Site icon Vistara News

INDvsPAK : ಪಾಕ್​ ಮತ್ತು ಭಾರತ ಪಂದ್ಯದ ಕುರಿತು ನಟ ಕಮಲ್​ ಹಾಸನ್​ ನೀಡಿರುವ ಹೇಳಿಕೆಯ ವಿಡಿಯ ಇಲ್ಲಿದೆ

INDvsPAK

ಬೆಂಗಳೂರು: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (INDvsPAK) ನಡುವಿನ ಪಂದ್ಯಕ್ಕೆ ಮೊದಲು ಕುತುಹೂಲ ನಿರೀಕ್ಷಿತ. ಇಂತಹ ಪಂದ್ಯಗಳಿಗೆ ಬಗ್ಗೆ ಕ್ರಿಕೆಟ್​ ಪಂಡಿತರ ವಿಶ್ಲೇಷಣೆಗಳು, ಮಾಜಿ ಕ್ರಿಕೆಟಿಗರ ಚರ್ಚೆಗಳನ್ನು ಒಳಗೊಂಡ ವಿಶೇಷ ಪಾಡ್​ಕಾಸ್ಟ್​​ಗಳನ್ನು ಮತ್ತು ಎರಡೂ ದೇಶಗಳ ಮಾಜಿ ಆಟಗಾರರೊಂದಿಗಿನ ಸಂದರ್ಶನಗಳಿಗೆ ಈಗ ಹೆಚ್ಚು ಚಲಾವಣೆಯಲ್ಲಿದೆ. ಹೆಚ್ಚುವರಿಯಾಗಿ, ಟೂರ್ನಿಗೆ ಮೊದಲು ನಿರಂತರ ಜಾಹೀರಾತುಗಳು ಪ್ರಸಾರವಾಗುತ್ತಿವೆ. ಅದರಲ್ಲೊಂದು ಕಮಲ್ ಹಾಸನ್ (INDvsPAK) ಹೇಳಿಕೆ ಗಮನ ಸೆಳೆದಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಮುಖಾಮುಖಿಯ ಎರಡೂ ರಾಷ್ಟ್ರವನ್ನು ಏಕೀಕರಿಸುತ್ತವೆ. ಈ ಶಕ್ತಿಯು ಪರಸ್ಪರ ಚರ್ಚೆಗೆ ಕಾರಣವಾಗುತ್ತವೆ. ಎರಡೂ ದೇಶಗಳ ಆಟಗಾರರು ಹಾಗೂ ಅಭಿಮಾನಿಗಳು ಪರಸ್ಪರ ತಮ್ಮ ದೇಶಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಹೊರಡುತ್ತಾರೆ. ಆದರೆ ಇವೆಲ್ಲದರ ನಡುವೆ ಕೆಲವೊಂದು ಸಂದರ್ಶನಗಳು ಹಚ್ಚು ಗಮನ ಸೆಳೆಯುತ್ತವೆ. ಈ ಎಲ್ಲದರ ನಡುವೆ ಪ್ರತಿಭಾವಂತ ನಟ ಮತ್ತು ಚಲನಚಿತ್ರ ನಿರ್ದೇಶಕ ಕಮಲ್ ಹಾಸನ್ ಅವರು ಬಹುನಿರೀಕ್ಷಿತ ಪಂದ್ಯದ ಮುನ್ನಾದಿನದಂದು ಸ್ಟಾರ್ ಸ್ಪೋರ್ಟ್ಸ್ ಮಾಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಹಿನ್ನೆಲೆಯ ಮೇಲೆ ಸಂಪೂರ್ಣ ಬಿಳಿ ಬೆಳಕಿನಿಂದ ರಚಿಸಿದ ಫ್ರೇಮ್ ಮೇಲೆ ಕಮಲ್​ ಹಾಸನ್​ ಕ್ರಿಕೆಟ್​ ಪ್ರೇಮಿಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ. ಅದಕ್ಕಿಂತ ಮೊದಲು ಅವರು ಕೈಮುಗಿದು ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: IND vs PAK: ನಂ.1 ಬ್ಯಾಟರ್​ ಆಗಿದ್ದರೆ ಪಾಕ್​ ವಿರುದ್ಧ ಆಡಿ ತೋರಿಸು; ಸೂರ್ಯಕುಮಾರ್​ಗೆ ಸವಾಲೆಸೆದ ಪಾಕ್​ ಆಟಗಾರ

“ನಮಸ್ತೆ ಇಂಡಿಯಾ, ಯೇ ಟೈಮ್ ಹೈ ಸಿರ್ಫ್ ಖುದ್ಕಿ ಆವಾಜ್ ನಹೀ, ದೇಶ್ ಕಿ ಆವಾಜ್ ಬನ್ನೆ ಕಾ (ನನ್ನ ಸಹ ಭಾರತೀಯರಿಗೆ ಶುಭಾಶಯಗಳು, ಇದು ನಮ್ಮ ಸ್ವಂತ ಧ್ವನಿಯಾಗಲು ಮಾತ್ರವಲ್ಲ, ಭಾರತದ ಬೆನ್ನೆಲುಬಾಗಲು ಸೂಕ್ತ ಸಮಯವಾಗಿದೆ). ಯೇ ಟೈಮ್ ಹೈ ಗಾವ್, ಶಹರ್, ಔರ್ ಪ್ರದೇಶ್ ಕೋ ಛೋಡ್ಕರ್, ದೇಶ್ ಬನ್ನೆ ಕಾ (ಇದು ಹಳ್ಳಿಗಳು, ಪಟ್ಟಣಗಳು ಮತ್ತು ರಾಜ್ಯಗಳನ್ನು ಒಟ್ಟಿಗೆ ಒಗ್ಗೂಡಿಸುವ ಮತ್ತು ಒಂದು ರಾಷ್ಟ್ರವಾಗಿ ಒಂದೇ ಘಟಕವನ್ನು ರಚಿಸುವ ಪರಿಪೂರ್ಣ ಯುಗವಾಗಿದೆ). ಯೇ ಟೈಮ್ ಹೈ ಅನೆಕ್ ಇಂಡಿಯನ್ಸ್ ಸೇ ಏಕ್ ಇಂಡಿಯನ್ ಬನ್ನೆ ಕಾ (ಈ ಬಾರಿ ಅನೇಕ ಭಾರತೀಯರಲ್ಲಿ ಒಬ್ಬರಾಗುವ ಸಮಯವಾಗಿದೆ ). ಸಂಜೆ 7:52 (ಭಾರತೀಯ ಸಮಯ ವಲಯಕ್ಕೆ ಅನುಗುಣವಾಗಿ ಭಾರತದ ಎಲ್ಲಾ ಪಂದ್ಯಗಳಿಗೆ ರಾಷ್ಟ್ರಗೀತೆ ಪ್ರಾರಂಭವಾಗುವ ಸಮಯವಾಗಿದೆ.), ಇಂಡಿಯಾ ಕೆ ಹರ್ ಮ್ಯಾಚ್ ಮೇನ್ ಇಂಡಿಯಾ ಕೆ ಸಾಥ್ ಖಾದಾ ರಹೇಗಾ ಯೇ ಇಂಡಿಯನ್ (ಈ ಭಾರತೀಯರು ತಮ್ಮ ಪ್ರತಿಯೊಂದು ಪಂದ್ಯದಲ್ಲೂ ಟೀಮ್ ಇಂಡಿಯಾದ ಬೆನ್ನೆಲುಬಾಗಿರುತ್ತಾರೆ)” ಎಂದು ಕಮಲ್ ಹಾಸನ್ ತಮ್ಮ ಉತ್ಸಾಹದ ಧ್ವನಿಯಲ್ಲಿ ಹೇಳಿದ್ದಾರೆ.

Exit mobile version