Site icon Vistara News

Indonesia Open: ಚೊಚ್ಚಲ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಸಾತ್ವಿಕ್‌-ಚಿರಾಗ್‌ ಜೋಡಿ

Indonesia Open

ಜಕಾರ್ತಾ: ಭಾರತದ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ(Satwiksairaj Rankireddy and Chirag Shetty) “ಇಂಡೋ ನೇಷ್ಯಾ ಓಪನ್‌” ಬ್ಯಾಡ್ಮಿಂಟನ್‌(Indonesia Open) ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿ ಇತಿಹಾಸ ನಿರ್ಮಿಸಿದ್ದಾರೆ. ಶನಿವಾರ ಫೈನಲ್​ಗೆ ಲಗ್ಗೆ ಇಡುವ ಮೂಲಕ ವರ್ಲ್ಡ್ ಟೂರ್‌ ಸೂಪರ್‌-1000ನಲ್ಲಿ ಈ ಸಾಧನೆ ಮಾಡಿದ ಮೊದಲ ಜೋಡಿ ಎಂಬ ಹಿರಿಮೆ ಪಾತ್ರರಾಗಿದ್ದರು. ಇದೀಗ ಚೊಚ್ಚಲ ಪ್ರಶಸ್ತಿ ಗೆದ್ದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಪುರುಷರ ಡಬಲ್ಸ್ ವಿಭಾಗದ​ ಪ್ರಶಸ್ತಿ ಸರಮರದಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನದಲ್ಲಿರುವ ಸಾತ್ವಿಕ್‌-ಚಿರಾಗ್‌ ಜೋಡಿ ಮಲೇಷ್ಯಾದ ಎರಡನೇ ಶ್ರೇಯಾಂಕಿತ ಜೋಡಿ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ಅವರನ್ನು ನೇರ ಗೇಮ್​ಗಳಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.

ವಿಶ್ವದ ಎರಡನೇ ಶ್ರೇಯಾಂಕಿತ ಮತ್ತು ವಿಶ್ವ ಚಾಂಪಿಯನ್​ ಜೋಡಿಗೆ ಭಾರತೀಯ ಜೋಡಿಯ ಮುಂದೆ ಸಂಪೂರ್ಣ ಮಂಕಾದರು. ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಸಾತ್ವಿಕ್‌-ಚಿರಾಗ್‌ ಯಾವುದೇ ಹಂತದಲ್ಲಿಯೂ ಎದುರಾಳಿಗೆ ಮೇಲುಗೈ ಸಾಧಿಸಲು ಅವಕಾಶವೇ ನೀಡಲಿಲ್ಲ. 43 ನಿಮಿಷಗಳ ಕಾಲ ನಡೆದ ಈ ಹೋರಾಟದಲ್ಲಿ ಸಾತ್ವಿಕ್‌-ಚಿರಾಗ್‌ 21-17,21-18 ನೇರ ಗೇಮ್​ ಗಳಿಂದ ಮಲೇಷ್ಯಾ ಜೋಡಿಯನ್ನು ಮಗುಚಿ ಹಾಕಿದರು.

ಇದನ್ನೂ ಓದಿ India Open 2023 | ಇಂಡಿಯಾ ಓಪನ್​ ಬ್ಯಾಡ್ಮಿಂಟನ್​ ಟೂರ್ನಿಯಿಂದ ಹಿಂದೆ ಸರಿದ ಸಾತ್ವಿಕ್​-ಚಿರಾಗ್​ ಜೋಡಿ!

ಶನಿವಾರ ನಡೆದಿದ್ದ ಸೆಮಿಫೈನಲ್​ ಪಂದ್ಯದಲ್ಲಿ ಭಾರತದ ಈ ಜೋಡಿ ಕೊರಿಯಾದ ಮಿನ್‌ ಹ್ಯುಕ್‌ ಕಾಂಗ್‌-ಸೆಯಂಗ್‌ ಜೇ ಸೆವೊ(Kang-Seo) ವಿರುದ್ಧ ಮೊದಲ ಗೇಮ್​ ಸೋತರೂ ಆ ಬಳಿಕ ತೀವ್ರ ಹೋರಾಟ ನಡೆಸಿ 17-21, 21-19, 21-18 ಅಂತರದಿಂದ ಗೆಲುವು ಸಾಧಿಸಿತ್ತು.

Exit mobile version