ಜಕಾರ್ತಾ: ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ(Indonesia Open) ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ(Satwiksairaj Rankireddy)-ಚಿರಾಗ್ ಶೆಟ್ಟಿ(Chirag Shetty) ಜೋಡಿ ಫೈನಲ್ ಪ್ರವೇಶ ಪಡೆಯುವ ಮೂಲಕ ಭಾರತಕ್ಕೆ ಪದಕವೊಂದನ್ನು ಖಾತ್ರಿಪಡಿಸಿದ್ದಾರೆ. ಈ ಮೂಲಕ ಯಾವುದೇ ಸೂಪರ್-1000 ಪಂದ್ಯಾವಳಿಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಜೋಡಿ ಎಂಬ ಐತಿಹಾಸಿಕ ದಾಖಲೆ ಬರೆದರು.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಈ ಜೋಡಿ ಕೊರಿಯಾದ ಮಿನ್ ಹ್ಯುಕ್ ಕಾಂಗ್-ಸೆಯಂಗ್ ಜೇ ಸೆವೊ(Kang-Seo) ವಿರುದ್ಧ ಮೊದಲ ಗೇಮ್ ಸೋತರೂ ಆ ಬಳಿಕ ತೀವ್ರ ಹೋರಾಟ ನಡೆಸಿ ಗೆಲುವು ದಾಖಲಿಸಿದರು. ಗೆಲುವಿನ ಅಂತರ 17-21, 21-19, 21-18.
2022ರ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಅಮೋಘ ಪ್ರದರ್ಶನ ತೋರಿತು. ಆರಂಭಿಕ ಗೇಮ್ ಕಳೆದುಕೊಂಡರೂ ಆತ್ಮ ವಿಶ್ವಾಸ ಕಳೆದುಕೊಳ್ಳದೆ ಮುಂದಿನ ಎರಡೂ ಗೇಮ್ಗಳನ್ನು ಗೆದ್ದು ಫೈನಲ್ಗೆ ಲಗ್ಗೆಯಿಟ್ಟಿತು.
Worth mentioning that its Satwik & Chirag's maiden entry into FINAL of BWF World Tour 1000 tournament.
— India_AllSports (@India_AllSports) June 17, 2023
This year, there are only 4 such tournaments (All England, China Open, Malaysia Open & Indonesia Open). #IndonesiaOpen https://t.co/Jj1PXlPcEn
ಇದನ್ನೂ ಓದಿ Indonesia Open: ಶ್ರೀಕಾಂತ್ಗೆ ಗೆಲುವು; ಸೋತು ನಿರ್ಗಮಿಸಿದ ಸಿಂಧು, ಲಕ್ಷ್ಯ ಸೇನ್
ಶುಕ್ರವಾರ ನಡೆದಿದ್ದ ಕ್ವಾರ್ಟರ್ ಫೈನಲ್ ಪುರುಷರ ಡಬಲ್ಸ್‌ನಲ್ಲಿ 7ನೇ ಶ್ರೇಯಾಂಕದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಅಗ್ರ ಶ್ರೇಯಾಂಕದ ಫಜರ್ ಅಲ್ಫಿಯಾನ್-ಮುಹಮ್ಮದ್ ರಿಯಾನ್ ಅರ್ದಿ ಯಾಂಟೊ ವಿರುದ್ಧ ಅಮೋಘ ಗೆಲುವು ದಾಖಲಿಸಿ ಸೆಮಿಫೈನಲ್ ಪ್ರವೇಶ ಪಡೆದಿತ್ತು. ಇದೀಗ ಪ್ರಶಸ್ತಿ ಸುತ್ತಿನಲ್ಲಿಯೂ ಉತ್ತಮ ಪ್ರದರ್ಶನ ತೋರುವ ಮೂಲಕ ಈ ಟೂರ್ನಿಯಲ್ಲಿ ಚೊಚ್ಚಲ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.