ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಬಾಕ್ಸರ್ ಸಾಗರ್ ಅಹ್ಲಾವತ್ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಅವರು ಇಂಗ್ಲೆಂಡ್‌ನ ಸ್ಪರ್ಧಿ ವಿರುದ್ಧ ಸೋತು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.
೯೨ ಕೆ.ಜಿ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಅವರು ೦-೫ ಅಂಕಗಳಿಂದ ಹಿನ್ನಡೆ ಸಾಧಿಸುವ ಮೂಲಕ ಸೋಲಿಗೆ ಒಳಗಾದರು. ಆರಂಭಿಕ ಸುತ್ತಿನಲ್ಲಿ ಅವರು ಪೈಪೋಟಿ ನೀಡಿದರೂ ಉಳಿದ ಸುತ್ತುಗಳಲ್ಲಿ ಇಂಗ್ಲೆಂಡ್ ಬಾಕ್ಸರ್ ಪಾರಮ್ ಸಾಧಿಸಿದರು.