Site icon Vistara News

Team India : ಇನ್ನೆರಡು ದಿನ ಧರ್ಮಶಾಲಾದಲ್ಲಿ ಉಳಿಯುವುದಾಗಿ ಹೇಳಿದ ಟೀಮ್ ಇಂಡಿಯಾ

Team India 2

ಧರ್ಮಶಾಲಾ: ಐಸಿಸಿ ಕ್ರಿಕೆಟ್ ವಿಶ್ವಕಪ್ (ಸಿಡಬ್ಲ್ಯೂಸಿ) 2023 ರ ಪಂದ್ಯದಲ್ಲಿ ಭಾನುವಾರ (ಅಕ್ಟೋಬರ್ 22) ನ್ಯೂಜಿಲೆಂಡ್ ವಿರುದ್ಧ ಜಯಗಳಿಸಿದ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ (Team India) ಎರಡು ದಿನಗಳ ವಿರಾಮ ನೀಡಲಾಗಿದೆ. ಇದು ಐದು ಪಂದ್ಯಗಳಲ್ಲಿ ಭಾರತದ ಸತತ ಐದನೇ ಗೆಲುವಾಗಿದೆ. ಹೀಗಾಗಿ ಭಾರತ ತಂಡ 10 ಅಂಕಗಳೊಂದಿಗೆ ಸುಸ್ಥಿತಿಯಲ್ಲಿದೆ. ಹೀಗಾಗಿ ಆಟಗಾರರು ಬಹುತೇಕ ನಿರಾಳವಾಗಿದ್ದಾರೆ. ಹೀಗಾಗಿ ಆಟಗಾರರು ಮುಂದಿನ ಅಭಿಯಾನಕ್ಕೆ ಹೊರಡುವ ಮೊದಲು ಧರ್ಮಶಾಲಾದಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ.

ಪಂದ್ಯದಲ್ಲಿ ರೋಹಿತ್ ಶರ್ಮಾ ಟಾಸ್ ಗೆದ್ದ ನಂತರ ನ್ಯೂಜಿಲೆಂಡ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ನೀಡಿತು. ಡ್ಯಾರಿಲ್ ಮಿಚೆಲ್ ಅವರ 130 ರನ್ (ಶತಕ) ಮತ್ತು ರಚಿನ್ ರವೀಂದ್ರ ಅವರ 75 ರನ್ ಗಳ (ಅರ್ಧ ಶತಕ) ನೆರವಿನಿಂದ ನ್ಯೂಜಿಲೆಂಡ್ 273 ರನ್ ಗಳಿಸಿತು. ಭಾರತದ ಪರ ಮೊಹಮ್ಮದ್ ಶಮಿ 10 ಓವರ್​ಗಳಲ್ಲಿ 54 ರನ್ ನೀಡಿ 5 ವಿಕೆಟ್ ಪಡೆದರು.

ಈ ಸುದ್ದಿಯನ್ನೂ ಓದಿ : Bishan Singh Bedi : ಬಿಷನ್​ ಸಿಂಗ್​ ನನ್ನ ಹೀರೊ; ಕಪಿಲ್ ದೇವ್ ಹೀಗೆ ಹೇಳುವುದಕ್ಕೊಂದು ಕಾರಣವಿದೆ

ಇದಕ್ಕೆ ಉತ್ತರವಾಗಿ ವಿರಾಟ್ ಕೊಹ್ಲಿ 95 ಮತ್ತು ರೋಹಿತ್ ಶರ್ಮಾ ಅವರ 46 ರನ್ ಮತ್ತು ರವೀಂದ್ರ ಜಡೇಜಾ ಅವರ 39* ರನ್​ಗಳ ಸಂಯೋಜನೆಯೊಂದಿಗೆ ಭಾರತವು 48 ಓವರ್​ಗಳಲ್ಲಿ 6 ವಿಕೆಟ್​​ ಕಳೆದುಕೊಂಡು ಗುರಿ ತಲುಪಿತು. ಸಿಡಬ್ಲ್ಯುಸಿ 2023 ಪಾಯಿಂಟ್ಸ್ ಟೇಬಲ್​​ನಲ್ಲಿ ಭಾರತ ಈಗ 10 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

25ರಂದು ಲಕ್ನೊಗೆ ಪ್ರಯಾಣ

ಅಕ್ಟೋಬರ್ 25 ರಂದು ಭಾರತ ತಂಡ ತನ್ನ ಮುಂದಿನ ಪಂದ್ಯಕ್ಕಾಗಿ ಲಕ್ನೋಗೆ ಪ್ರಯಾಣಿಸಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಈ ನಡುವೆ , ಯಾವುದೇ ನಿಗದಿತ ಅಭ್ಯಾಸ ಅಥವಾ ನೆಟ್ ಸೆಷನ್ ಗಳನ್ನು (ಐಚ್ಛಿಕ ಅಥವಾ ನಿಯಮಿತ) ಯೋಜಿಸಲಾಗಿಲ್ಲ. ಭಾರತ ತಂಡ ಅಕ್ಟೋಬರ್ 29ರಂದು ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.

ಪಾದದ ಗಾಯಕ್ಕೆ ಪ್ರಸ್ತುತ ಬೆಂಗಳೂರಿನ ಎನ್ಸಿಎಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾರ್ದಿಕ್ ಪಾಂಡ್ಯ ಲಭ್ಯತೆಯ ಬಗ್ಗೆ ಯಾವುದೇ ಅಪ್​ಡೇಟ್​ಗಳಿಲ್ಲ. ಬದಲಿ ಆಟಗಾರನನ್ನು ಘೋಷಿಸುವ ಯಾವುದೇ ಯೋಜನೆ ಇಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ. ಆಲ್​ರೌಂಡರ್​ ಇಂಗ್ಲೆಂಡ್ ಪಂದ್ಯಕ್ಕೆ ಸಂಪೂರ್ಣವಾಗಿ ಫಿಟ್ ಆಗುವ ನಿರೀಕ್ಷೆಯಿದೆ. ಇದಲ್ಲದೆ, ನ್ಯೂಜಿಲೆಂಡ್ ಪಂದ್ಯಕ್ಕೆ ಮೊದಲು ಜೇನು ನೋಣಗಳ ಕಡಿತಕ್ಕೆ ಒಳಗಾಗಿದ್ದ ಇಶಾನ್ ಕಿಶನ್ ಕೂಡ ಆರೋಗ್ಯದಲ್ಲಿದ್ದಾರೆ ಎಂದು ದೃಢಪಡಿಸಲಾಗಿದೆ.

Exit mobile version