ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಜಾವೆಲಿನ್ ಎಸೆತಗಾರ್ತಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳ ಪಟ್ಟಿಗೆ ತಮ್ಮ ಕೊಡುಗೆಯನ್ನೂ ನೀಡಿದ್ದಾರೆ. ಭಾನುವಾರ ನಡೆದ ಸ್ಪರ್ಧೆಯಲ್ಲಿ ೬೦ ಮೀಟರ್ ದೂರಕ್ಕೆ ಈಟಿ ಎಸೆದ ಅವರು ಮೂರನೇ ಸ್ಥಾನ ಪಡೆದುಕೊಂಡರು. ನಾಲ್ಕನೇ ಪ್ರಯತ್ನದಲ್ಲಿ ಅವರು ಕಂಚಿನ ಪದಕದ ಎಸೆತವನ್ನು ಎಸೆದರು. ಇವರ ಕಂಚಿನೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ ೪೭ಕ್ಕೆ ಏರಿಕೆಯಾಗಿದೆ.
ಆಸ್ಟ್ರೇಲಿಯಾದ ಕೆಲ್ಸಿ ಲೀ ಬಾರ್ಬರ ೬೪.೪೩ ಮೀಟರ್ ದೂರಕ್ಕೆ ಜಾವೆಲಿಸ್ ಎಸೆದು ಬಂಗಾರದ ಪದಕ ಗೆದ್ದುಕೊಂಡರೆ, ಅದೇ ದೇಶದ ಮೆಕೆಂಜಿ ಲಿಟಲ್ ೬೪. ೨೭ ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ರಜತ ಪದಕವನ್ನು ತಮ್ಮದಾಗಿಸಿಕೊಂಡರು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಶಿಲ್ಪಾ ರಾಣಿ ೫೪.೬೨ ಮೀಟರ್ ದೂರ ಎಸೆದು ಏಳನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಮೊದಲ ಪ್ರಯತ್ನದಲ್ಲಿ ೫೫.೬೧ ಮೀಟರ್ ದೂರ ಎಸೆದ ರಾಣಿ, ಐದನೇ ಸ್ಥಾನ ಪಡೆದುಕೊಂಡರು. ಮುಂದಿನ ಎರಡು ಎಸೆತಗಳು ಪೌಲ್ ಆದವು. ಆದರೆ, ನಾಲ್ಕನೇ ಎಸೆತದಲ್ಲಿ ಕಂಚಿಗೆ ಗುರಿಯಿಟ್ಟರು. ಐದನೇ ಪ್ರಯತ್ನದಲ್ಲಿ ಅವರಿಗೆ ಪ್ರದರ್ಶನ ಸುಧಾರಣೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ.
ಅನ್ನು ರಾಣಿಗೆ ವೃತ್ತಿ ಕ್ರೀಡೆಯಲ್ಲಿನ ಅತ್ಯುತ್ತಮ ಪದಕವಾಗಿದೆ. ಅವರು ೨೦೧೪ ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಗೆದ್ದಿರುವುದು ಇದುವರೆಗಿನ ಉತ್ತಮ ಸಾಧನೆಯಾಗಿತ್ತು.
ಇದನ್ನೂ ಓದಿ |CWG- 2022 | 10 ಸಾವಿರ ಮೀಟರ್ ರೇಸ್ ವಾಕ್‌ನಲ್ಲಿ ಸಂದೀಪ್‌ಗೆ ಕಂಚು