ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್ (CWG-2022) ಸ್ಪರ್ಧೆಯ ಆರನೇ ದಿನದ ಆರಂಭದಲ್ಲಿ ಭಾರತಕ್ಕೆ ಕಂಚಿನ ಪದಕ ಲಭಿಸಿದೆ. ಈ ಬಾರಿಯೂ ಮೆಡಲ್ ತಂದುಕೊಟ್ಟವರು ವೇಟ್ ಲಿಫ್ಟರ್. ಪುರುಷರ ೧೦೯ ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಲವ್‌ಪ್ರೀತ್ ಸಿಂಗ್, ಕಂಚಿನ ಪದಕಕ್ಕೆ ಮುತ್ತಿಟ್ಟು ಸಂಭ್ರಮಿಸಿದ್ದಾರೆ. ಒಟ್ಟಾರೆಯಾಗಿ ೩೫೫ ಕೆ.ಜಿ ಭಾರ ಎತ್ತಿದ ಲವ್‌ಪ್ರೀತ್ ಸಿಂಗ್ ಮೂರನೇ ಸ್ಥಾನ ಪಡೆದರು.
ಇವರ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ ೧೪ಕ್ಕೆ ಏರಿಕೆಯಾಗಿದೆ. ಇದರಲ್ಲಿ ಚಿನ್ನ, ೫ ಬೆಳ್ಳಿ ಹಾಗೂ ೪ ಕಂಚಿನ ಪದಕಗಳು ಸೇರಿಕೊಂಡಿವೆ. ಅಂತೆಯೇ ವೇಟ್‌ಲಿಫ್ಟ್‌ಗಳೇ ೯ ಪದಕಗಳನ್ನು ಗೆದ್ದುಕೊಟ್ಟಂತಾಗಿದೆ.
ಹೆವಿವೇಟ್ ವಿಭಾಗದ ಈ ಸ್ಪರ್ಧೆಯ ಸ್ನ್ಯಾಚ್ ವಿಭಾಗದಲ್ಲಿ ೧೬೩ ಕೆ.ಜಿ ಭಾರ ಎತ್ತಿದ ಲವ್‌ಪ್ರೀತ್ ಸಿಂಗ್ ಅವರ ಕ್ಲೀನ್ ಆಂಡ್ ಜರ್ಕ್ ವಿಭಾಗದಲ್ಲಿ ೧೯೨ ಕೆ.ಜಿ ಎತ್ತಿ ಹಿಡಿದರು.
ಲವ್‌ಪ್ರೀತ್ ಸಿಂಗ್ ಕಾಮನ್ವೆಲ್ತ್ ಗೇಮ್ಸ್ ಸೀನಿಯರ್ ಚಾಂಪಿಯನ್‌ಷಿಪ್ ೨೦೨೧ರಲ್ಲಿ ಬೆಳ್ಳಿಯ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದರು.