ನವದೆಹಲಿ: ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ 2028 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ (Cricket in LA28) ಕ್ರಿಕೆಟ್ ಮತ್ತು ಸ್ಕ್ವಾಷ್ ಅನ್ನು ಸೇರಿಸಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿಕೃತವಾಗಿ ಒಪ್ಪಿಕೊಂಡಿದೆ. ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಎರಡೂ ಕ್ರೀಡೆಗಳನ್ನು ಲಾಸ್ ಏಂಜಲಿಸ್ ಸಂಘಟನಾ ಸಮಿತಿಯು ಶಿಫಾರಸು ಮಾಡಿತ್ತು. ಅಂತಿಮವಾಗಿ ಇದನ್ನು ಉನ್ನತ ಒಲಿಂಪಿಕ್ ಸಂಸ್ಥೆ ಅಂಗೀಕರಿಸಿತು.
Following a review by the Olympic Programme Commission, the IOC Executive Board puts the @LA28 Organising Committee's additional sports proposal to the IOC Session.
— IOC MEDIA (@iocmedia) October 13, 2023
Baseball/softball, cricket (T20), flag football, lacrosse (sixes), and squash are the 5 sports submitted. pic.twitter.com/pL6IOn87Jj
ಈ ಹಿಂದೆ 1900ರಲ್ಲಿ ಪ್ಯಾರಿಸ್ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಕೇವಲ 18 ಕ್ರೀಡೆಗಳಲ್ಲಿ ಒಂದಾಗಿತ್ತು. ಅಲ್ಲಿ ನಡೆದ ಪಂದ್ಯಾವಳಿಯ ಫೈನಲ್ನಲ್ಲಿ ಗ್ರೇಟ್ ಬ್ರಿಟನ್ ಫ್ರಾನ್ಸ್ ಅನ್ನು ಸೋಲಿಸಿತ್ತು. ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂ ತಂಡಗಳು ಆ ಆವೃತ್ತಿಯಲ್ಲಿ ಆಡಲು ಒಪ್ಪಿರಲಿಲ್ಲ. ಈ ಎರಡು ತಂಡಗಳ ನಡುವ ಸ್ಪರ್ಧೆ ನಡೆಸಲಾಗಿತ್ತು. ಆ ವೇಳೆ ಪ್ರತಿ ತಂಡವು 11 ಆಟಗಾರರ ಬದಲು 12 ಆಟಗಾರರನ್ನು ಹೊಂದಿತ್ತು ಮತ್ತು ಪಂದ್ಯಗಳನ್ನು ಎರಡು ದಿನಗಳ ಕಾಲ ಆಡಲಾಯಿತು. ಗ್ರೇಟ್ ಬ್ರಿಟನ್ ಅನ್ನು ಡೆವೊನ್ ಮತ್ತು ಸಾಮರ್ಸೆಟ್ ವಾಂಡರರ್ಸ್ ಪ್ರತಿನಿಧಿಸಿದರೆ, ಫ್ರೆಂಚ್ ತಂಡವು ಹೆಚ್ಚಾಗಿ ಪ್ಯಾರಿಸ್ ತಂಡದಲ್ಲಿ ಬ್ರಿಟಿಷ್ ನಾಗರಿಕರೇ ಆಡಿದ್ದರು.
2028ರ ಒಲಿಂಪಿಕ್ಸ್ನಲ್ಲಿ ಸಾಫ್ಟ್ಬಾಲ್, ಫ್ಲ್ಯಾಗ್ ಫುಟ್ಬಾಲ್, ಲಾಕ್ರೋಸ್, ಕ್ರಿಕೆಟ್ ಮತ್ತು ಸ್ಕ್ವಾಷ್ ಎಂಬ ಐದು ವಿಭಾಗಗಳನ್ನು ಸೇರಿಸಲು ಎಲ್ಎ ಸಂಘಟನಾ ಸಮಿತಿ ಪ್ರಸ್ತಾಪಿಸಿತ್ತು.
ಕೆಲವು ದಿನಗಳ ಹಿಂದೆ ಅನುಮೋದನೆ
ಲಾಸ್ ಏಂಜಲೀಸ್ 2028 ಒಲಿಂಪಿಕ್ಸ್ ಆಯೋಜಕರು ಕ್ರಿಕೆಟ್ ಅನ್ನು ಕ್ರೀಡಾಕೂಟದಲ್ಲಿ ಸೇರಿಸಲು ಶಿಫಾರಸು ಮಾಡಿರುವ ನಿರ್ಧಾರಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಂತಸ ವ್ಯಕ್ತಪಡಿಸಿದ್ದರು. ಎರಡು ವರ್ಷಗಳ ಪ್ರಕ್ರಿಯೆಯ ಪ್ರಯತ್ನದ ಬಳಿಕ. ಲಾಸ್ ಏಂಜಲೀಸ್ನಲ್ಲಿ ಸೇರಿಸಬೇಕಾದ ಕ್ರೀಡೆಗಳ ಪಟ್ಟಿಯಲ್ಲಿ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸಿತ್ತು
ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮಾತನಾಡಿ, “ಎಲ್ಎ 28 ಕ್ರಿಕೆಟ್ ಅನ್ನು ಒಲಿಂಪಿಕ್ಸ್ನಲ್ಲಿ ಸೇರಿಸಲು ಶಿಫಾರಸು ಮಾಡಿರುವುದರಿಂದ ನಮಗೆ ಸಂತೋಷವಾಗಿದೆ. ಇದು ಅಂತಿಮ ನಿರ್ಧಾರವಲ್ಲದಿದ್ದರೂ, ಒಂದು ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಅನ್ನು ನೋಡುವ ನಿಟ್ಟಿನಲ್ಲಿ ಇದು ಬಹಳ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ : IOC Session: ಮುಂಬೈನಲ್ಲಿ ನಡೆಯಲಿದೆ ಐತಿಹಾಸಿಕ ಒಲಿಂಪಿಕ್ಸ್ ಅಧಿವೇಶನ; ಏನಿದರ ವಿಶೇಷ?
ಕಳೆದ ಎರಡು ವರ್ಷಗಳಲ್ಲಿ ಹೊಸ ಕ್ರೀಡಾ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಲಾಸ್ ಏಂಜಲಿಈಸ್ 28 ನೀಡಿದ ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ .ಮುಂದಿನ ವಾರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ ಭಾರತದಲ್ಲಿ ನಡೆಯಲಿರುವ ಐಒಸಿ ಅಧಿವೇಶನದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದರಯು,
ನ್ಯಾಷನಲ್ ಫುಟ್ಬಾಲ್ ಲೀಗ್ (ಎನ್ಎಫ್ಎಲ್) ನ ಅಗಾಧ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಯುಎಸ್ ಮೂಲದ ಕ್ರೀಡಾಕೂಟಕ್ಕೆ ಆಕರ್ಷಕ ಆಯ್ಕೆಯಾಗಿರುವ ಫ್ಲ್ಯಾಗ್ ಫುಟ್ಬಾಲ್, ಸ್ಕ್ವಾಷ್ ಮತ್ತು ಲ್ಯಾಕ್ರೋಸ್ ಕ್ರೀಡೆಯನ್ನೂ ಅನುಮೋದನೆಗೆ ಕಳುಹಸಿತ್ತು. 2022 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ನ ಅದ್ಭುತ ಯಶಸ್ಸಿನ ನಂತರ ಕ್ರಿಕೆಟ್ ಸೇರ್ಪಡೆ ಒತ್ತಾಯ ಹೆಚ್ಚಾಗಿತ್ತು. ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಕಾಣಿಸಿಕೊಂಡಿದ್ದು 1900ರಲ್ಲಿ ಕೊನೇ ಬಾರಿ. ಹೀಗಾಗಿ ಇದು ಮಹತ್ವದ ಹೆಜ್ಜೆ ಎನಿಸಲಿದೆ.