Site icon Vistara News

IOC Sessions : 40 ವರ್ಷಗಳ ಬಳಿಕ ಭಾರತಕ್ಕೆ ಮರಳಿದ ಐಒಸಿ ಅಧಿವೇಶನ

IOC Sesion in india

ನವದೆಹಲಿ: ಬೀಜಿಂಗ್​​ನಲ್ಲಿ ಒಲಿಂಪಿಕ್ಸ್​ ವೇಳೆ ಭಾರತದಲ್ಲಿ ಐಒಸಿ ಅಧಿವೇಶನ ನಡೆಸಬಹುದೇ ಎಂದು ಮತಕ್ಕೆ ಹಾಕಲಾಗಿತ್ತು. ರಿಲಯನ್ಸ್​ ಪೌಂಡೇಷನ್​ನ ಮುಖ್ಯಸ್ಥರಾದ ನೀತಾ ಅಂಬಾನಿ ಬಿಡ್ ಮಾಡಿದ್ದರು ಭಾರತದ ಪರವಾಗಿ ಒಟ್ಟು 76 ಮತಗಳಲ್ಲಿ 75 ಮತಗಳು ಲಭಿಸಿದ್ದರು. ಅಂತೆಯೇ 2023ರ ಅಕ್ಟೋಬರ್ 15ರಿಂದ 17ರವರೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) 141ನೇ ಅಧಿವೇಶನಕ್ಕೆ (IOC Sessions ) ಮುಂಬೈ ಆತಿಥ್ಯ ವಹಿಸಲಿದೆ. ಒಲಿಂಪಿಕ್ ಕ್ರೀಡಾಕೂಟವನ್ನು ಭಾರತಕ್ಕೆ ತರುವ ಪ್ರಯತ್ನದಲ್ಲಿ ಇದು ಪ್ರಮುಖವಾದ ಹೆಜ್ಜೆಯಾಗಿದೆ.

ಐಒಸಿ ಅಧಿವೇಶನ ಭಾರತಕ್ಕೆ ಲಗ್ಗೆಯಿಟ್ಟರೂ ಒಲಿಂಪಿಕ್ ಕ್ರೀಡಾಕೂಟವೂ ಭಾರತಕ್ಕೆ ಬರುತ್ತದೆಯೇ ಎಂಬುದು ಪ್ರಶ್ನೆ ಇನ್ನೂ ಇದೆ. ಐಒಸಿ ಅಧಿವೇಶನದ ಆತಿಥ್ಯ ವಹಿಸುವ ಬಗ್ಗೆ ಮಾತನಾಡಿದ ನೀತಾ ಅಂಬಾನಿ, “ಕ್ರೀಡೆ ಯಾವಾಗಲೂ ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಭರವಸೆ ಮತ್ತು ಸ್ಫೂರ್ತಿಯ ಸಂಕೇತವಾಗಿದೆ. ಕ್ರೀಡೆಯ ವಿಚಾರಕ್ಕೆ ಬಂದಾಗ ನಾವು ಇಂದು ವಿಶ್ವದ ಅತ್ಯಂತ ಸಣ್ಣ ದೇಶಗಳ ಪೈಕಿ ಒಂದಾಗಿದ್ದೇವೆ. ಹೀಗಾಗಿ ಭಾರತದ ಯುವಕರಿಗೆ ಒಲಿಂಪಿಕ್ಸ್ ನ ಸಂಭ್ರಮವನ್ನು ಪರಿಚಯಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವುದು ನಮ್ಮ ಕನಸು” ಎಂದು ಹೇಳಿದ್ದಾರೆ.

ಇಲ್ಲೇ ನಿರ್ಧಾರ

ನೀತಾ ಅಂಬಾನಿ ಒಲಿಂಪಿಕ್ಸ್ ಅನ್ನು ಭಾರತಕ್ಕೆ ತರುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ಭಾರತದಲ್ಲಿ ಐಒಸಿ ಅಧಿವೇಶನಗಳು ನಡೆಯುವುದು ಈ ನಿಟ್ಟಿನಲ್ಲಿ ಪ್ರಾಮುಖ್ಯವಾಗಿದೆ. ಐಒಸಿ ಅಧಿವೇಶನವು ಒಲಿಂಪಿಕ್ ಕ್ರೀಡಾಕೂಟದ ಬಗ್ಗೆ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ಒಲಿಂಪಿಕ್ ಚಾರ್ಟರ್ ಅನ್ನು ಅಂಗೀಕರಿಸುವುದು ಅಥವಾ ತಿದ್ದುಪಡಿ ಮಾಡುವುದು, ಐಒಸಿ ಸದಸ್ಯರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು ಮತ್ತು ಒಲಿಂಪಿಕ್ಸ್​​ಗೆ ಆತಿಥ್ಯ ವಹಿಸುವ ನಗರವನ್ನು ಆಯ್ಕೆ ಮಾಡುವುದು ಈ ಸಭೆಯಲ್ಲಿ ಚರ್ಚೆಯಾಗುತ್ತದೆ. ಉದಾಹರಣೆಗೆ, ಒಲಿಂಪಿಕ್ಸ್​​ನಲ್ಲಿ ಕ್ರಿಕೆಟ್ ಸೇರ್ಪಡೆಯ ಬಗ್ಗೆ ಚರ್ಚೆ ಭರದಿಂದ ಸಾಗಿದೆ. 2028 ರ ಲಾಸ್ ಏಂಜಲೀಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಸೇರಿಸಲು ನಿರ್ಧರಿಸಿದರೆ, ಮುಂಬೈನಲ್ಲಿ ನಡೆಯಲಿರುವ ಐಒಸಿ ಅಧಿವೇಶನದಲ್ಲಿ ಪ್ರಕಟಿಸಲಾಗುತ್ತದೆ.

ಭಾರತಕ್ಕೆ ಗಣ್ಯರ ಭೇಟಿ

ಐಒಸಿ ಅಧಿವೇಶನಕ್ಕಾಗಿ ಭಾರತಕ್ಕೆ ಭೇಟಿ ನೀಡುವ ವಿಶ್ವಪ್ರಸಿದ್ಧ ಕ್ರೀಡಾ ವ್ಯಕ್ತಿಗಳ ದೊಡ್ಡ ಪಟ್ಟಿಯೇ ಇದೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಕ್​, ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ, ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಶನ್ ಅಧ್ಯಕ್ಷ ಸೆಬಾಸ್ಟಿಯನ್ ಕೋ, ಮೊನಾಕೊದ ಪ್ರಿನ್ಸ್ ಆಲ್ಬರ್ಟ್ 2 ಮತ್ತು ಪೋಲ್ ವಾಲ್ಟ್ ಚಾಂಪಿಯನ್ ಜೆಲೆನಾ ಇಸಿನ್ಬಯೇವಾ ಈ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ : Cricket News : ಕ್ರಿಕೆಟ್​ ಪ್ರೇಮಿಗಳಿಗೆ ಖುಷಿ ಸುದ್ದಿ; ಅಮೆರಿಕದ ಒಲಿಂಪಿಕ್ಸ್​ ಸ್ಪರ್ಧೆಗಳ ಪಟ್ಟಿಗೆ ಕ್ರಿಕೆಟ್​​!

ನಲವತ್ತು ವರ್ಷಗಳ ಹಿಂದೆ, 1983ರಲ್ಲಿ ನವದೆಹಲಿ ಐಒಸಿ ಅಧಿವೇಶನದ 86ನೇ ಆವೃತ್ತಿಗೆ ಆತಿಥ್ಯ ವಹಿಸಿತ್ತು. ಅಂದಿನಿಂದ, ಭಾರತವು ಒಲಿಂಪಿಕ್ಸ್ ಅನ್ನು ಬಿಡಿ, ಐಒಸಿ ಅಧಿವೇಶನದ ಆತಿಥ್ಯ ವಹಿಸಲು ಹಾತೊರೆಯುತ್ತಿತ್ತು. ಒಲಿಂಪಿಕ್ಸ್ ಭಾರತಕ್ಕೆ ಬರುತ್ತದೆ ಎಂಬ ಭರವಸೆಯಲ್ಲಿ ಅನೇಕ ತಲೆಮಾರುಗಳ ಆಟಗಾರರು ಕಾಯುತ್ತಿದ್ದರು, ಆದರೆ ಒಲಿಂಪಿಕ್ಸ್ ಭಾರತದಲ್ಲಿ ನಡೆಸಲು ಸಾಧ್ಯವಾಗಲಿಲ್ಲ. ಒಲಿಂಪಿಕ್ ಸಮಿತಿಯಲ್ಲಿ ಭಾರತದ ಪರವಾಗಿ ಧ್ವನಿ ಎತ್ತಲು ಯಾವುದೇ ಖಾಸಗಿ ಸದಸ್ಯರು ಇರಲಿಲ್ಲ ಎಂಬುದು ಇದಕ್ಕೆ ಮೂಲ ಕಾರಣ. ಆರು ವರ್ಷಗಳ ಹಿಂದೆ, ನೀತಾ ಅಂಬಾನಿ ಐಒಸಿಯ ಮೊದಲ ಭಾರತೀಯ ಖಾಸಗಿ ಮಹಿಳಾ ಸದಸ್ಯತ್ವ ಪಡೆದರು. ಅವರ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದ್ದು, 141 ನೇ ಐಒಸಿ ಅಧಿವೇಶನದ ಆತಿಥ್ಯವನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು.

ನೀತಾ ಅಂಬಾನಿ ಪರಿಶ್ರಮ

ನೀತಾ ಅಂಬಾನಿ ಕೇವಲ ಐಒಸಿಯ ಸದಸ್ಯರಾಗಿರುವುದು ಮಾತ್ರವಲ್ಲ, ಭಾರತದ ಕ್ರೀಡಾ ಪ್ರಪಂಚದ ಚಿತ್ರಣವನ್ನೇ ಬದಲಾಯಿಸುತ್ತಿದ್ದಾರೆ. ಇಂದು, 2 ಕೋಟಿ 15 ಲಕ್ಷಕ್ಕೂ ಹೆಚ್ಚು ಯುವ ಆಟಗಾರರು ಅವರ ಕ್ರೀಡಾ ಯೋಜನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಕ್ರೀಡಾ ಜಗತ್ತಿನಲ್ಲಿ ಅವರ ವಿಶೇಷ ಉಪಕ್ರಮದ ಪ್ರಯೋಜನಗಳನ್ನು ಏಷ್ಯನ್ ಕ್ರೀಡಾಕೂಟದಲ್ಲಿ ಪ್ರತಿಫಲನಗೊಂಡಿತು. ಏಷ್ಯನ್ ಗೇಮ್ಸ್​​ನ ಪದಕ ವಿಜೇತರಲ್ಲಿ ಶೇಕಡಾ 10 ಕ್ಕಿಂತ ಹೆಚ್ಚು ಜನರು ರಿಲಯನ್ಸ್ ಫೌಂಡೇಶನ್​​ನೊಂದಿಗೆ ಸಂಬಂಧ ಹೊಂದಿದ್ದಾರೆ.

Exit mobile version