ಬರ್ಮಿಂಗ್ಹ್ಯಾಮ್ : ಭಾರತ ಟೇಬಲ್ ಟೆನಿಸ್ ತಂಡ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ನ (CWG- 2022) ಕ್ವಾರ್ಟರ್ ಫೈನಲ್ಸ್ಗೆ ಪ್ರವೇಶ ಪಡೆದುಕೊಂಡಿದೆ. ೧೬ನೇ ಸುತ್ತಿನ ಹಣಾಹಣಿಯಲ್ಲಿ ಸಿಂಗಾಪುರ ತಂಡದ ವಿರುದ್ಧ ೩-೦ ಜಯ ದಾಖಲಿಸಿದ ಭಾರತದ ಟೇಬಲ್ ಟೆನಿಸ್ ಪಟುಗಳು ೮ರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡರು.
ಡಬಲ್ಸ್ನಲ್ಲಿ ಹರ್ಮೀತ್ ದೇಸಾಯಿ ಹಾಗೂ ಸತ್ಯನ್ ಗುಣಶೇಖರನ್ ಜೋಡಿ ಸಿಂಗಾಪುರದ ಶಾಹೊ ಪೆಂಗ್, ಕ್ಲೆರೆನ್ಸ್ ಚ್ಯೂ ವಿರುದ್ಧ ೧೧-೫, ೧೧-೫ ಅಂಕಗಳಿಂದ ಗೆಲುವು ಸಾಧಿಸಿದರು. ಅದೇ ರೀತಿ ಸಿಂಗಲ್ಸ್ನಲ್ಲಿ ಅನುಭವಿ ಶರತ್ ಕಮಾಲ್ ಅವರು ಸಿಂಗಾಪುರದ ಪಾಂಗ್ ಯೂ ಕೊಯೆನ್ ವಿರುದ್ಧ ೧೧-೮, ೧೧-೯ ಅಂಕಗಳಿಂದ ಗೆಲುವು ಸಾಧಿಸಿ ಭಾರತಕ್ಕೆ ೨-೦ ಮುನ್ನಡೆ ತಂದುಕೊಟ್ಟರು. ಮೂರನೇ ಗೇಮ್ನಲ್ಲಿ ಸತ್ಯನ್ ಗುಣಶೇಖರನ್ ಅವರು ಸಿಂಗಾಪುರದ ಚ್ಯೂ ಝಿ ಯು ವಿರುದ್ಧ ೧೧-೭, ೧೧-೫, ೧೧-೮ ಅಂಕಗಳಿಂದ ಗೆಲುವು ಸಾಧಿಸಿ ಎದುರಾಳಿ ತಂಡವನ್ನು ಕ್ಲೀನ್ ಸ್ವೀಪ್ ಮಾಡಲು ನೆರವಾದರು.
ಇದನ್ನೂ ಓದಿ | CWG- 2022 | ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ, ಬೆಳ್ಳಿ ಗೆದ್ದ ಸಂಕೇತ್ ಸಾಗರ್