Site icon Vistara News

Doping Test : ಮಾದಕವಸ್ತು ಬಲೆಯಲ್ಲಿ ಸಿಲುಕಿದರೇ ಭಾರತದ ಬಾಕ್ಸರ್​ಗಳು?

Boxing Champion

ನವದೆಹಲಿ: ಏಷ್ಯನ್ ಗೇಮ್ಸ್​​ನಲ್ಲಿ ಪದಕ ಗೆದ್ದ ಭಾರತೀಯ ಮಹಿಳಾ ಬ್ಯಾಕ್ಸರ್​ಗಳಲ್ಲಿ ಒಬ್ಬರು ಸ್ಪರ್ಧೆಯ ಸಮಯದಲ್ಲಿ ನಡೆಸಿದ ಡೋಪಿಂಗ್ ಟೆಸ್ಟ್​​ನಲ್ಲಿ (Doping Test) ವಿಫಲವಾದ ಕಾರಣ ಪದಕ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ಕೋಟಾವನ್ನು ಕಸಿದುಕೊಳ್ಳುವ ಅಪಾಯವನ್ನು ಎದುರಿಸುತ್ತಿದ್ದಾರೆ. ಬಾಕ್ಸರ್​ಗಳ ಗುರುತನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ, ಏಷ್ಯನ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದ ನಾಲ್ವರಲ್ಲಿ ಲವ್ಲಿನಾ ಬೊರ್ಗೊಹೈನ್ ಅಥವಾ ನಿಖಾತ್ ಝರೀನ್ ಕೂಡ ಆಗಿರಬಹುದು ಎಂದು ಹೇಳಲಾಗಿದೆ. ಒಂದು ವೇಳೆ ಇವರೊಬ್ಬರಲ್ಲಿ ಒಬ್ಬರು ಆಗಿದ್ದರೆ ಮುಂದಿನ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆಯಾಗುವುದು ಗ್ಯಾರಂಟಿ.

ಪಿಟಿಐ ವರದಿಯ ಪ್ರಕಾರ ಭಾರತೀಯ ಬಾಕ್ಸರ್ ಒಬ್ಬರು ಖಂಡಿತವಾಗಿಯೂ ಡೋಪಿಂಗ್ ಬಲೆಯಲ್ಲಿದ್ದಾರೆ. ಕಾಂಟಿನೆಂಟಲ್ ಮಲ್ಟಿ-ಸ್ಪೋರ್ಟ್ ಈವೆಂಟ್ ಗೆ ಮುಂಚಿನ ಅವಧಿಯಲ್ಲಿ ಬಾಕ್ಸರ್​ ತಮ್ಮ ಇರುವಿಕೆಯನ್ನು ದಾಖಲಿಸಲು ವಿಫಲರಾಗಿದ್ದಾರೆ. ತಪ್ಪಿತಸ್ಥರೆಂದು ಸಾಬೀತಾದರೆ, ಅವರು ಗರಿಷ್ಠ ಎರಡು ವರ್ಷಗಳ ನಿಷೇಧವನ್ನು ಎದುರಿಸಬೇಕಾಗುತ್ತದೆ/ ಇದು ಅವರ ತಪ್ಪಿನ ಪ್ರಮಾಣವನ್ನು ಅವಲಂಬಿಸಿ ಕನಿಷ್ಠ ಒಂದು ವರ್ಷಕ್ಕೆ ಇಳಿಬಹುದು. ಹಾಗಾದರೆ ಏಷ್ಯನ್ ಗೇಮ್ಸ್ ಪದಕ ಮತ್ತು ಪ್ಯಾರಿಸ್ ಒಲಿಂಪಿಕ್ ಕೋಟಾವನ್ನು ಕಳೆದುಕೊಳ್ಳಬಹುದು. ಫಲಿತಾಂಶ ನಿರ್ವಹಣಾ ಪ್ರಕ್ರಿಯೆ ಸೇರಿದಂತೆ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಡೋಪಿಂಗ್ ವಿರೋಧಿ ಅಭಿಯಾನ ನಿರ್ವಹಿಸಲು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಕಠಿಣ ಕ್ರಮ ಕೈಗೊಂಡಿತ್ತು.

ಇದನ್ನೂ ಓದಿ : Team India : ಇನ್ನೆರಡು ದಿನ ಧರ್ಮಶಾಲಾದಲ್ಲಿ ಉಳಿಯುವುದಾಗಿ ಹೇಳಿದ ಟೀಮ್ ಇಂಡಿಯಾ

ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್ಐ) ಈ ವಿಷಯದ ಬಗ್ಗೆ ಆಶಾವಾದಿಯಾಗಿದೆ. “ಏಷ್ಯನ್ ಗೇಮ್ಸ್​ ಮುಂಚಿನ ಅವಧಿಗೆ ನೋಟಿಸ್ ನೀಡಲಾಗಿದ್ದು, ಕ್ರೀಡಾಕೂಟದ ನಂತರವೇ ಫೆಡರೇಶನ್​ಗೆ ಈ ಬಗ್ಗೆ ತಿಳಿದಿದೆ. ಆ ಸಮಯದಲ್ಲಿ ಬಾಕ್ಸರ್ ತನ್ನ ಹೆತ್ತವರಲ್ಲಿ ಒಬ್ಬರಿಗೆ ಗಂಭೀರ ವೈದ್ಯಕೀಯ ಸ್ಥಿತಿ ಎದುರಿಸಿದ್ದ ಕಾರಣ ಮಾನಸಿಕವಾಗಿ ಕುಗ್ಗಿದ್ದರು” ಎಂದು ಬಿಎಫ್ಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಬಿಎಫ್ಐ ಕಾನೂನು ತಂಡಕ್ಕೆ ಮಾಹಿತಿ ನೀಡಲಾಗಿದೆ. ಅದು ಈ ವಿಷಯವನ್ನು ಪರಿಶೀಲಿಸುತ್ತಿದೆ. ಪದಕ ಅಥವಾ ಒಲಿಂಪಿಕ್ ಕೋಟಾವನ್ನು ಕಸಿದುಕೊಳ್ಳುವಂತಹ ಸಮಸ್ಯೆ ಇರಬಾರದು, ಏಕೆಂದರೆ ವೈಫಲ್ಯದ ಕಾರಣವನ್ನು ನಾವು ವಿವರಿಸುತ್ತೇವೆ” ಎಂದು ಅಧಿಕಾರಿ ಹೇಳಿದ್ದಾರೆ.

ನಿಯಮಗಳು ಏನು ಹೇಳುತ್ತವೆ

ನೋಂದಾಯಿತ ಪರೀಕ್ಷಾ ಪೂಲ್ (ಆರ್ ಟಿಪಿ) ಭಾಗವಾಗಿರುವ ಕ್ರೀಡಾಪಟುಗಳು ತ್ರೈಮಾಸಿಕ ಇರುವಿಕೆ ಮಾಹಿತಿ ಸಲ್ಲಿಸಬೇಕಾಗುತ್ತದೆ. ವಾಡಾ ನಿಯಮಗಳ ಪ್ರಕಾರ, “12 ತಿಂಗಳ ಅವಧಿಯಲ್ಲಿ ಮೂರು ವೈಫಲ್ಯಗಳ (ಫೈಲಿಂಗ್ ವೈಫಲ್ಯ ಮತ್ತು / ಅಥವಾ ತಪ್ಪಿದ ಪರೀಕ್ಷೆ) ಯಾವುದೇ ಸಂಯೋಜನೆಯು ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆಯಾಗುತ್ತದೆ. ಇದಕ್ಕಾಗಿ ಅನ್ವಯವಾಗುವ ಶಿಕ್ಷೆ 2 ವರ್ಷಗಳ ಅನರ್ಹತೆ. ದೋಷದ ಮಟ್ಟವನ್ನು ಅವಲಂಬಿಸಿ ಕನಿಷ್ಠ 1 ವರ್ಷಕ್ಕೆ ಇಳಿಸಲಾಗುತ್ತದೆ.” ಏಷ್ಯನ್ ಗೇಮ್ಸ್​ನಲ್ಲಿ ವಿಶ್ವ ಚಾಂಪಿಯನ್ ಲವ್ಲಿನಾ ಬೊರ್ಗೊಹೈನ್ ಗೆದ್ದ ಬೆಳ್ಳಿ ಸೇರಿದಂತೆ ಐದು ಪದಕಗಳು ಭಾರತೀಯ ಬಾಕ್ಸಿಂಗ್ ತಂಡಕ್ಕೆ ಲಭಿಸಿತ್ತು. ಜತೆಗೆ ನಾಲ್ಕು ಒಲಿಂಪಿಕ್ ಕೋಟಾಗಳೂ ಲಭಿಸಿದ್ದವು.

ಏಷ್ಯನ್ ಗೇಮ್ಸ್ ಬಾಕ್ಸಿಂಗ್ ನಲ್ಲಿ ಭಾರತ

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಬಾಕ್ಸಿಂಗ್ ವಿಭಾಗ ಅಚ್ಚರಿ ಎಂಬಂತೆ ಕಳಪೆ ಪ್ರದರ್ಶನ ನೀಡಿತ್ತು. ನಮ್ಮ ಯಾವುದೇ ಬಾಕ್ಸರ್​ಗಳು ಚಿನ್ನದ ಪದಕವನ್ನು ಗೆಲ್ಲಲಿಲ್ಲ. ಲೊವ್ಲಿನಾ ಬೊರ್ಗೊಹೈನ್ ಬೆಳ್ಳಿ ಪದಕ ಗೆದ್ದರೆ, ನಿಖಾತ್ ಝರೀನ್ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದರೂ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಪರ್ವೀನ್ ಹೂಡಾ ಮತ್ತು ಪ್ರೀತಿ ಪವಾರ್ ಇತರ ಇಬ್ಬರು ಪದಕ ವಿಜೇತರು.

Exit mobile version