Baku shooting world cup: ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್ ವಿಶ್ವಕಪ್‌ನಲ್ಲಿ ಭಾರತದ ಮಹಿಳೆಯರ ತಂಡ ಚಿನ್ನದ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ ಭಾರತವು ಶೂಟಿಂಗ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದಿದೆ! ಭಾರತ ಮಹಿಳೆಯರ ಈ ಸಾಧನೆ ದೇಶವೇ ಹೆಮ್ಮೆ ಪಡುವಂತಾಗಿದೆ.
ಈ ಗೆಲುವು ಭಾರತದ ಮಹಿಳೆಯರಿಗೆ ಮಹತ್ವದ ಗೆಲುವಾಗಿದೆ. ಈ ಹಿಂದೆ ನಡೆದ ಭಾರತ ಹಾಗೂ ಡೆನ್‌ಮಾರ್ಕ್ ನಡುವಿನ ಪಂದ್ಯದಲ್ಲಿ ಡೆನ್‌ಮಾರ್ಕ್ ಕಳೆದ 8 ಬಾರಿ ಗೆಲುವು ಸಾಧಿಸಿತ್ತು. ಆದರೆ, ಈ ಎಲ್ಲಾ ಸೋಲುಗಳನ್ನು ಸೋಪಾನ ಮಾಡಿಕೊಂಡು ಅತ್ಯಂತ ಮಹತ್ವದ ಘಟ್ಟದಲ್ಲಿ ಭಾರತ ತಂಡವು ಗೆಲುವು ಸಾಧಿಸಿದೆ. ಡೆನ್‌ಮಾರ್ಕ್ ತಂಡದ ಅನ್ನಾ ನಿಲ್ಸೆನ್, ಎಮ್ಮಾ ಕೊಚ್ ಹಾಗೂ ರಿಕ್ಕೆ ಮೆಂಗ್ ಅವರನ್ನು ಸೋಲಿಸಿ ಭಾರತದ ಮಹಿಳೆಯರು ಗೆಲುವಿನ ಸಂಭ್ರಮದಲ್ಲಿದ್ದಾರೆ.
ವಿಶ್ವಕಪ್‌ನಲ್ಲಿ ಪೊಲ್ಯಾಂಡ್ ತಂಡವು ಮೂರನೇ ಸ್ಥಾನ ಗಳಿಸಿ ಕಂಚಿನ ಪದಕವನ್ನು ಪಡೆದಿದೆ. ಇದೇ ವೇಳೆ ಭಾರತದ ಪುರುಷರ ತಂಡ ಕ್ರೊಷಿಯ ವಿರುದ್ಧ ಸೋಲು ಅನುಭವಿಸಿದ್ದು, ಕಂಚಿನ ಪದಕವನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಭಾರತದ ರುದ್ರಾಂಕ್ಷ್ ಪಾಟೀಲ್, ಪಾರ್ಥ್ ಮಖೀಜಾ, ಧನುಷ್ ಶ್ರೀಕಾಂತ್ ಮೂವರ ತಂಡವೂ ಕಳೆದ ಎಂಟು ಹಂತದಲ್ಲಿ ಕ್ರೊಷಿಯ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ ಪ್ರಮುಖ ಪಂದ್ಯದಲ್ಲಿ ಗೆಲ್ಲುವಲ್ಲಿ ವಿಫಲವಾಗಿದೆ.
ಮಹಿಳೆಯರು ಭಾರತಕ್ಕೆ ಚಿನ್ನದ ಪದಕ ಗೆಲ್ಲುವ ಮೂಲಕ ಅತಿ ಹೆಚ್ಚು ಪದಕ ಗಳಿಸಿದ ಪಟ್ಟಿಯಲ್ಲಿ ಭಾರತವು ಐದನೇ ಸ್ಥಾನಕ್ಕೇರಿದೆ.
ಇದನ್ನೂ ಓದಿ: French Open 2022 | ಇಬ್ಬರು ಬಲಿಷ್ಠ ಆಟಗಾರರ ನಡುವೆ ಸೆಣೆಸಾಟ! ನಡಾಲ್-ಜಾಕೋ ನಡುವೆ ಗೆಲ್ಲೋರ‍್ಯಾರು?