆಳ್ಳಿಯ ಪದಕ ಗೆದ್ದುಕೊಂಡಿದೆ. ಇದರೊಂದಿಗೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ೧೩ಕ್ಕೆ ಏರಿಕೆಯಾಗಿದೆ. ಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್‌ಅಪ್‌ ಮಲೇಷ್ಯಾ ವಿರುದ್ಧ ೩-೧ ಅಂತರದಿಂದ ಸೋಲು ಕಂಡ ಭಾರತದ ಸ್ಪರ್ಧಿಗಳು ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಮಂಗಳವಾರ ತಡರಾತ್ರಿ ನಡೆದ ಪ್ರಶಸ್ತಿ ಸುತ್ತಿನ ಫೈಟ್‌ನ ಮೊದಲ ಪಂದ್ಯದಲ್ಲಿ ಭಾರತದ ಪುರುಷರ ಡಬಲ್ಸ್‌ ತಂಡ ಮೊದಲ ಸೋಲಿಗೆ ಒಳಗಾದರೆ, ಸ್ಟಾರ್‌ ಆಟಗಾರ್ತಿ ಪಿ.ವಿ ಸಿಂಧೂ ಗೆಲುವು ಕಂಡರು. ಹೀಗಾಗಿ ಇತ್ತಂಡಗಳ ನಡುವೆ ೧-೧ರ ಸಮಬಲದ ಸಾಧನೆ ಕಂಡುಬಂತು. ಬಳಿಕ ಕಿಡಂಬಿ ಶ್ರೀಕಾಂತ್‌ ಸಿಂಗಲ್ಸ್‌ನಲ್ಲಿ ಎದುರಾಳಿ ತಂಡದ ವಿರುದ್ಧ ಸೋಲುಕಂಡರು .ಅಂತೆಯೇ ನಾಲ್ಕನೇ ಪಂದ್ಯದಲ್ಲಿ ತ್ರಿಸಾ ಜೊಲ್ಲಿ ಹಾಗೂ ಗಾಯತ್ರಿ ಗೋಪಿಚಂದ್‌ ಅವರಿದ್ದ ಮಹಿಳೆಯರ ಡಬಲ್ಸ್‌ ಬಳಗವೂ ಪರಾಭವಗೊಂಡಿತು. ಹೀಗಾಗಿ ಭಾರತಕ್ಕೆ ಸುಲಭ ಸೋಲಿಗೆ ಒಳಗಾಯಿತು.

ಮಲೇಷ್ಯಾ ತಂಡ ೨೦೧೮ ರ ಗೋಲ್ಡ್‌ ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ವಿರುದ್ಧ ೩-೧ ಅಂತರದಿಂದ ಸೋಲು ಕಂಡಿತ್ತು. ಇದೀಗ ಅದೇ ಅಂತರದಿಂದ ಭಾರತವನ್ನು ಸೋಲಿಸಿ ಸೇಡು ತೀರಿಸಿಕೊಂಡಿತು.

ಸ್ಟಾರ್‌ ಆಟಗಾರ್ತಿ ಪಿ.ವಿ. ಸಿಂಧೂ ಸೋಲಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಪುಟಿದೇಳುವ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.

ಈ ಬೆಳ್ಳಿಯೊಂದಿಗೆ ಭಾರತಕ್ಕೆ ಒಟ್ಟಾರೆ ೫ ರಜತ ಪದಕಗಳ ಸಿಕ್ಕಂತಾಗಿದೆ. ಅಂತೆಯೇ ಐದು ಚಿನ್ನ ಹಾಗೂ ಮೂರು ಕಂಚು ಸೇರಿ ಒಟ್ಟಾರೆ ೧೩ ಪದಕಗಳು ಲಭಿಸಿವೆ

Exit mobile version