Site icon Vistara News

FIH Hockey Olympic Qualifiers: ಇಂದು ಭಾರತ-ಅಮೆರಿಕ ಮಹಿಳಾ ಹಾಕಿ ಪಂದ್ಯ

Indian womens Hockey Team

ರಾಂಚಿ: ತವರಲ್ಲೇ ನಡೆಯುವ ಎಫ್ಐಎಚ್‌ ಒಲಿಂಪಿಕ್ಸ್‌ ಕ್ವಾಲಿಫೈಯರ್‌(FIH Hockey Olympic Qualifiers) ಪಂದ್ಯಾವಳಿಯಲ್ಲಿ ಭಾರತ ಮಹಿಳಾ ತಂಡ(IND vs USA Hockey) ಕಣಕ್ಕಿಳಿಯಲು ಸಜ್ಜಾಗಿದೆ. ಇಂದು ನಡೆಯುವ ಮೊದಲ ಪಂದ್ಯದಲ್ಲಿ ಅತ್ಯಂತ ಬಲಿಷ್ಠ ತಂಡ ಅಮೆರಿಕ ತಂಡದ ಸವಾಲು ಎದುರಿಸಲಿದೆ. ಈ ಇಂದು ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ.

ಅನುಭವಿ ಗೋಲ್​ ಕೀಪರ್​ ಸವಿತಾ ಪೂನಿಯಾ(Savita Punia) ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ವಂದನಾ ಕಟಾರಿಯಾ(Vandana Katariya) ಉಪನಾಯಕಿಯಾಗಿದ್ದಾರೆ. ಕಳೆದ ವರ್ಷ ಚೀನದಲ್ಲಿ ನಡೆದ ಏಷ್ಯಾಕಪ್​ನಲ್ಲಿ ನಿರಾಶಾದಾಯಕ ಪ್ರದರ್ಶನ ತೋರಿದ್ದ ತಂಡ ಈ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಬೇಕಿದೆ. ಒಲಿಂಪಿಕ್ಸ್​ ಲಕ್ಷ್ಯದಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನವನ್ನು ಹೊರಹಾಕಬೇಕಿದೆ. ಯುವ ಮತ್ತು ಅನುಭವಿ ಆಟಗಾರ್ತಿರಯ ಉತ್ತಮ ಸಂಯೋಜನೆ ಇದೆ.

ಮುಖಾಮುಖಿ


ಮಲೇಷ್ಯಾದ ಕೌಲಾಲಂಪುರ್‌ನಲ್ಲಿ 1983 ರ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಭಾರತ ಮತ್ತು ಅಮೆರಿಕ ಎದುರಾಗಿದ್ದವು. ಒಟ್ಟಾರೆ ಭಾರತ ಮತ್ತು ಯುಎಸ್‌ಎ 15 ಬಾರಿ ಮುಖಾಮುಖಿಯಾಗಿವೆ. ಅಮೆರಿಕ 9 ಪಂದ್ಯಗಳನ್ನು ಗೆದ್ದಿದೆ. ಭಾರತ ಜಯಿಸಿದ್ದು ಎರಡರಲ್ಲಿ ಮಾತ್ರ. ಅಂಕಿ ಅಂಶದಲ್ಲಿ ಅಮೆರಿಕ ಬಲಿಷ್ಠವಾಗಿ ಗೋಚರಿಸಿದರೂ, ತವರಿನ ಲಾಭ ಭಾರತಕ್ಕಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕಷ್ಟೆ.

ಗೆದ್ದರೆ ಒಲಿಂಪಿಕ್ಸ್​ ಟಿಕೆಟ್​


ಇದೇ ವರ್ಷ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್‌ ಅರ್ಹತೆಗಾಗಿ ಇದೊಂದು ಮಹತ್ವದ ಟೂರ್ನಿಯಾಗಿದೆ. 8 ತಂಡಗಳ ಪೈಕಿ ಅಗ್ರ 3 ಸ್ಥಾನ ಪಡೆದ ತಂಡಗಳು ಒಲಿಂಪಿಕ್ಸ್​ ಟಿಕೆಟ್​ ಪಡೆಯಲಿದೆ. ಭಾರತ 6ನೇ ರ್‍ಯಾಂಕಿಂಗ್‌ ಹೊಂದಿದೆ. ನ್ಯೂಜಿಲ್ಯಾಂಡ್​, ಇಟಲಿ ಮತ್ತು ಅಮೆರಿಕ ಜತೆ ಬಿ ಗುಂಪಿನಲ್ಲಿ ಭಾರತ ಕಾಣಿಸಿಕೊಂಡಿದೆ.

‘ಒಲಿಂಪಿಕ್ಸ್ ಅರ್ಹತೆಯಲ್ಲಿ ಎಫ್‌ಐಎಚ್‌ ಹಾಕಿ ಒಲಿಂಪಿಕ್‌ ಕ್ವಾಲಿಯರ್ಸ್‌ ಮಹತ್ವಪೂರ್ಣ ಟೂರ್ನಿಯಾಗಿದೆ. ನಮ್ಮ ತಂಡದ ಆಟಗಾರ್ತಿಯರು ನಿರೀಕ್ಷೆಗೆ ತಕ್ಕಂತೆ ಆಡುವ ವಿಶ್ವಾಸವಿದೆ. ಹಿಂದಿನ ಸೋಲನ್ನು ಮರೆತು ವರ್ಷದ ಮೊದಲ ಟೂರ್ನಿ ಆಡಲಿರುವ ಆಟಗಾರ್ತಿರು ಹೊಸ ಹುರುಪಿನಲ್ಲಿದ್ದಾರೆ’ ಎಂದು ತಂಡದ ಕೋಚ್‌ ಯಾನೆಕ್ ಶೋಪ್ಮನ್ ತಿಳಿಸಿದ್ದಾರೆ.

ಇದನ್ನೂ ಓದಿ Hockey: ಒಲಿಂಪಿಕ್ಸ್ ಕ್ವಾಲಿಫೈಯರ್ಸ್‌; ಮಹಿಳಾ ಹಾಕಿ ತಂಡಕ್ಕೆ ಸವಿತಾ ನಾಯಕಿ

ಭಾರತ ತಂಡ


ಗೋಲ್‌ ಕೀಪರ್ಸ್‌:
ಸವಿತಾ ಪೂನಿಯಾ (ನಾಯಕಿ), ಬಿಚು ದೇವಿ ಕರಿಬಮ್. ಡಿಫೆಂಡರ್ಸ್‌: ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಮೋನಿಕಾ. ಮಿಡ್‌ಫೀಲ್ಡರ್ಸ್: ನಿಶಾ, ವೈಷ್ಣವಿ ವಿಠ್ಠಲ್ ಫಾಲ್ಕೆ, ನೇಹಾ, ನವನೀತ್ ಕೌರ್‌, ಸಲೀಮಾ ಟೇಟೆ, ಸೋನಿಕಾ, ಜ್ಯೋತಿ, ಬ್ಯೂಟಿ ಡುಂಗ್‌ಡುಂಗ್. ಫಾರ್ವರ್ಡ್ಸ್‌: ಲಾಲ್ರೆಮ್ಸಿಯಾನಿ, ಸಂಗೀತಾ ಕುಮಾರಿ, ದೀಪಿಕಾ ಮತ್ತು ವಂದನಾ ಕಟಾರಿಯಾ.

ಅಮೆರಿಕ ತಂಡ


ಅಮಂಡಾ ಗೋಲಿನಿ (ನಾಯಕಿ), ಆಶ್ಲೇ ಹಾಫ್‌ಮನ್, ಡೇನಿಯಲ್ ಗ್ರೆಗಾ, ಕೆಲ್ಸಿ ಬಿಂಗ್, ಕಾರ್ಲಿ ಕಿಶಾ, ಅಲೆಕ್ಸಾಂಡ್ರಾ ಹ್ಯಾಮೆಲ್, ಜಿಲಿಯನ್ ವೋಲ್ಗೆಮತ್, ಮೆಡೆಲೀನ್ ಝಿಮ್ಮರ್, ಬ್ರೂಕ್ ಡೆಬರ್ಡಿನ್, ಆಶ್ಲೇ ಸೆಸ್ಸಾ, ಎಲಿಜಬೆತ್ ಯೇಗರ್, ಸ್ಯಾನ್ನೆ ಕಾರ್ಲ್ಸ್, ಮೆರೆಡಿತ್ ಷೋಲ್ಡರ್, ಕೆಲೆಹ್ ಲೆಬರ್ಡಿನ್ , ಲೇಹ್ ಕ್ರೌಸ್, ಜೆನ್ನಿಫರ್ ರಿಝೋ, ಅಬಿಗೈಲ್ ಟಮ್ಮರ್.

Exit mobile version