Site icon Vistara News

ಆರಂಭದಲ್ಲಿ ‘ಮೊಯೇ ಮೊಯೇ’ ಹಾಡಿಗೆ​ ಸ್ಟೆಪ್ಸ್​, ಬಳಿಕ ಸ್ಕೇಟಿಂಗ್​ ಶೈಲಿಯ ನಡಿಗೆ; ಕೊಹ್ಲಿ ಅವತಾರಕ್ಕೆ ನೆಟ್ಟಿಗರು ಫಿದಾ!

virat kohli dance

ಬೆಂಗಳೂರು: ಅಫಘಾನಿಸ್ತಾನ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat Kohli) ತೋರಿದ 2 ಅವತಾರಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗಿದೆ. ಮೊದಲನೆಯದು, ಪ್ರಶಸ್ತಿ ನೀಡುವ ವೇಳೆ ಫೋಟೊಗೆ ಫೋಸ್​ ನೀಡಲು ಸ್ಕೇಟಿಂಗ್​ ಶೈಲಿಯಲ್ಲಿ ಜಾರಿಕೊಂಡು ಬಂದದ್ದು, ಇನ್ನೊಂದು ಮೊಯೇ ಮೊಯೇ ಹಾಡಿಗೆ ಹೆಜ್ಜೆ ಹಾಕಿದ್ದು. ಈ ಎರಡು ಘಟನೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸೂಪರ್​ ಓವರ್​ ಗೆಲುವಿನ ಬಳಿಕ ಟ್ರೋಫಿಯೊಂದಿಗೆ ಆಟಗಾರರು ಫೋಟೋಶೂಟ್​ಗೆ ತಯಾರಾಗಿ ನಿಂತಿದ್ದರು. ಆದರೆ ಕೊಹ್ಲಿ ಬರುವುದು ಕೊಂಚ ತಡವಾಗಿತ್ತು. ರೋಹಿತ್ ಶರ್ಮಾ ಟ್ರೋಫಿಯನ್ನು ಪಡೆದು ಗೆಲುವಿನ ಪೋಸ್ ನೀಡಲು ಬರುತ್ತಿರುವುದನ್ನು ಕಂಡ ಕೊಹ್ಲಿ ಶರವೇಗದಲ್ಲಿ ಕಾಲಿನಿಂದ ಜಾರಿಕೊಂಡು ಬಂದು ಫೋಟೊಶೂಟ್​ ಬಳಿ ನಿಂತರು. ಈ ಮೂಲಕ ಪಕ್ಕಾ ಟೈಮಿಂಗ್​ಗೆ ಸ್ಥಳದಲ್ಲಿ ಹಾಜರಾದರು. ಕೊಹ್ಲಿಯ ಸ್ಕೇಟಿಂಗ್​ ಶೈಲಿಯ ಆಗಮನ ಕಂಡು ಶಿವಂ ದುಬೆ ಒಂದು ಕ್ಷಣ ದಂಗಾದರು. ಈ ವಿಡಿಯೊ ಇಲ್ಲಿದೆ.

ಮೊಯೇ ಮೊಯೇ ಹಾಡಿಗೆ​ ಸ್ಟೆಪ್ಸ್ ಹಾಕಿದ ಕೊಹ್ಲಿ

ವಿರಾಟ್​ ಕೊಹ್ಲಿ ಅವರು ಕ್ರಿಕೆಟ್​ನಲ್ಲಿ ಎಷ್ಟು ಖ್ಯಾತಿ ಪಡೆದಿದ್ದಾರೋ ಅಷ್ಟೇ ಖ್ಯಾತಿಯನ್ನು ಮೈದಾನದಲ್ಲಿ ಡ್ಯಾನ್ಸ್​ ಮಾಡುವ ಮೂಲಕವೂ ಪಡೆದಿದ್ದಾರೆ. ಕೊಹ್ಲಿ ಹಲವು ಬಾರಿ ಫಿಲ್ಡಿಂಗ್​ ನಡೆಸುವ ವೇಳೆ ಡ್ಯಾನ್ಸ್​ ಮಾಡಿದ ವಿಡಿಯೊ ವೈರಲ್​ ಆಗಿತ್ತು. ಇಂತಹದ್ದೇ ಘಟನೆ ಬುಧವಾರ ಚಿನ್ನಸ್ವಾಮಿಯಲ್ಲಿ ನಡೆದ ಆಫ್ಘನ್​ ಎದುರಿನ ಟಿ20 ಪಂದ್ಯದಲ್ಲಿ ಕಂಡುಬಂತು. ಹೌದು, ಸ್ಟೇಡಿಯಂನಲ್ಲಿ ಮೊಯೇ ಮೊಯೇ ಎಂದು ಪ್ರತಿಧ್ವನಿಸಿತು. ಹಾಡನ್ನು ಪ್ಲೇ ಮಾಡುತ್ತಿದ್ದಂತೆ ಕೊಹ್ಲಿ ಕಣ್ಮುಚ್ಚಿಕೊಂಡು ಸೊಂಟ ಬಳುಕಿಸಿದರು. ಈ ವಿಡಿಯೊ ವೈರಲ್​ ಆಗಿದೆ.

ಇದನ್ನೂ ಓದಿ Team India: ಭಾರತದ ಸೂಪರ್​ ಗೆಲುವಿಗೆ ಪಾಕಿಸ್ತಾನದ ದಾಖಲೆ ಪತನ


ಅನಗತ್ಯ ದಾಖಲೆ ಬರೆದ ಕೊಹ್ಲಿ


ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಗೋಲ್ಡನ್​ ಟಕ್​ ಆಗುವ ಮೂಲಕ ಅನಗತ್ಯ ದಾಖೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಭಾರತದ ಪರ ಅತ್ಯಧಿಕ ಶೂನ್ಯ ಸಂಪಾದಿಸಿದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಹೆಸರಿನಲ್ಲಿತ್ತು. ಸಚಿನ್​ 34 ಬಾರಿ ಶೂನ್ಯಕ್ಕೆ ಔಟಾಗಿದ್ದರು. ಆದರೆ ಈಗ ಕೊಹ್ಲಿ 35 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಸಚಿನ್​ ಹಿಂದಿಕ್ಕಿ ಈ ಅನಗತ್ಯ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುವ ವಿರಾಟ್​ ಕೊಹ್ಲಿಗೆ ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರ ಆಟ ನೋಡಲೆಂದೇ ಆರ್​ಸಿಬಿ ಅಭಿಮಾನಿಗಳು ಈ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಆದರೆ, ಕೊಹ್ಲಿ ಗೋಲ್ಡನ್​ ಡಕ್​ಗೆ ವಿಕೆಟ್​ ಕೈಚೆಲ್ಲಿ ಎಲ್ಲ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.

Exit mobile version