Site icon Vistara News

Ind vs Sl: ಲಂಕಾ ವಿರುದ್ಧ 302 ರನ್​ಗಳ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟ ಭಾರತ

Ind vs SL

ಮುಂಬೈ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ 33ನೇ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ (Ind vs Sl) ವಿರುದ್ಧ ಸೆಣಸಲಿದೆ. ಮೆನ್ ಇನ್ ಬ್ಲೂ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಪಂದ್ಯಾವಳಿಯಲ್ಲಿ ಆಡಿದ ಎಲ್ಲಾ ಆರು ಪಂದ್ಯಗಳನ್ನು ಗೆದ್ದಿದೆ ಮತ್ತು ಪ್ರಸ್ತುತ 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನದಲ್ಲಿದೆ.

Abhilash B C

ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟಿದ ಹಿಟ್​ಮ್ಯಾನ್​ ರೋಹಿತ್​

Sukhesha Padibagilu

ಆಟಗಾರರು ರಾಷ್ಟ್ರಗೀತೆಗಾಗಿ ಹೊರಟಿದ್ದಾರೆ. ಶ್ರೀಲಂಕಾ ಮೊದಲು ಮತ್ತು ನಂತರ ಭಾರತ. ಸಚಿನ್ ತೆಂಡೂಲ್ಕರ್ ಅವರ ಪ್ರತಿಮೆಯನ್ನು ನಿನ್ನೆ ಉದ್ಘಾಟಿಸಲಾಗಿತ್ತು.

Sukhesha Padibagilu

ಟಾಸ್​ ಗೆದ್ದರೂ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುತ್ತಿದ್ದೆ. ಬ್ಯಾಟಿಂಗ್ ಮಾಡಲು ಉತ್ತಮ ಪಿಚ್. ನಿಸ್ಸಂಶಯವಾಗಿ ಉತ್ತಮ ಆರಂಭಕ್ಕೆ ಸಹಾಯವಾಗಲಿದೆ. ಹೊನಲು ಬೆಳಕಿನ ಅಡಿಯಲ್ಲಿ ನಮ್ಮ ವೇಗಿಗಳು ಮಿಂಚಲಿದ್ದಾರೆ. ತವರು ಮೈದಾನದಲ್ಲಿ ಭಾರತೀಯ ನಾಯಕನಾಗಿ ಮೊದಲ ಪಂದ್ಯ. ಇದು ಅತ್ಯುತ್ತಮ ಕ್ಷಣ. ನಾವು ನಮ್ಮ ಪ್ರದರ್ಶನ ಮುಂದುವರಿಲಿದ್ದೇವೆ.. ಕಳೆದ ಪಂದ್ಯದಂತೆಯೇ ಅದೇ ತಂಡವನ್ನು ಆಡಿಸಲಿದ್ದೇವೆ ಎಂದು ಟಾಸ್ ಸೋತ ರೋಹಿತ್​ ಶರ್ಮಾ ಹೇಳಿದ್ದಾರೆ.

Sukhesha Padibagilu

ನಾವು ಮೊದಲು ಬೌಲಿಂಗ್ ಮಾಡಲಿದ್ದೇವೆ. ಎರಡನೇ ಭಾಗದಲ್ಲಿ ಬ್ಯಾಟಿಂಗ್ ಮಾಡಲು ಪಿಚ್ ಉತ್ತಮವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಕಳೆದ ಕೆಲವು ಪಂದ್ಯಗಳಲ್ಲಿ ನಮ್ಮ ತಂಡದ ಪ್ರತಿಯೊಬ್ಬರೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.. ಅವರು ಇಂದು ಅದೇ ರೀತಿ ಮುಂದುವರಿಸುತ್ತಾರೆ ಎಂದು ಆಶಿಸುತ್ತೇವೆ. ಒಂದು ಬದಲಾವಣೆ ಇದೆ ತಂಡದಲ್ಲಿ ಎಂದು ಲಂಕಾ ತಂಡದ ನಾಯಕ ಕುಸಾಲ್​ ಮೆಂಡಿಸ್ ಹೇಳಿದ್ದಾರೆ.

Sukhesha Padibagilu

ತಂಡಗಳ ವಿವರ ಇಲ್ಲಿದೆ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.

ಶ್ರೀಲಂಕಾ ತಂಡ: ಪಥುಮ್ ನಿಸ್ಸಾಂಕಾ, ದಿಮುತ್ ಕರುಣರತ್ನೆ, ಕುಸಾಲ್ ಮೆಂಡಿಸ್ (ಸಿ & ವಿಕೆ), ಸದೀರಾ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ದುಶಾನ್ ಹೇಮಂತ, ಮಹೇಶ್ ತೀಕ್ಷಾನಾ, ಕಸುನ್ ರಜಿತಾ, ದುಷ್ಮಂತ ಚಮೀರಾ, ದಿಲ್ಶಾನ್ ಮಧುಶಂಕಾ.

Exit mobile version