Site icon Vistara News

Ind vs wi : ವಿಂಡೀಸ್​ ವಿರುದ್ಧ ಏಕ ದಿನ ಸರಣಿ ಗೆಲುವು ಭಾರತದ ಗುರಿ

Team Inida

ಬ್ರಿಜ್​ಟೌನ್​ (ವೆಸ್ಟ್ ಇಂಡೀಸ್​): ವೆಸ್ಟ್ ಇಂಡೀಸ್ (West Indies) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ (Ind vs wi ) ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ (Team India) 5 ವಿಕೆಟ್​ಗಳ ಸುಲಭ ಜಯ ಗಳಿಸಿದೆ. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದೀಗ ಜುಲೈ 29ರಂದು ನಡೆಯಲಿರುವ ಏಕ ದಿನ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ ಎದುರಾಗಲಿದೆ. ಹಿಂದಿನ ಪಂದ್ಯ ನಡೆದಿರುವ ಬಾರ್ಬಡೋಸ್​ನ ಕೆನಿಂಗ್​ಸ್ಟನ್​ ಓವಲ್​ನಲ್ಲಿ ಪಂದ್ಯ ನಡೆಯಲಿದೆ. ಈ ಪಂದ್ಯವನ್ನೂ ಗೆಲ್ಲುವ ಮೂಲಕ ಬಾರತ ತಂಡ ಸರಣಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ.

ಮೊದಲ ಪಂದ್ಯದಲ್ಲ ಭಾರತದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವು ಅಸಾಮಾನ್ಯ ಬದಲಾವಣೆಗಳನ್ನು ಮಾಡಿಕೊಂಡರು. 115 ರನ್​ಗಳ ಗುರಿಯನ್ನು ಬೆನ್ನೆಟ್ಟಲು ಮುಂದಾದ ಭಾರತ ತಂಡದ ಯುವ ಬ್ಯಾಟರ್​ಗಳಿಗೆ ಅವಕಾಶ ನೀಡಿತು. ಆದರೆ, ಭಾರತ ತಂಡದ ಆಟಗಾರರು ಸತತವಾಗಿ ವಿಕೆಟ್​ ಕಳೆದುಕೊಳ್ಳುವ ಮೂಲಕ ಆತಂಕ ಸೃಷ್ಟಿಸಿದ್ದರು. ಏತನ್ಮಧ್ಯೆ, ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಈ ಕ್ರಮದ ಹಿಂದಿನ ಕಾರಣವನ್ನು ತಿಳಿಸಿದ ಟೀಮ್​ ಇಂಡಿಯಾ ಮ್ಯಾನೇಜ್ಮೆಂಟ್​​ ಮಧ್ಯಮ ಕ್ರಮಾಂಕದ ಬ್ಯಾಟರ್​​ಗಳಿಗೆ ಸಾಕಷ್ಟು ಅವಕಾಶ ನೀಡುವುದೇ ಉದ್ದೇಶವಾಗಿತ್ತು ಎಂದಿದೆ.

ಏತನ್ಮಧ್ಯೆ, ಯುವ ಕ್ರಿಕೆಟಿಗರಿಗೆ ಅವಕಾಶ ಸಿಕ್ಕರೂ ಛಾಪು ಮೂಡಿಸಲು ವಿಫಲರಾದರು. ಶುಬ್ಮನ್ ಗಿಲ್ ಅವರ ಕಳಪೆ ಫಾರ್ಮ್​ ಮುಂದುವರಿದರೆ, ಸೂರ್ಯಕುಮಾರ್ ಯಾದವ್ 50 ಓವರ್​ಗಳ ಸ್ವರೂಪದಲ್ಲಿ ಇನ್ನೂ ಛಾಪು ಮೂಡಿಸಿಲ್ಲ ಎಂಬುದು ಸಾಬೀತಾಯಿತು. ಹೀಗಾಗಿ ಭಾರತದ ಬ್ಯಾಟಿಂಗ್ ಬಗ್ಗೆ ಅನೇಕ ಕಳವಳಗಳು ವ್ಯಕ್ತಗೊಂಡವು ಇಶಾನ್ ಕಿಶನ್ 46 ಎಸೆತಗಳಲ್ಲಿ 52 ರನ್ ಗಳಿಸಿ ವಿಶ್ವಾಸ ಮೂಡಿಸಿದರು. ಹೀಗಾಗಿ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಣೆ ಅಗತ್ಯವಿದೆ.

ಬೌಲಿಂಗ್ ವಿಭಾಗ ಹೆಚ್ಚು ಪ್ರಖರವಾಗಿದ್ದಂತೆ ಕಂಡು ಬಂತು. ಅದರಲ್ಲೂ ಜಡೇಜಾ ಮತ್ತು ಕುಲ್ದೀಪ್​ ಯಾದವ್ ಹೆಚ್ಚು ಮಿಂಚಿದರು. ಮೊದಲ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 3 ವಿಕೆಟ್ ಪಡೆದರು. ಈ ಸ್ಪಿನ್ನರ್​ಗಳು ಎರಡನೇ ಪಂದ್ಯದಲ್ಲೂ ಹೆಚ್ಚು ಮಾರಕ ಎನಿಸಿಕೊಳ್ಳುವ ವಿಶ್ವಾಸ ಮೂಡಿಸಿದ್ದಾರೆ. ಏತನ್ಮಧಯೆ, ತಂಡದ ಮ್ಯಾನೇಜ್ಮೆಂಟ್ ಯಜುವೇಂದ್ರ ಚಹಲ್​ ಅವರನ್ನು ಆಡಿಸುವ ನಿರೀಕ್ಷೆಯೂ ಇದೆ. ವೈಫಲ್ಯಗಳ ಹೊರತಾಗಿಯೂ ಭಾರತ ತಂಡ ಗೆಲುವು ಸಾಧಿಸಿರುವ ಕಾರಣ ತಂಡದಲ್ಲಿ ಯಾವುದೇ ಬದಲಾವಣೆ ಆಗದು ಎಂದು ಕ್ರಿಕೆಟ್​ ಪಂಡಿತರು ಅಂದಾಜು ಮಾಡಿದ್ದಾರೆ.

ಇಶಾನ್ ಕಿಶನ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿರುವುದರಿಂದ, ಸಂಜು ಸ್ಯಾಮ್ಸನ್ ಮರಳಲು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಒಟ್ಟಾರೆಯಾಗಿ, ಎರಡನೇ ಏಕದಿನ ಪಂದ್ಯಕ್ಕೆ ಭಾರತ ಯಾವುದೇ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿಲ್ಲ.

ವೆಸ್ಟ್ ಇಂಡೀಸ್ ವಿಷಯಕ್ಕೆ ಬಂದಾಗ, ಎರಡನೇ ಪಂದ್ಯದಲ್ಲಿ ಸಾಕಷ್ಟು ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ಬ್ಯಾಟಿಂಗ್ ಘಟಕವು ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದೆ. ತಂಡದ ಬ್ಯಾಟಿಂಗ್ ವಿಭಾಗ ಉತ್ತಮ ಪ್ರೇರಣೆಯಿಂದ ಆಡುತ್ತಿಲ್ಲ. ಡೊಮಿನಿಕ್ ಡ್ರೇಕ್ಸ್ ಅಥವಾ ಜೇಡನ್ ಸೀಲ್ಸ್ ಬದಲಿಗೆ ಒಶೇನ್ ಥಾಮಸ್ ಅಥವಾ ಅಲ್ಜಾರಿ ಜೋಸೆಫ್ ಪ್ಲೇಯಿಂಗ್ ಮರಳುವ ಸಾಧ್ಯತೆಯಿದೆ. ಅದನ್ನು ಹೊರತುಪಡಿಸಿ, ಅವರು ಅದೇ ಸೂತ್ರದೊಂದಿಗೆ ಹೋಗುವ ಸಾಧ್ಯತೆಯಿದೆ.

ಪಿಚ್ ಹೇಗಿರಬಹುದು?

ಕೆನ್ಸಿಂಗ್ಸ್​ಟನ್​ ಓವಲ್​​ನ ಪಿಚ್​​ ಸ್ಪಿನ್ನರ್​ಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಮಾಡಲಿದೆ. ಮೊದಲು ಬ್ಯಾಟ್​ ಮಾಡಿದ ತಂ 260ಕ್ಕಿಂತ ಹೆಚ್ಚು ರನ್ ಗಳಿಸಿದರೆ ಅದು ಸ್ಪರ್ಧಾತ್ಮಕ ಮೊತ್ತ ಎನಿಸಲಿದೆ.

ತಂಡಗಳು

ವೆಸ್ಟ್​ ಇಂಡೀಸ್: ಶಾಯ್ ಹೋಪ್ (ನಾಯಕ), ಕೈಲ್ ಮೇಯರ್ಸ್, ಬ್ರೆಂಡನ್​ ಕಿಂಗ್, ಅಲಿಕ್ ಅಥಾನಾಜೆ, ಶಿಮ್ರೋನ್​ ಹೆಟ್ಮಾಯರ್​, ರೋವ್ಮನ್ ಪೊವೆಲ್, ರೊಮಾರಿಯೊ ಶೆಫರ್ಡ್, ಯಾನಿಕ್ ಕ್ಯಾರಿಯಾ, ಜೇಡನ್ ಸೀಲ್ಸ್, ಗುಡಕೇಶ್ ಮೋತಿ, ಅಲ್ಜಾರಿ ಜೋಸೆಫ್.

ರೋಹಿತ್ ಶರ್ಮಾ (ನಾಯಕ): ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.

ಏಕದಿನ ಕ್ರಿಕೆಟ್​​ನಲ್ಲಿ ಬಲಾಬಲ

ಒಟ್ಟು ಪಂದ್ಯಗಳು – 140

ವೆಸ್ಟ್ ಇಂಡೀಸ್ ಗೆಲುವು- 63

ಭಾರತ ಗೆಲುವು – 71 |

ಟೈ- 2

ಫಲಿತಾಂಶ ಇಲ್ಲ – 4

ನೇರ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ವಿವರಗಳು

ಪಂದ್ಯದ ಸಮಯ: ಸಂಜೆ 07:00 ಗಂಟೆಗೆ

ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್

ಲೈವ್ ಸ್ಟ್ರೀಮಿಂಗ್: ಜಿಯೋ ಸಿನೆಮಾ ಮತ್ತು ಫ್ಯಾನ್ಕೋಡ್

Exit mobile version