Site icon Vistara News

Indian Olympic Association ಮೇಲೆ ನಿಷೇಧದ ಭೀತಿ, ಯಾಕೆ ಈ ದುಸ್ಥಿತಿ?

International Olympic Committee threatens India with suspension if elections are not held

ನವ ದೆಹಲಿ : ಕಳೆದ ಆರು ತಿಂಗಳಿಂದ ಗೊಂದಲದ ಗೂಡಾಗಿರುವ Indian Olympic Association ಮೇಲೆ ನಿಷೇಧದ ಭೀತಿ ಎದುರಾಗಿದೆ. ಮುಂದಿನ ಕೆಲವು ವಾರಗಳ ಒಳಗೆ ಚುನಾವಣೆ ನಡೆಸದೇ ಹೋದರೆ ಮಾನ್ಯತೆ ರದ್ದು ಮಾಡುವುದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಎಚ್ಚರಿಕೆ ನೀಡಿದೆ.

೨೦೨೧ರ ಡಿಸೆಂಬರ್‌ನಲ್ಲಿ Indian Olympic Association ಚುನಾವಣೆ ನಡೆದು ಹೊಸ ಪದಾಧಿಕಾರಿಗಳ ನೇಮಕ ನಡೆಯಬೇಕಾಗಿತ್ತು. ಆದರೆ, Indian Olympic Association ಸಂವಿಧಾನ ತಿದ್ದುಪಡಿ ಹಾಗೂ ಕಾನೂನು ಸಮರದ ಒತ್ತಡದಲ್ಲಿರುವ ಸಂಸ್ಥೆಗೆ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಇದೇ ಸ್ಥಿತಿ ಮುಂದುವರಿದರೆ ಸಂಸ್ಥೆಯ ಮಾನ್ಯತೆ ರದ್ದು ಮಾಡುವುದಾಗಿ ಅಂತಾರಾಷ್ಟ್ರಿಯ ಒಲಿಂಪಿಕ್ಸ್‌ ಸಂಸ್ಥೆ ಹಾಗೂ ಏಷ್ಯಾ ಒಲಿಂಪಿಕ್ ಸಂಸ್ಥೆ ಹೇಳಿದೆ.

ಏನಿದು ಸಮಸ್ಯೆ

ಕಳೆದ ಡಿಸೆಂಬರ್‌ನಲ್ಲಿ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ತನ್ನ ಸಂವಿಧಾನದ ತಿದ್ದುಪಡಿಗೆ ಆರು ಸದಸ್ಯರ ಸಮಿತಿ ನೇಮಕ ಮಾಡಿತ್ತು. ಆ ಸಮಿತಿ ತನ್ನ ಕೆಲಸವನ್ನು ಇನ್ನೂ ಮುಗಿಸಿಲ್ಲ. ಅಂತೆಯೇ ೨೦೧೭ರಲ್ಲಿ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡಿರುವ ನರಿಂದರ್‌ ಬಾತ್ರಾ ಅವರು Indian Olympic Association ಅಧ್ಯಕ್ಷರಾಗಿ ಮುಂದುವರಿಯುವಂತಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ದಿಲ್ಲಿ ಹೈಕೋರ್ಟ್‌ ಅವರನ್ನು ಸ್ಥಾನದಿಂದ ಉಚ್ಚಾಟನೆ ಮಾಡಿತ್ತು. ಬಳಿಕ ಬಾತ್ರಾ ಅವರೇ ರಾಜೀನಾಮೆ ನೀಡಿದ್ದರು. ಈ ಎಲ್ಲ ಗೊಂದಲಗಳಿಂದಾಗಿ ಇನ್ನೂ ಚುನಾವಣೆ ನಡೆದಿಲ್ಲ.

Indian Olympic Association ನಿಯಮಗಳನ್ನು ಪಾಲಿಸುತ್ತಿಲ್ಲ ಅರೋಪಿಸಿದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಮಾನ್ಯತೆ ರದ್ದು ಮಾಡುವುದಾಗಿ ಎಚ್ಚರಿಕೆ ಕೊಟ್ಟಿದೆ. ಈ ವೇಳೆ ಚುನಾವಣೆ ನಡೆಸಲು ಒಂದಿಷ್ಟು ಕಾಲಾವಕಾಶ ಕೊಟ್ಟಿದೆ. ಅಷ್ಟರೊಳಗೆ ಸಮಸ್ಯೆ ಸರಿಪಡಿಸಿಕೊಂಡರೆ ಮಾತ್ರ ಮಾನ್ಯತೆ ಉಳಿಯಲಿದೆ.

ಏನಾಗುವುದು?

ಮಾನ್ಯತೆ ರದ್ದಾರೆ ಅಂತಾರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾರತದ ಕ್ರೀಡಾಳುಗಳು Indian Olympic Association ಪ್ರತಿನಿಧಿಸಉ ಆಗುವುದಿಲ್ಲ. ಅವರು ಭಾರತದ ರಾಷ್ಟ್ರ ಧ್ವಜ ಹಾಗೂ ಅಂತಾರಾಷ್ಟ್ರಿಯ ಒಲಿಂಪಿಕ್‌ ಸಂಸ್ಥೆಯಡಿ ಸ್ಪರ್ಧೆ ನಡೆಸಬೇಕಾಗುತ್ತದೆ.

ಇದನ್ನೂ ಓದಿ | ​​Commonwealth Games ಕೂಟದಲ್ಲಿ ಪದಕ ಗೆಲ್ಲಲು ಕ್ರೀಡಾಪಟುಗಳಿಗೆ ಟಿಪ್ಸ್‌ ಕೊಟ್ಟ ಪ್ರಧಾನಿ ಮೋದಿ

Exit mobile version