ಬರ್ಮಿಂಗ್ಹಮ್ : ಸಂಘಟಿತ ಬೌಲಿಂಗ್ ದಾಳಿ ಹಾಗೂ ಪ್ರಭಾವಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ವನಿತೆಯರ ಕ್ರಿಕೆಟ್ ತಂಡದ ಕಾಮನ್ವೆಲ್ತ್ ಗೇಮ್ಸ್‌ನ (CWG- 2022) ಮಹಿಳೆಯರ ಟಿ೨೦ ಕ್ರಿಕೆಟ್‌ನ ತನ್ನ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ೮ ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅನಿರೀಕ್ಷಿತ ಸೋಲಿನ ನಿರಾಸೆ ಮರೆಯಿತು.
ಎಜ್‌ಬಾಸ್ಟನ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯಕ್ಕೆ ಆರಂಭದಲ್ಲಿ ಮಳೆಯ ಅಡಚಣೆ ಉಂಟಾಯಿತು. ಹೀಗಾಗಿ ಪಂದ್ಯವನ್ನು ೧೮ ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ನಂತರ ಟಾಸ್ ಗೆದ್ದ ಪಾಕಿಸ್ತಾನ ತಂಡ ನಿಗದಿತ ೧೮ ಓವರ್‌ಗಳಲ್ಲಿ ೯೯ ರನ್‌ಗಳಿಗೆ ಸರ್ವಪತನ ಕಂಡಿತು. ಸಣ್ಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಭಾರತದ ವನಿತೆಯರು 11.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 102ರನ್ ಬಾರಿಸಿ ಜಯಶಾಲಿಯಿತು.
ಭಾರತ ಪರ ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸ್ಮೃತಿ ಮಂಧಾನಾ42 ಎಸೆತಗಳಲ್ಲಿ ಅಜೇಯ 63 ರನ್ ಬಾರಿಸಿ ಭಾರತದ ಗೆಲುವಿನ ರೂವಾರಿ ಎನಿಸಿಕೊಂಡರು. ಶಫಾಲಿ ವರ್ಮ ೧೬ ರನ್ ಗಳಿಸಿದರೆ, ಸಬ್ಬಿನೇನಿ ಮೇಘನಾ ೧೪ ರನ್ ಕೊಡುಗೆ ಕೊಟ್ಟರು.
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟರ್ ಮುನೀಬಾ ಅಲಿ ೩೨ ರನ್ ಬಾರಿಸಿ ಉತ್ತಮ ಆರಂಭ ತಂದುಕೊಟ್ಟರು. ಆದರೆ ಉಳಿದ ಆಟಗಾರರು ನೀರಸ ಪ್ರದರ್ಶನ ನೀಡಿದರು. ಅದರಲ್ಲೂ ಕೊನೇ ಎರಡು ಓವರ್‌ಗಳಲ್ಲಿ ಪಾಕಿಸ್ತಾನ ಐದು ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಭಾರತೀಯ ವನಿತೆಯರಿಗೆ ಸವಾಲೊಡ್ಡು ಸಣ್ಣ ಪ್ರಯತ್ನವನ್ನು ಮಾಡಲಿಲ್ಲ.
ಸ್ಕೋರ್ ವಿವರ
ಪಾಕಿಸ್ತಾನ : ೧೮ ಓವರ್‌ಗಳಲ್ಲಿ ೯೯ ( ಮುನೀಬಾ ಅಲಿ ೩೨, ಅಲಿಯಾ ರಿಯಾಜ್ ೧೮; ಸ್ನೇಹ್ ರಾಣಾ ೧೫ಕ್ಕೆ೨, ರಾಧಾ ಯಾದವ್ ೧೮ಕ್ಕೆ೨).
ಭಾರತ : ೧೧.೪ ಓವರ್‌ಗಳಲ್ಲಿ ೨ ವಿಕೆಟ್‌ಗೆ೧೦೨(ಸ್ಮೃತಿ ಮಂಧಾನಾ ೧೬, ಶಫಾಲಿ ವರ್ಮ ೬೩* )