Site icon Vistara News

CWG- 2022 | ಇತಿಹಾಸ ಸೃಷ್ಟಿಸಿದ ಲಾನ್‌ ಬೌಲ್‌ ಮಹಿಳೆಯರ ತಂಡ, ಮೊದಲ ಬಾರಿ ಫೈನಲ್‌ಗೆ ಪ್ರವೇಶ

CWG- 2022

ಬರ್ಮಿಂಗ್ಹಮ್‌: ಭಾರತದ ಲಾನ್‌ ಬೌಲ್‌ ತಂಡ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG- 2022) ಹೊಸ ಇತಿಹಾಸ ಬರೆದಿದ್ದು, ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶ ಮಾಡಿದೆ. ಇದರೊಂದಿಗೆ ಭಾರತಕ್ಕೆ ಕನಿಷ್ಠ ಪಕ್ಷ ಬೆಳ್ಳಿಯ ಪದಕವೊಂದು ಖಾತರಿಯಾಗಿದೆ. ಸೋಮವಾರ ಮಧ್ಯಾಹ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು ೧೬-೧೩ ಅಂತರದಿಂದ ಸೋಲಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯಿತು.

ನ್ಯೂಜಿಲೆಂಡ್‌ ತಂಡ ಲಾನ್‌ ಬೌಲ್‌ ಕ್ರೀಡೆಯಲ್ಲಿ ಅತ್ಯಂತ ಬಲಿಷ್ಠ ತಂಡ. ಇದುವರೆಗೆ ೪೦ ಕಾಮನ್ವೆಲ್ತ್‌ ಪದಕಗಳನ್ನು ಪಡೆದಿರುವ ತಂಡ. ಆ ತಂಡವನ್ನೇ ಸೋಲಿಸಿದ ಮಹಿಳೆಯರ ಫೋರ್‌ ಬಳಗ ಈ ಕ್ರೀಡೆಯಲ್ಲಿ ಭಾರತಕ್ಕೆ ಚೊಚ್ಚಲ ಪದಕವನ್ನು ತಂದುಕೊಡಲಿದೆ.

ಲವ್ಲಿ ಚೌಬೆ, ಪಿಂಕಿ, ನಯನ್‌ಮೋನಿ ಸೈಕಿಯಾ ಹಾಗೂ ರೂಪಾ ರಾಣಿ ಅವರಿದ್ದ ಭಾರತ ತಂಡವು ಮೊದಲ ಸುತ್ತಿನಲ್ಲಿ ೫-೦ ಹಿನ್ನಡೆಯನ್ನು ಹೊಂದುವ ಮೂಲಕ ನಿರಾಸೆ ಎದುರಿಸಿದರು. ಅದರೆ, ಎರಡನೇ ಸುತ್ತಿನಲ್ಲಿ ೭-೬ರ ಮುನ್ನಡೆ ಪಡೆದುಕೊಂಡಿತು. ಆ ಅಂತರವನ್ನು ೧೦-೭ಕ್ಕೆ ವಿಸ್ತರಿಸಿದ ಭಾರತದ ವನಿತೆಯರು ತಿರುಗಿ ನೋಡದೇ ಗೆಲುವು ಸಾಧಿಸಿದರು.

ಭಾರತ ತಂಡ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಅದಕ್ಕಿಂತ ಮೊದಲು ಭಾರತದ ಪುರುಷರ ಲಾನ್‌ ಬೌಲ್‌ ತಂಡದ ಸದಸ್ಯರಾದ ದಿನೇಶ್‌ ಕುಮಾರ್‌ ಹಾಗೂ ಸುನೀಲ್‌ ಬಹಾದ್ದೂರ್‌ ಸೆಕ್ಷನ್‌ ಸಿ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡನ್ನು ಸೋಲಿಸಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಪಡೆದುಕೊಂಡರು.

ಇದನ್ನೂ ಓದಿ | CWG- 2022 | ಅಚಿಂತ ಶೆಯುಲಿಗೆ ಸ್ವರ್ಣ, ಭಾರತಕ್ಕೆ ಮೂರನೇ ಚಿನ್ನ, ಆರನೇ ಪದಕ

Exit mobile version