Site icon Vistara News

ವಿಶ್ವಕಪ್​ಗೆ ಭಾರತ ತಂಡ; ಇದೇ ಅಂತಿಮವಲ್ಲ, ಬದಲಾವಣೆಗಿದೆ ಅವಕಾಶ!

icc world cup india squad

ಮುಂಬಯಿ: ಬಹುನಿರೀಕ್ಷಿತ ಏಕದಿನ ವಿಶ್ವಕಪ್​ ಟೂರ್ನಿಗೆ(ICC World Cup 2023) ಭಾರತ ತನ್ನ 15 ಸದಸ್ಯರ ತಂಡವನ್ನು(icc world cup india squad) ಪ್ರಕಟಿಸಿದೆ. ಆದರೆ ಈ ತಂಡವನ್ನು ಬದಲಿಸುವ ಅವಕಾಶವಿದೆ. ಅಗರ್ಕರ್​ ಅವರು ಬಹುತೇಕ ಈ ತಂಡವೇ ಅಂತಿಮ ಎಂದು ಹೇಳಿದರೂ ಕೊನೆಯ ಸಂದರ್ಭದಲ್ಲಿ ಈ ತಂಡ ಬದಲಾವಣೆ ಕಂಡರೂ ಅಚ್ಚರಿಯಿಲ್ಲ. ಇದಕ್ಕೂ ಒಂದು ಮಾನದಂಡವಿದೆ.

ಬದಲಾವಣೆಗೆ ಹೇಗೆ

ವಿಶ್ವಕಪ್‌ ತಂಡಗಳನ್ನು ಸೆಪ್ಟೆಂಬರ್​ 5ರೊಳಗೆ ಅಂತಿಮಗೊಳಿಸಬೇಕೆಂದು ಐಸಿಸಿ ಈ ಮೊದಲೇ ತಿಳಿಸಿತ್ತು. ಇದೇ ಕಾರಣಕ್ಕೆ ಬಿಸಿಸಿಐ ಇಂದು ಭಾರತ ತಂಡವನ್ನು ಪ್ರಕಟಿಸಿದೆ. ಇದನ್ನು ಬದಲಿಸಲು ಐಸಿಸಿ ಅವಕಾಶನ್ನೂ ಕಲ್ಪಿಸಿದೆ. ಆದರೆ ಈ ಬದಲಾವಣೆಯನ್ನು ವಿಶ್ವಕಪ್‌ ಆರಂಭಕ್ಕೆ ಒಂದು ವಾರ ಮುಂಚಿತವಾಗಿ ಮಾಡಬೇಕು. ಅನಂತರ ಆಟಗಾರರ ಬದಲಾವಣೆಗೆ ಗಾಯದ ಸಮಸ್ಯೆ ತಲೆದೋರಿದರಷ್ಟೇ ಅವಕಾಶವಿರಲಿದೆ. ಇದಕ್ಕೆ ಐಸಿಸಿ ತಾಂತ್ರಿಕ ಸಮಿತಿಯ ಒಪ್ಪಿಗೆಯೂ ಅಗತ್ಯ.

ಸದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆ ಕಷ್ಟ

ಈಗಿನ ಪ್ರಕಾರ ಭಾರತ ತಂಡದಲ್ಲಿ ಬದಲಾವಣೆ ಕಷ್ಟ ಸಾಧ್ಯ. ಏಕೆಂದರೆ ಅಳೆದು ತೂಗಿ ಈ ತಂಡವನ್ನು ಅಂತಿಮಗೊಳಿಸಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ ಅವರು ಈಗಾಗಕಲೇ ಮಾಧ್ಯಮದ ಮುಂದೆ ಖಚಿತಪಡಿಸಿದ್ದಾರೆ. ಆದರೂ ಏಷ್ಯಾಕಪ್​ ಬಳಿಕ ಆಸ್ಟ್ರೇಲಿಯಾ ವಿರುದ್ಧ ಭಾರತ ಏಕದಿನ ಸರಣಿ ಆಡಲಿದೆನ. ಇಲ್ಲಿ ಗಾಯದಿಂದ ಚೇತರಿಕೆಕಂಡು ತಂಡ ಸೇರಿರುವ ಕೆ.ಎಲ್​.ರಾಹುಲ್​ ಮತ್ತು ಅಯ್ಯರ್​, ಜಸ್​ಪ್ರೀತ್​ ಬುಮ್ರಾ ಮತ್ತೆ ಗಾಯಕ್ಕೀಡಾದರೆ ಆಗ ತಂಡ ಬದಲಿಸಬಹುದು.

ಇದನ್ನೂ ಓದಿ ICC World Cup: ಏಕದಿನ ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ತಂಡದಲ್ಲಿ ಏಕೈಕ ಕನ್ನಡಿಗ

ಏಕೈಕ ಕನ್ನಡಿಗ

ರಾಹುಲ್​ ಫಿಟ್​ನೆಸ್​ ಬಗ್ಗೆ ಮಾತನಾಡಿದ ಅಗರ್ಕರ್​, ಸದ್ಯ ರಾಹುಲ್​ ಅವರು ಸಂಪೂರ್ಣ ಫಿಟ್​ ಆಗಿದ್ದಾರೆ. ಏಷ್ಯಾಕಪ್​ ತಂಡ ಪ್ರಕಟಿಸುವ ವೇಳೆ ಅವರು ಫಿಟ್​ ಆಗಿರಲಿಲ್ಲ. ಆದರೆ ಈಗ ಈ ಚಿಂತೆ ಇಲ್ಲ. ಅವರು ಆಡಲು ಸಿದ್ಧರಿದ್ದಾರೆ. ಕೀಪರ್​ ಆಗಿ ಅವರೇ ಮೊದಲ ಆಯ್ಕೆ ಎಂದರು. ಐಪಿಎಲ್ ಸಂದರ್ಭದಲ್ಲಿ ತೊಡೆಯ ಗಾಯದಿಂದ ಬಳಲಿದ್ದ ರಾಹುಲ್ ಶಸ್ತ್ರಚಿಕಿತ್ಸೆ ಪಡೆದಿದ್ದರು. ನಂತರ ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದರು. ಏಷ್ಯಾ ಕಪ್ ಟೂರ್ನಿಯಲ್ಲಿ ಆಡುವ ತಂಡಕ್ಕೆ ಆಯ್ಕೆಯಾಗಿದ್ದರೂ, ಮೊದಲೆರಡು ಪಂದ್ಯಗಳಿಂದ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಸೂಪರ್​ 4ನಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ರಾಹುಲ್​ ತಂಡದಲ್ಲಿರುವ ಏಕೈಕ ಕನ್ನಡಿಗ ಆಟಗಾರನಾಗಿದ್ದಾರೆ. ಪ್ರಸಿದ್ಧ್​ ಕೃಷ್ಣ ಅವರಿಗೆ ಅವಕಾಶ ಸಿಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ಸ್ಥಾನ ಶಾರ್ದೂಲ್​ ಠಾಕೂರ್​ ಪಾಲಾಗಿದೆ.

ವಿಶ್ವಕಪ್​ಗೆ ಭಾರತ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್​ ಪಟೇಲ್‌, ಸೂರ್ಯಕುಮಾರ್‌.

Exit mobile version