Site icon Vistara News

Asian Games : ಕ್ರಿಕೆಟ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಭರ್ಜರಿ ವಿಜಯ; ಫೈನಲ್​ಗೆ ಎಂಟ್ರಿ

Asian Games

ಹ್ಯಾಂಗ್ಹೌ: ಋತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ತಂಡ ಏಷ್ಯನ್ ಗೇಮ್ಸ್​ ನ (Asian Games) ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಫೈನಲ್​ಗೆ ಪ್ರವೇಶಿಸಿದೆ. ಶುಕ್ರವಾರ ಬೆಳಗ್ಗೆ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 9 ವಿಕೆಟ್​ ಸುಲಭ ಜಯ ಗಳಿಸಿದ ಟೀಮ್ ಇಂಡಿಯಾ ಕನಿಷ್ಠ ಪಕ್ಷ ಬೆಳ್ಳಿಯ ಪದಕವನ್ನು ಖಚಿತಪಡಿಸಿಕೊಂಡಿದೆ. ಇದೇ ವೇಳೆ ಸೆಮಿಫೈನಲ್​ನಲ್ಲಿ ಭಾರತದ ಬ್ಯಾಟಿಂಗ್ ವೈಭವಕ್ಕೆ ಎದುರಾಳಿ ಬಾಂಗ್ಲಾದೇಶ ತತ್ತರಿಸಿ ಹೋಗಿದ್ದು, ಶನಿವಾರ ಕಂಚಿನ ಪದಕದ ಪಂದ್ಯದಲ್ಲಿ ಆಡಲಿದೆ.

ಇಲ್ಲಿನ ಝೆಜಿಯಾಂಗ್ ಯುನಿವರ್ಸಿಟಿ ಆಫ್ ಟೆಕ್ನಾಲಜಿ ಕ್ರಿಕೆಟ್ ಫೀಲ್ಡ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಭಾರತ ತಂಡ ಬಾಂಗ್ಲಾದೇಶ ತಂಡವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ಭಾರತ ಬೌಲರ್​ಗಳ ಅಬ್ಬರಕ್ಕೆ ನಲುಗಿದ ನೆರೆಯ ದೇಶದ ತಂಡ ನಿಗದಿತ 20 ಓವರ್​ಗಳನ್ನು ಪೂರ್ತಿಯಾಗಿ ಅಡಿದರೂ 9 ವಿಕೆಟ್​ ನಷ್ಟಕ್ಕೆ 96 ರನ್​ಗಳನ್ನು ಮಾತ್ರ ಪೇರಿಸಲು ಶಕ್ತಗೊಂಡಿತು. ಪ್ರತಿಯಾಗಿ ಆಡಿದ ಬಲಿಷ್ಠ ಭಾರತ ತಂಡ ಬಾಂಗ್ಲಾ ವಿರುದ್ಧ ಅಬ್ಬರಿಸಿ ಕೇವಲ 9.2 ಓವರ್​ಗಳಲ್ಲಿ 1 ವಿಕೆಟ್​ ​ ನಷ್ಟಕ್ಕೆ 96 ರನ್ ಬಾರಿಸಿ 9 ವಿಕೆಟ್​ ಸುಲಭ ವಿಜಯ ಗಳಿಸಿತು.

ತಿಲಕ್​ ವರ್ಮಾ ಅಬ್ಬರದ ಬ್ಯಾಟಿಂಗ್​

ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಲು ಹೊರಟ ಭಾರತ ತಂಡ ಯಶಸ್ವಿ ಜೈಸ್ವಾಲ್ ಅವರನ್ನು ಶೂನ್ಯಕ್ಕೆ ಕಳೆದುಕೊಳ್ಳುವ ಮೂಲಕ ಆರಂಭಿಕ ಹಿನ್ನಡೆಗೆ ಒಳಗಾಯಿತು. ಆದರೆ, ಅದರ ಲಾಭವನ್ನು ಪಡೆಯಲು ಮುಂದಿನ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ತಿಲಕ್ ವರ್ಮಾ ಅವಕಾಶ ಕೊಡಲಿಲ್ಲ. ತಿಲಕ್​ ವರ್ಮಾ ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಅರ್ಧ ಶತಕ ಬಾರಿಸಿದರೆ, ಋತುರಾಜ್ ಗಾಯಕ್ವಾಡ್​ 56 ರನ್ ಬಾರಿಸಿದರು. ಮೈದಾನ ತುಂಬಾ ಬೌಂಡರಿ ಸಿಕ್ಸರ್​ಗಳ ಸುರಿಮಳೆ ಸುರಿಸಿದ ತಿಲಕ್ ವರ್ಮಾ 25 ಎಸೆತಕ್ಕೆ ತಮ್ಮ ಅರ್ಧ ಶತಕ ಪೂರೈಸಿದರು. ಅವರ ಇನಿಂಗ್ಸ್​​ನಲ್ಲಿ 2 ಫೋರ್ ಹಾಗೂ 6 ಸಿಕ್ಸರ್​ಗಳು ಇದ್ದವು. ಋತುರಾಜ್​ ಕೂಡ 26 ಎಸೆತಗಳಲ್ಲಿ 4 ಫೋರ್​ ಹಾಗೂ 3 ಸಿಕ್ಸರ್​ಗಳೊಂದಿಗೆ 40 ರನ್ ಬಾರಿಸಿದರು. ಇವರಿಬ್ಬರ ಬ್ಯಾಟಿಂಗ್ ಅಬ್ಬರಕ್ಕೆ ಬಾಂಗ್ಲಾ ಬೌಲರ್​ಗಲು ದಿಕ್ಕಾಪಾಲಾದರು.

ಭರ್ಜರಿ ಬೌಲಿಂಗ್​

ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ಯೋಜನೆಗೆ ತಕ್ಕ ಹಾಗೆ ಆಡಿತು. ಆರಂಭದಿಂದಲೇ ಬಾಂಗ್ಲಾ ಬ್ಯಾಟರ್​ಗಳನ್ನು ಕಟ್ಟಿ ಹಾಕಿತು. ತಮಿಳುನಾಡಿನ ಆಟಗಾರರಾದ ವಾಷಿಂಗ್ಟನ್ ಸುಂದರ್ ಹಾಗೂ ಸಾಯಿ ಕಿಶೋರ್ ಅನುಕ್ರಮವಾಗಿ 3 ಹಾಗೂ 2 ವಿಕೆಟ್​ಗಳನ್ನು ಉರುಳಿಸಿ ಬಾಂಗ್ಲಾ ದೇಶದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಅರ್ಶ್​ದೀಪ್​ ಸಿಂಗ್​, ತಿಲಕ್​ ವರ್ಮಾ. ರವಿ ಬಿಷ್ಣೋಯಿ, ಹಾಗೂ ಶಹಬಾಜ್​ ಅಹಮದ್ ತಲಾ ಒಂದು ವಿಕೆಟ್​ ಉರುಳಿಸಿದರು.

ಇದನ್ನೂ ಓದಿ : ICC World Cup 2023 : ಶುಭ್​ಮನ್​ ಗಿಲ್​ಗೆ ಡೆಂಗ್ಯೂ ಜ್ವರ; ವಿಶ್ವ ಕಪ್​ನಲ್ಲಿ ಭಾರತಕ್ಕೆ ಹಿನ್ನಡೆ

ಭಾರತದ ಬೌಲಿಂಗ್ ಅಬ್ಬರಕ್ಕೆ ಬಾಂಗ್ಲಾದೇಶದ ಬ್ಯಾಟಿಂಗ್ ಬೆನ್ನೆಲುಬು ಮುರಿಯಿತು. ಆರಂಭಿಕ ಬ್ಯಾಟರ್​ ಪರ್ವೇಜ್ ಹೊಸೈನ್​ 23 ರನ್ ಬಾರಿಸಿದರೆ ಮಧ್ಯಮ ಕ್ರಮಾಂಕದಲ್ಲಿ ಜಕರ್ ಅಲಿ 24 ರನ್ ಕೊಡುಗೆ ಕೊಟ್ಟರು. ರಕಿಬುಲ್ ಹಸನ್ ಕೂಡ 14 ರನ್ ಬಾರಿಸಿದರು. ಉಳಿದವರೆಲ್ಲರೂ ಒಂದಂಕಿ ಮೊತ್ತಕ್ಕೆ ವಿಕೆಟ್​ ಒಪ್ಪಿಸಿದರು.

ಬಾಂಗ್ಲಾದೇಶದ ಬಗ್ಗೆ ಹೇಳುವುದಾದರೆ, ಆ ತಂಡದ ಬೌಲರ್ಗಳು ಭಾರತದ ಬ್ಯಾಟಿಂಗ್​ ವಿಧಾನದಿಂದ ಆಘಾತಕ್ಕೊಳದಾರು. ಭಾರತೀಯ ಬ್ಯಾಟರ್​ಗಳು ಅವರಿಗೆ ಯಾವುದೇ ಅವಕಾಶವನ್ನು ನೀಡಲಿಲ್ಲ ಮತ್ತು ಅವರು ಪಡೆದ ಒಂದು ವಿಕೆಟ್ ಕೂಡ ತುಂಬಾ ಸುಲಭ ವಿಕೆಟ್ ಆಗಿತ್ತು. ಆದರೆ ಈ ತಂಡ ಶನಿವಾರ ತಮ್ಮ ಕಂಚಿನ ಪದಕಕ್ಕಾಗಿ ಹೋರಾಡಲಿದೆ.

Exit mobile version