Site icon Vistara News

Indias Squads | ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾ ವಿರುದ್ಧದ ತವರಿನ ಕ್ರಿಕೆಟ್​ ಸರಣಿಗೆ ಭಾರತ ತಂಡ ಪ್ರಕಟ; ಟಿ20 ತಂಡದಲ್ಲಿ ಸ್ಥಾನ ಪಡೆದ ಪೃಥ್ವಿ ಶಾ!

Indias Squads

ಹೊಸದಿಲ್ಲಿ: ಮುಂಬರುವ ನ್ಯೂಜಿಲ್ಯಾಂಡ್​ ಮತ್ತು ಆಸ್ಟ್ರೇಲಿಯಾ ವಿರುದ್ಧದ ತವರಿನ ಕ್ರಿಕೆಟ್​(Indias Squads) ಸರಣಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಅಚ್ಚರಿ ಎಂಬಂತೆ ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಪೃಥ್ವಿ ಶಾಗೆ ಅವಕಾಶ ನೀಡಲಾಗಿದೆ. ಆದರೆ ಕಿವೀಸ್​ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಿಂದ ಕೆ.ಎಲ್ ರಾಹುಲ್ ಮತ್ತು ಅಕ್ಷರ್​ ಪಟೇಲ್ ವೈಯುಕ್ತಿಕ ಕಾರಣದಿಂದ ಲಭ್ಯರಿಲ್ಲ ಎಂದು ಬಿಸಿಸಿಐ ತಿಳಿಸಿದೆ.

ಟಿ20 ಸರಣಿಯಲ್ಲಿ ಈ ಹಿಂದಿನ ಸರಣಿಯಂತೇ ಹಿರಿಯ ಆಟಗಾರರನ್ನು ಕೈಬಿಡಲಾಗಿದೆ. ಹಾರ್ದಿಕ್​ ಪಾಂಡ್ಯ ನಾಯಕನಾಗಿ ಮತ್ತು ಸೂರ್ಯಕುಮಾರ್​ ಯಾದವ್​ ಉಪನಾಯಕನಾಗಿ ಮುಂದುವರಿದಿದ್ದಾರೆ. ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ​ ತಂಡ ಮುನ್ನಡೆಸಲಿದ್ದಾರೆ. ನ್ಯೂಜಿಲ್ಯಾಂಡ್​ ವಿರುದ್ಧ ಭಾರತ ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಿದೆ.

ಇನ್ನೊಂದೆಡೆ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಎರಡು ಪಂದ್ಯಗಳಿಗೆ ತಂಡ ಪ್ರಕಟಗೊಂಡಿದೆ. ಗಾಯದ ಸಮಸ್ಯೆಯಿಂದ ಬಹುಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದ ರವೀಂದ್ರ ಜಾಡೇಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಫಿಟ್​ನೆಸ್​ ವರದಿ ಬಳಿಕ ಅವರನ್ನು ಆಡಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಕಿವೀಸ್​ ಸರಣಿಯಿಂದ ಹೊರಗುಳಿದಿದ್ದ ಕೆ.ಎಲ್​. ರಾಹುಲ್ ಮತ್ತು ಅಕ್ಷರ್​ ಪಟೇಲ್ ಆಸೀಸ್​ ವಿರುದ್ಧದ ಟೆಸ್ಟ್​​​ ಸರಣಿಗೆ ಆಯ್ಕೆ ಆಗಿದ್ದಾರೆ. ಆದರೆ ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪಂತ್​ ಅನುಪಸ್ಥಿತಿಯಲ್ಲಿ ಇಶಾನ್​ ಕಿಶನ್​ ಮತ್ತು ಕೆ.ಎಸ್​ ಭರತ್​ ಅವರನ್ನು ವಿಕೆಟ್​ ಕೀಪರ್​ ಆಗಿ ಆಯ್ಕೆ ಮಾಡಲಾಗಿದೆ. ಜತೆಗೆ ಸ್ಫೋಟಕ ಬ್ಯಾಟರ್​ ಸೂರ್ಯಕುಮಾರ್​ ಯಾದವ್​ಗೂ ಟೆಸ್ಟ್​ ಸರಣಿಯಲ್ಲಿ ಅವಕಾಶ ನೀಡಲಾಗಿದೆ.

ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ.ಎಸ್. ಭರತ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮ್ಮದ್, ಶಾರ್ದೂಲ್ ಠಾಕೂರ್, ಯುಜುವೇಂದ್ರ ಚಹಲ್, ಕುಲ್​ದೀಪ್​ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.

ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ಹಾರ್ದಿಕ್ ಪಾಂಡ್ಯ(ನಾಯಕ), ಸೂರ್ಯಕುಮಾರ್ ಯಾದವ್(ಉಪನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಕುದೀಪ್​ ಯಾದವ್, ಯುಜುವೇಂದ್ರ ಚಹಲ್, ಅರ್ಶ್​ದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಪೃಥ್ವಿ ಶಾ, ಮುಕೇಶ್ ಕುಮಾರ್.

ಆಸ್ಟ್ರೇಲಿಯಾ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಕ್ಕೆ ಭಾರತ ತಂಡ
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್(ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್​ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಸ್ ಭರತ್(ವಿಕೆಟ್​ ಕೀಪರ್​), ಇಶಾನ್ ಕಿಶನ್, ಆರ್​.ಅಶ್ವಿನ್, ಅಕ್ಷರ್​ ಪಟೇಲ್, ಕುಲ್​ದೀಪ್​ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್​, ಸೂರ್ಯಕುಮಾರ್ ಯಾದವ್.

ಇದನ್ನೂ ಓದಿ | IND VS SL | ಚಿರತೆ ವೇಗದಲ್ಲಿ ಕ್ಯಾಚ್​ ಹಿಡಿದ ಅಕ್ಷರ್​ ಪಟೇಲ್​; ವಿಡಿಯೊ ವೈರಲ್​

Exit mobile version