Site icon Vistara News

Ranji Trophy : ಮಹಿಳೆಯರಿಗೂ ಶುರುವಾಗಲಿದೆ ರಣಜಿ ಟ್ರೋಫಿ

Ranaji Trophy

ವಿಸ್ತಾರ ನ್ಯೂಸ್​, ಬೆಂಗಳೂರು: ಭಾರತ ಮಹಿಳೆಯರ ಕ್ರಿಕೆಟ್​ ತಂಡ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಕ್ರಿಕೆಟ್​ ಪ್ರೇಮಿಗಳಿಂದಲೂ ಅದಕ್ಕೆ ಉತ್ತೇಜನ ಸಿಕ್ಕಿದೆ. ಹೀಗಾಗಿ ದೇಶಿಯ ಮಟ್ಟದಲ್ಲಿ ಮಹಿಳೆಯರಿಗಾಗಿ ರಣಜಿ ಟ್ರೋಫಿ ಮಾದರಿಯ (Ranji Trophy) ರೆಡ್​ ಬಾಲ್​ ಕ್ರಿಕೆಟ್​ ಟೂರ್ನಿ ಆಯೋಜಿಸಲು ಸಿದ್ಧತೆ ನಡೆಯುತ್ತಿದೆ. ವರದಿಯೊಂದರ ಪ್ರಕಾರ ಸುಮಾರು ಆರು ವರ್ಷಗಳ ಅಂತರದ ನಂತರ ಮಾರ್ಚ್-ಏಪ್ರಿಲ್​​ನಲ್ಲಿ ಮಹಿಳೆಯರಿಗೆ ರೆಡ್-ಬಾಲ್ ಋತುವನ್ನು ಪ್ರಾರಂಭಿಸಲು ಬಿಸಿಸಿಐ ನಿರ್ಧರಿಸಿದೆ.

ಫೆಬ್ರವರಿ 22ರಿಂದ ದೆಹಲಿ ಮತ್ತು ಬೆಂಗಳೂರಿನಲ್ಲಿ ಡಬ್ಲ್ಯುಪಿಎಲ್ ಎರಡನೇ ಆವೃತ್ತಿ ನಡೆಸಲು ಬಿಸಿಸಿಐ ಯೋಜಿಸುತ್ತಿದೆ ಎಂದು ವರದಿ ಹೇಳಿದೆ. ಆ ಬಳಿಕ ರಣಜಿ ಆರಂಭಗೊಳ್ಳಬಹುದು. ಸದ್ಯ ಅದು ಕೇವಲ ವಲಯ ಪಂದ್ಯಾವಳಿಗೆ ಸೀಮಿತವಾಗಿರಬಹುದು. ನಂತರ ರಣಜಿ ತರಹದ ಸ್ವರೂಪಕ್ಕೆ ಬದಲಾವಣೆಗೊಳ್ಳಲಿದೆ.

ಮಹಿಳೆಯರ ರಣಜಿ ಮೂರು ದಿನಗಳ ಪಂದ್ಯಾವಳಿಯಾಗಿದೆ. ಸಮಯದ ಮಿತಿಯಿಂದಾಗಿ ಆರಂಭದಲ್ಲಿ ವಲಯ ಸ್ವರೂಪದಿಂದ ಪ್ರಾರಂಭಿಸಲು ಯೋಚಿಸುತ್ತಿದ್ದೇವೆ. ಪಂದ್ಯಾವಳಿಯು ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಮಹಿಳಾ ತಂಡಕ್ಕೆ ದೇಶಿಯವಾಗಿ ರೆಡ್​ಬಾಲ್ ಕ್ರಿಕೆಟ್ ಇಲ್ಲ. ಮಹಿಳೆಯರಿಗಾಗಿ ದೇಶೀಯ ಕ್ರಿಕೆಟ್ ಅನ್ನು ಪ್ರಾರಂಭಿಸುವ ಸಮಯ ಬಂದಿದೆ ಎಂದು ಬಿಸಿಸಿಐ ಭಾವಿಸಿದೆ “ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Sachin Tendulkar : ಮುದ್ದೇನಹಳ್ಳಿಯಲ್ಲಿ ಕ್ರಿಕೆಟ್​ ಆಡಲಿದ್ದಾರೆ ಸಚಿನ್​, ಯುವರಾಜ್​ ಸಿಂಗ್​

ಮಹಿಳಾ ಕ್ರಿಕೆಟ್​​ನಲ್ಲಿ ದೇಶೀಯ ಪಂದ್ಯಾವಳಿಯನ್ನು ಆಯೋಜಿಸವುದು ಮುಖ್ಯ ಎಂದು ಡಯಾನಾ ಎಡುಲ್ಜಿ ಈ ಹಿಂದೆ ಹೇಳಿದ್ದರು.

ಮಹಿಳೆ ಕ್ರಿಕೆಟ್​ನ ಪುನರುಜ್ಜೀವನದ ಅತ್ಯಂತ ಮುಖ್ಯವಾದ ವಿಷಯವೆಂದರೆ ದೇಶೀಯವಾಗಿ ಮೂರು ದಿನಗಳ ಅಥವಾ ನಾಲ್ಕು ದಿನಗಳ ಕ್ರಿಕೆಟ್​ ಆಯೋಜಿಸುವುದು ” ಎಂದು ಎಡುಲ್ಜಿ ಇಂಡಿಯನ್ ಎಕ್​​ಪ್ರೆಸ್​ಗೆ ತಿಳಿಸಿದ್ದಾರೆ. “ಈ ಸ್ವರೂಪದಲ್ಲಿ ಹೆಚ್ಚು ಆಡುವ ಮೂಲಕ ನೀವು ಹೆಚ್ಚು ಹೊತ್ತು ಆಡುವ ಮನೋಧರ್ಮವನ್ನು ಆಟಗಾರ್ತಿಯರು ಬೆಳೆಸಿಕೊಳ್ಳಲಿದ್ದಾರೆ. ಟಿ20ಯಲ್ಲಿ ಅದಕ್ಕೆ ಅವಕಾಶ ಇರುವುದಿಲ್ಲ ಎಂದು ಎಡುಲ್ಜಿ ಹೇಳಿದ್ದಾರೆ.

ದೀರ್ಘ ಸ್ವರೂಪಗಳನ್ನು ಹೆಚ್ಚು ಆಡಿದಾಗ, ಸರಿಯಾದ ಕ್ರಿಕೆಟ್ ಶಾಟ್​​ಗಳನ್ನು ಆಡಲು ಕಲಿಯಬಹುದು. ನಾವು ಇದನ್ನು ಈಗ ಟಿ20 ಗಳಲ್ಲಿ ಅಭ್ಯಾಸವಾಗಿ ನೋಡುತ್ತೇವೆ. ಉದಾಹರಣೆ ಹೆಚ್ಚಿನ ಪಂದ್ಯಗಳು ಕ್ರಾಸ್-ಬ್ಯಾಟ್ ಶಾಟ್​ಗಳಿಗೆ ಪೂರಕವಾಗಿಲ್ಲ. ವಿರಾಟ್, ರೋಹಿತ್ ಮುಂತಾದವರು ಉತ್ತಮ ಶಾಟ್​ಗಳೊಂದಿಗೆ ಕಿರು ಸ್ವರೂಪಗಳಲ್ಲಿ ಮಿಂಚುತ್ತಾರೆ. ದೀರ್ಘ ಅವಧಿಯ ಕ್ರಿಕೆಟ್​ನಿಂದ ಕಲಿತ ಶಾಟ್​ಗಳವು. ಕನಿಷ್ಠ ಒಂದು ದೇಶೀಯ ಪಂದ್ಯಾವಳಿಯನ್ನು ನಡೆಸಬೇಕೆಂದು ನಾನು ಬಿಸಿಸಿಐಗೆ ವಿನಂತಿಸುತ್ತೇನೆ. ದೀರ್ಘ ಆವೃತ್ತಿಯನ್ನು ಹೆಚ್ಚು ಆಡಿದಷ್ಟೂ ಕೌಶಲ್ಯಗಳು ಸುಧಾರಿಸುತ್ತವೆ ಎಂದು ಎಡುಲ್ಜಿ ಹೇಳಿದ್ದಾರೆ.

Exit mobile version