Site icon Vistara News

Rishabh Pant : ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಿಷಭ್ ಪಂತ್, ಅಕ್ಷರ್ ಪಟೇಲ್

Rishabh pant

ನವದೆಹಲಿ: ಭಾರತೀಯ ಕ್ರಿಕೆಟ್ ತಾರೆಗಳಾದ ರಿಷಭ್ ಪಂತ್ (Rishabh Pant) ಮತ್ತು ಅಕ್ಷರ್ ಪಟೇಲ್ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಪ್ರಸಿದ್ಧ ಭಗವಾನ್ ಬಾಲಾಜಿ ದೇವಸ್ಥಾನಕ್ಕೆ ಆಧ್ಯಾತ್ಮಿಕ ಭೇಟಿ ನೀಡಿದರು. ಶುಕ್ರವಾರ, ಕ್ರಿಕೆಟಿಗರು ತಮ್ಮ ‘ಧಾರ್ಮಿಕ ಆಚರಣೆಯನ್ನು ಪೂರ್ಣಗೊಳಿಸಿದ ನಂತರ ಸಾಂಪ್ರದಾಯಿಕ ಉಡುಪನ್ನು ಧರಿಸಿ ಫೋಟೊ ತೆಗಿಸಿಕೊಂಡರು. ಈ ವೇಳೆ ಅಲ್ಲಿದ್ದ ಬೇರೆ ಭಕ್ತರ ಗಮನವೂ ಸೆಳೆದರು. ಅಭಿಮಾನಿಗಳು ಕ್ರಿಕೆಟಿಗರನ್ನು ಮುತ್ತಿಕ್ಕಿಕೊಂಡು ಕೈಕುಲುಕುವ ಜತೆಗೆ ಫೋಟೋ ತೆಗಿಸಿಕೊಂಡರು.

ಡಿಸೆಂಬರ್​ನಲ್ಲಿ ನಡೆದ ಕಾರು ಅಪಘಾತದ ನಂತರ ರಿಷಭ್ ಚೇತರಿಕೆಯ ಹಾದಿಯಲ್ಲಿದ್ದಾರೆ. ಅಫಘಾತದಲ್ಲಿ ಪಂತ್ ತೀವ್ರ ಸುಟ್ಟಗಾಯಗಳು ಮತ್ತು ಅಸ್ಥಿರಜ್ಜು ಮುರಿದತದಿಂದ ಬಳಲುತ್ತಿದ್ದಾರೆ. ಅವರ ಗಾಯಗಳು ವ್ಯಾಪಕವಾಗಿದ್ದವು, ಇದರಲ್ಲಿ ತೀವ್ರವಾದ ಬಲ ಮೊಣಕಾಲು ಸಮಸ್ಯೆ ಎದುರಿಸಿದ್ದರು. ಬಳಿಕ ಅಸ್ಥಿರಜ್ಜು ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಫೆಬ್ರವರಿ 2023 ರಲ್ಲಿ ಮುಂಬೈನಲ್ಲಿ ಡಾ. ದಿನ್ಶಾ ಪರ್ಡಿವಾಲಾ ಅವರ ಮೇಲ್ವಿಚಾರಣೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪ್ರಸ್ತುತ, ಅವರು ತಮ್ಮ ಪುನಶ್ಚೇತನದ ಭಾಗವಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಶ್ರದ್ಧೆಯಿಂದ ತರಬೇತಿ ಪಡೆಯುತ್ತಿದ್ದಾರೆ.

2023ರ ಏಕದಿನ ವಿಶ್ವ ಕಪ್​ 15 ಆಟಗಾರರ ಸಾಲಿನಲ್ಲಿ ಬಹುಮುಖ ಪ್ರತಿಭೆ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದರು. ಬಳಿಕ ಅವರು ಎಡಗೈ ಕ್ವಾಡ್ರಿಸೆಪ್ಸ್ ನೋವಿನಿಂದ ಬಳಲಿದರು. ಬಳಿಕ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಅವರ ಜಾಗವನ್ನು ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತುಂಬಿದ್ದಾರೆ. ವಿಶ್ವಕಪ್ ಆರಂಭಕ್ಕೆ ಕೇವಲ ಒಂದು ತಿಂಗಳ ಮೊದಲು ನಡೆದ 2023 ರ ಆವೃತ್ತಿಯ ಏಷ್ಯಾ ಕಪ್ ಫೈನಲ್ ವೇಳೆ ಅಕ್ಷರ್​ ಪಟೇಲ್ ಗಾಯಗೊಂಡಿದ್ದರು.

ಚೇತರಿಕೆಯ ಹಾದಿಯ ಮಧ್ಯೆ ದೇವಾಲಯಕ್ಕೆ ಭೇಟಿ ನೀಡಿದ ರಿಷಭ್ ಪಂತ್

ಅಕ್ಟೋಬರ್ 3 ರಂದು ರಿಷಭ್ ಪಂತ್ ಹಿಮಾಲಯದಲ್ಲಿರುವ ಬದರೀನಾಥ್ ದೇವಾಲಯಕ್ಕೆ ಆಧ್ಯಾತ್ಮಿಕ ಪ್ರಯಾಣವನ್ನು ಪ್ರಾರಂಭಿಸಿದ್ದರು. ಹೆಲಿಕಾಪ್ಟರ್ ಮೂಲಕ ಆಗಮಿಸಿದ ಪಂತ್ ಅವರನ್ನು ಬದರೀನಾಥ್-ಕೇದಾರನಾಥ ದೇವಾಲಯ ಸಮಿತಿ, ಸ್ಥಳೀಯ ಕ್ರಿಕೆಟ್ ಉತ್ಸಾಹಿಗಳು, ಯುವಕರು ಮತ್ತು ಸಮರ್ಪಿತ ಯಾತ್ರಾರ್ಥಿಗಳು ಆತ್ಮೀಯವಾಗಿ ಸ್ವಾಗತಿಸಿದ್ದರು. ಖಾನಾಪುರ ಶಾಸಕ ಉಮೇಶ್ ಕುಮಾರ್ ಕೂಡ ಅವರೊಂದಿಗೆ ಪವಿತ್ರ ಪ್ರಯಾಣದಲ್ಲಿ ಜೊತೆಗೂಡಿದರು.

ವಿಷ್ಣುವಿನ ನಿವಾಸಕ್ಕೆ ಭೇಟಿ ನೀಡಿದ ನಂತರ, ಉತ್ತರಾಖಂಡ್ ಬ್ಯಾಟರ್​ ಬದರೀನಾಥ್ ದೇವಾಲಯದ ಆವರಣದಲ್ಲಿರುವ ವಿವಿಧ ದೇವಾಲಯಗಳಿಗೆ ಪ್ರಾರ್ಥನೆ ಸಲ್ಲಿಸಿದರು ಎಂದು ದೇವಾಲಯ ಸಮಿತಿಯ ಮಾಧ್ಯಮ ಸಂಪರ್ಕ ಹರೀಶ್ ಗೌರ್ ಮಾಹಿತಿ ಹಂಚಿಕೊಂಡಿದ್ದಾರೆ . ಭಕ್ತಿಯ ಪ್ರದರ್ಶನವಾಗಿ ದೇವಾಲಯದ ಪ್ರಧಾನ ಅರ್ಚಕ ರಾವಲ್ ಈಶ್ವರ್ ಪ್ರಸಾದ್ ನಂಬೂದಿರಿ ಅವರ ಆಶೀರ್ವಾದವನ್ನು ಕೋರಿದ್ದರು.

Exit mobile version