Site icon Vistara News

Sumit Nagal: ಆಸ್ಟ್ರೇಲಿಯ ಓಪನ್​ನಲ್ಲಿ ಇತಿಹಾಸ ಬರೆದ ಭಾರತದ ಸುಮಿತ್ ನಾಗಲ್

sumit nagal

ಮೆಲ್ಬೊರ್ನ್​: ಭಾರತದ ಸುಮಿತ್ ನಾಗಲ್(Sumit Nagal) ಆಸ್ಟ್ರೇಲಿಯನ್ ಓಪನ್ 2024 ರ(Australian Open 2024) ಎರಡನೇ ಸುತ್ತಿಗೆ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ. 11 ವರ್ಷಗಳ ನಂತರ ಈ ಟೂರ್ನಿಯಲ್ಲಿ ಎರಡನೇ ಸುತ್ತು ತಲುಪಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪುರುಷರ ಸಿಂಗಲ್ಸ್​ನ ಮೊದಲ ಸುತ್ತಿನ ಹಣಾಹಣಿಯಲ್ಲಿ ವಿಶ್ವದ ನಂ. 27 ಅಲೆಕ್ಸಾಂಡರ್ ಬುಬ್ಲಿಕ್(Alexander Bublik) ಅವರನ್ನು 6-4, 6-2, 7-6 ರ ನೇರ ಸೆಟ್​ಗಳಿಂದ ಮಣಿಸಿ ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ನಾಗಲ್​ ಗೆಲುವು ಸಾಧಿಸುವ ಮೂಲಕ ಆಸ್ಟ್ರೇಲಿಯನ್ ಓಪನ್ ಇತಿಹಾಸದಲ್ಲಿ 1989ರ ಬಳಿಕ (35 ವರ್ಷಗಳ ನಂತರ) ಮೊದಲ ಬಾರಿಗೆ ಶ್ರೇಯಾಂಕ ಹೊಂದಿದ ಆಟಗಾರನನ್ನು ಸೋಲಿಸಿದ ಭಾರತೀಯ ಆಟಗಾರ ಎನಿಸಿಕೊಂಡರು.


ದಿಗ್ಗಜ ರಮೇಶ್ ಕೃಷ್ಣನ್ ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ತಮ್ಮ ವೃತ್ತಿಜೀವನದಲ್ಲಿ ಒಟ್ಟು ಐದು ಬಾರಿ ಮೂರನೇ ಸುತ್ತಿಗೆ ಅರ್ಹತೆ ಪಡೆದಿದ್ದರು. ಅವರು 1983, 1984, 1987, 1988 ಮತ್ತು 1989 ರ ಆವೃತ್ತಿಗಳಲ್ಲಿ ಈ ಸಾಧನೆ ಮಾಡಿದರು. ಅವರು 1989 ರಲ್ಲಿ ಎರಡನೇ ಸುತ್ತಿನಲ್ಲಿ ವಿಶ್ವದ ನಂ. 1 ಮ್ಯಾಟ್ಸ್ ವಿಲಾಂಡರ್ ಅವರನ್ನು ಸೋಲಿಸಿದ್ದರು. ವಿಜಯ್ ಅಮೃತರಾಜ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಸುತ್ತನ್ನು ಮೀರಿದ ಮತ್ತೊಬ್ಬ ಭಾರತೀಯ. ಅವರು 1984 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದರು. ಲಿಯಾಂಡರ್ ಪೇಸ್ 1997 ಮತ್ತು 2000 ದಲ್ಲಿ ಈ ಸಾಧನೆ ಮಾಡಿದ್ದರು.

ಇದನ್ನೂ ಓದಿ Australian Open 2023: ಆಸ್ಟ್ರೇಲಿಯನ್‌ ಓಪನ್‌ ಬ್ಯಾಡ್ಮಿಂಟನ್‌ನಲ್ಲಿ ಅಚ್ಚರಿಯ ಗೆಲುವು ಸಾಧಿಸಿದ ಕನ್ನಡಿಗ ಮಂಜುನಾಥ್

ಭಾರತದ ಇತ್ತೀಚಿನ ಟೆನಿಸ್ ಇತಿಹಾಸಕ್ಕೆ ಬಂದಾಗ, ನಿವೃತ್ತರಾಗಿರುವ ಸೋಮದೇವ್ ದೇವವರ್ಮನ್ 2013 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಎರಡನೇ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ 11 ವರ್ಷಗಳ ಬಳಿಕ ಸುಮಿತ್ ನಾಗಲ್ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.

Exit mobile version