ಬರ್ಮಿಂಗ್ಹಮ್ : ಭಾರತದ ಮಹಿಳಾ ಜುಡೂ ಪಟು ತುಲಿಕಾ ಮಾನ್ ಬರ್ಮಿಂಗ್ಹಮ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ೭೮+ ಕೆ.ಜಿ ವಿಭಾಗದ ಫೈನಲ್ ಹಣಾಹಣಿಯಲ್ಲಿ ಅವರು ಸ್ಕಾಟ್ಲೆಂಡ್ನ ಸಾರಾ ಅಡ್ಲಿಂಗ್ಟನ್ ವಿರುದ್ಧ ಸೋತು ರಜತ ಪದಕವನ್ನು ತಮ್ಮದಾಗಿಸಿಕೊಳ್ಳಬೇಕಾಯಿತು. ಈ ಮೂಲಕ ಹಾಲಿ ಆವೃತ್ತಿಯಲ್ಲಿ ಜುಡೋ ಸ್ಪರ್ಧೆಯಲ್ಲಿ ಎರಡನೇ ಬೆಳ್ಳಿ ಪದಕ ಲಭಿಸಿತು. ಸುಶೀಲಾ ದೇವಿ ಈ ಹಿಂದೆ ಬೆಳ್ಳಿಯ ಪದಕ ಗೆದ್ದಿದ್ದರೆ, ಪುರುಷರ ವಿಭಾಗದಲ್ಲಿ ವಿಜಯಕುಮಾರ್ ಯಾದವ್ ಕಂಚಿನ ಪದಕ ಗೆದ್ದಿದ್ದಾರೆ. ಹೀಗಾಗಿ ಜುಡೊದಲ್ಲಿ ಒಟ್ಟಾರೆ ೩ ಪದಕಗಳು ಭಾರತಕ್ಕೆ ಲಭಿಸಿದವು.
21 ವರ್ಷದ ತುಲಿಕಾ ಅವರಿಗೆ ಇದು ಕಾಮನ್ವೆಲ್ತ್ನಲ್ಲಿ ಲಭಿಸುತ್ತಿರುವ ಮೂರನೇ ಪದಕವಾಗಿದೆ.