Site icon Vistara News

Indian Olympics History: ಭಾರತಕ್ಕೆ ಒಲಿಂಪಿಕ್ಸ್​ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಮೊದಲ ಸಾಧಕ ಅಭಿನವ್‌ ಬಿಂದ್ರಾ

Indian Olympics History

Indian Olympics History: When India created Olympics history - Complete list of Indian firsts at the Olympic Games

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ ಪ್ಯಾರಿಸ್(Paris 2024 Olympics)​ ಒಲಿಂಪಿಕ್ಸ್(Paris Olympics 2024)​ ಕ್ರೀಡಾಕೂಟದಲ್ಲಿ ಭಾರತದ 117 ಕ್ರೀಡಾಪಟುಗಳು ಪದಕ ನಿರೀಕ್ಷೆಯೊಂದಿಗೆ ಸ್ಪರ್ಧಿಸಲಿದ್ದಾರೆ. ಇದುವರೆಗಿನ ಒಲಿಂಪಿಕ್ಸ್​ ಇತಿಹಾಸದಲ್ಲಿ ಭಾರತ(Indian Olympics History) ಗೆದ್ದಿರುವುದು ಒಟ್ಟು 35 ಪದಕಗಳನ್ನು ಮಾತ್ರ. ಇದರಲ್ಲಿ 10 ಚಿನ್ನ, 9 ಬೆಳ್ಳಿ ಮತ್ತು 16 ಕಂಚು ಒಳಗೊಂಡಿದೆ. ವೈಯಕ್ತಿಕ ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನ ಗೆದ್ದ ಸಾಧಕ ಯಾರು? ಯಾವ ಒಲಿಂಪಿಕ್ಸ್​ನಲ್ಲಿ ಈ ಸಾದನೆ ಮಾಡಿದರು? ಎನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಹೌದು, ಭಾರತದ ಒಲಿಂಪಿಕ್ಸ್‌ ಇತಿಹಾಸದಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊದಲ ಸಾಧಕನೆಂಬ ಹೆಗ್ಗಳಿಕೆ ಲೆಜೆಂಡ್ರಿ ಶೂಟರ್‌ ಅಭಿನವ್‌ ಬಿಂದ್ರಾ(Abhinav Bindra) ಅವರಿಗೆ ಸಲ್ಲುತ್ತದೆ. 2008ರ(2008 Summer Olympics) ಬೀಜಿಂಗ್ ಒಲಿಂಪಿಕ್ಸ್​ನಲ್ಲಿ ಅವರು 10 ಮೀ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಇದು ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ದೊರೆತ ಮೊದಲ ಚಿನ್ನದ ಪದಕ. ಇದಾದ ಬಳಿಕ ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ನೀರಜ್​ ಚೋಪ್ರಾ ಜಾವೆಲಿನ್​ನಲ್ಲಿ ಚಿನ್ನ ಗೆದ್ದಿದ್ದರು. ಒಟ್ಟಾರೆಯಾಗಿ ಭಾರತಕ್ಕೆ ಒಲಿಂಪಿಕ್ಸ್​ನಲ್ಲಿ ಕೇವಲ 2 ವೈಯಕ್ತಿಕ ಚಿನ್ನ ಮಾತ್ರ ಲಭಿಸಿದೆ. ಈ ಬಾರಿ ಕನಿಷ್ಠ ಮೂರು ವೈಯಕ್ತಿಕ ಚಿನ್ನ ನಿರೀಕ್ಷೆ ಮಾಡಲಾಗಿದೆ.

ಇದನ್ನೂ ಓದಿ India at the Olympics: ಒಲಿಂಪಿಕ್ಸ್​ನಲ್ಲಿ ಭಾರತದ ಪದಕ ಸಾಧನೆಯ ಇಣುಕು ನೋಟ

ಒಂದು ಒಲಿಂಪಿಕ್ಸ್​ ಪದಕ, ಏಳು ಕಾಮನ್‌ವೆಲ್ತ್ ಗೇಮ್ಸ್ ಪದಕ, ಮೂರು ಏಷ್ಯನ್ ಗೇಮ್ಸ್ ಪದಕ ಹಾಗೂ 2006ರಲ್ಲಿ ವಿಶ್ವ ಚಾಂಪಿಯನ್‌ಶಿಪ್ ಚಿನ್ನದ ಪದಕವನ್ನೂ ಗಳಿಸಿರುವ ಬಿಂದ್ರಾ ಭಾರತೀಯ ಶೂಟಿಂಗ್ ದ್ರುವತಾರೆ ಎಂದರೂ ತಪ್ಪಾಗಲಾರದು. ಅಭಿನವ್ ಬಿಂದ್ರಾ ಅವರ ಸಾಧನೆಗೆ ಖೇಲ್‌ ರತ್ನ (2001), ಅರ್ಜುನ (2000), ಪದ್ಮ ಭೂಷಣ (2009) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬ್ಲೂ ಕ್ರಾಸ್‌’ ಪ್ರಶಸ್ತಿ

ಶೂಟಿಂಗ್​ ವಿಭಾಗದಲ್ಲಿ ನೀಡುವ ಪ್ರತಿಷ್ಠಿತ ‘ಬ್ಲೂ ಕ್ರಾಸ್‌’ ಪ್ರಶಸ್ತಿಯೂ ಬಿಂದ್ರಾಗೆ ಲಭಿಸಿದೆ. ‘ಬ್ಲೂ ಕ್ರಾಸ್‌’ ಎಂಬುದು ಇಂಟರ್‌ನ್ಯಾಶನಲ್‌ ಶೂಟಿಂಗ್‌ ಸ್ಪೋರ್ಟ್ಸ್ ಫೆಡರೇಶನ್‌ ನೀಡುವ ಅತ್ಯುನ್ನತ ಗೌರವವಾಗಿದೆ. ಈ ಪ್ರಶಸ್ತಿಗೆ ಭಾಜನರಾದ ಭಾರತದ ಮೊದಲ ಶೂಟರ್‌ ಎಂಬುದು ಅಭಿನವ್‌ ಬಿಂದ್ರಾ ಪಾಲಿನ ಹೆಗ್ಗಳಿಕೆ.

ಇದನ್ನೂ ಓದಿ Paris Olympics: ಅತಿ ಹೆಚ್ಚು ಒಲಿಂಪಿಕ್ಸ್ ಆತಿಥ್ಯ ವಹಿಸಿದ ದೇಶ ಯಾವುದು?

ನೀರಜ್​ ಮೇಲೆ ಮತ್ತೊಂದು ಚಿನ್ನ ನಿರೀಕ್ಷೆ


ಒಲಿಂಪಿಕ್ಸ್‌ನ ಟ್ರ್ಯಾಕ್‌ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಹೊಂದಿರುವ ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ ಮೇಲೆ ಈ ಬಾರಿಯ ಒಲಿಂಪಿಕ್ಸ್​ನಲ್ಲಿಯೂ ಚಿನ್ನದ ಪದಕ ನಿರೀಕ್ಷೆ ಮಾಡಲಾಗಿದೆ. ಟೋಕಿಯೊದಲ್ಲಿ 87.58ಮೀ ದೂರಕ್ಕೆ ಜಾವೆಲಿನ್​ ಎಸೆದು ಐತಿಹಾಸಿಕ ಚಿನ್ನ ಗೆದ್ದಿದ್ದರು. ಈ ಬಾರಿ 29 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡಕ್ಕೆ ಚೋಪ್ರಾ ಅವರು ನಾಯಕನಾಗಿದ್ದಾರೆ.

ಇದನ್ನೂ ಓದಿ Olympic Games: ಒಲಿಂಪಿಕ್ಸ್​ನಲ್ಲಿ ಮಹಿಳೆಯರು ಮೊದಲ ಬಾರಿಗೆ ಸ್ಪರ್ಧಿಸಿದ್ದು ಯಾವಾಗ?

ನೀರಜ್​ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್​ನಲ್ಲಿ ಬೆಳ್ಳಿ ಗೆದ್ದಿದ್ದರು. ನೀರಜ್​ರ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್​ಹೋಮ್​ ಡೈಮಂಡ್​ ಲೀಗ್​ನಲ್ಲಿ ಎಸೆದಿದ್ದರು.

Exit mobile version