ಮುಂಬೈ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ 33ನೇ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ (Ind vs Sl) ವಿರುದ್ಧ ಸೆಣಸಲಿದೆ. ಮೆನ್ ಇನ್ ಬ್ಲೂ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಪಂದ್ಯಾವಳಿಯಲ್ಲಿ ಆಡಿದ ಎಲ್ಲಾ ಆರು ಪಂದ್ಯಗಳನ್ನು ಗೆದ್ದಿದೆ ಮತ್ತು ಪ್ರಸ್ತುತ 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನದಲ್ಲಿದೆ.
ಶ್ರೀಲಂಕಾ ವಿರುದ್ಧ ದಾಖಲೆಯ 302 ರನ್ಗಳ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಹಾಲಿ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಇನ್ನುಳಿದ ಮೂರು ಸ್ಥಾನಕ್ಕೆ ಕನಿಷ್ಠ 5 ತಂಡಗಳು ಪೈಪೋಟಿ ನಡೆಸಲಿದೆ.
37 ರನ್ಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ ಶ್ರೀಲಂಕಾ
ಸಿರಾಜ್ ಅವರ ಬೌಲಿಂಗ್ ದಾಳಿಒಗೆ ನಲುಗಿದ ಶ್ರೀಲಂಕಾ 4 ವಿಕೆಟ್ ಕಳೆದುಕೊಂಡು ರನ್ ಗಳಿಸಲು ಪರದಾಡುತ್ತಿದೆ.
ವಿರಾಟ್ ಕೊಹ್ಲಿ(88), ಶುಭಮನ್ ಗಿಲ್(92) ಮತ್ತು ಶ್ರೇಯಸ್ ಅಯ್ಯರ್(82) ಅವರು ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ಭಾರತ ತಂಡ ಶ್ರೀಲಂಕಾ(IND vs SL) ವಿರುದ್ಧ 357 ರನ್ ಗಳಿಸಿ ಸವಾಲೊಡ್ಡಿದೆ. ಎದುರಾಳಿ ಲಂಕಾ ಗೆಲುವಿಗೆ 358 ರನ್ ಬಾರಿಸಬೇಕಿದೆ.
ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿದ ಶ್ರೇಯಸ್ ಅಯ್ಯರ್