Site icon Vistara News

IPL 2023 : ಐಪಿಎಲ್​ 18ನೇ ಪಂದ್ಯದಲ್ಲಿ ಗುಜರಾತ್​ ಮತ್ತು ಪಂಜಾಬ್​ ಕಿಂಗ್ಸ್​ ನಡುವೆ ಹಣಾಹಣಿ

ipl-18th-match-between-gujarat-and-punjab-kings

ಮೊಹಾಲಿ: ಪಂಜಾಬ್​ ಕಿಂಗ್ಸ್ ಹಾಗೂ ಗುಜರಾತ್​ ಟೈಟನ್ಸ್ ತಂಡಗಳ ನಡುವೆ ಗುರುವಾರ ಐಪಿಎಲ್​ನ (IPL 2023) 18ನೇ ಪಂದ್ಯ ನಡೆಯಲಿದೆ. ಮೊಹಾಲಿಯ ಪಂಜಾಬ್​ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಈ ಹಣಾಹಣಿಯಲ್ಲಿ ಶಿಖರ್​ ಧವನ್ ಹಾಗೂ ಹಾರ್ದಿಕ್​ ಪಾಂಡ್ಯ ನೇತೃತ್ವದ ತಂಡಗಳು ಗೆಲುವಿಗಾಗಿ ಪೈಪೋಟಿ ನಡೆಸಲಿವೆ.

ಪಂಜಾಬ್​ ಕಿಂಗ್ಸ್ ತಂಡ ಆಡಿರುವ ಹಾಲಿ ಆವೃತ್ತಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದೆ.  -0.281 ರನ್​ರೇಟ್​ ಮೂಲಕ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ. ಗುಜರಾತ್​ ಟೈಟನ್ಸ್ ತಂಡ ಮೂರರಲ್ಲಿ ಎರಡು ಜಯ ದಾಖಲಿಸುವ ಮೂಲಕ +0.431 ರೇಟಿಂಗ್ಸ್​ನೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಹಾಲಿ ಆವೃತ್ತಿಯ ಪಂಜಾಬ್​ ಕಿಂಗ್ಸ್​ ತಂಡ ಸಾಕಷ್ಟು ಬಲಿಷ್ಠವಾಗಿದೆ. ಆದರೆ, ಆ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಆರಂಭಿಕ ಬ್ಯಾಟರ್​ಗಳಾದ ಶಿಖರ್​ ಧವನ್ ಹಾಗೂ ಪ್ರಭ್​ಸಿಮ್ರಾನ್​ ಅವರನ್ನು ಬಿಟ್ಟರೆ ಉಳಿದ ಆಟಗಾರರು ವೈಫಲ್ಯ ಕಾಣುತ್ತಿದ್ದಾರೆ. ಹೀಗಾಗಿ ಅಧಿಕಾರಯುತ ಗೆಲುವು ದಾಖಲಿಸಲು ಈ ತಂಡಕ್ಕೆ ಸಾಧ್ಯವಾಗುತ್ತಿಲ್ಲ. ಆಲ್​ರೌಂಡರ್​ಗಳಾ ಸ್ಯಾಮ್ ಕರ್ರನ್​, ಸಿಕಂದರ್​ ರಾಜಾ., ಬ್ಯಾಟರ್​ಗಳಾ ಜಿತೇಶ್​ ಶರ್ಮಾ, ಶಾರುಖ್ ಖಾನ್ ಇದ್ದಾರೆ. ಆದರೆ ಅವರ್ಯಾರೂ ತಂಡಕ್ಕೆ ನೆರವಾಗುತ್ತಿಲ್ಲ. ಈ ತಂಡದ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಯುವ ಬೌಲರ್ ಅರ್ಶ್​ದೀಪ್​ ಸಿಂಗ್​, ಹರ್​ಪ್ರೀತ್​ ಬ್ರಾಸ್​, ನೇಥನ್ ಎಲ್ಲೀಸ್​, ಸ್ಪಿನ್ನರ್​ ರಾಹುಲ್ ಚಾಹರ್​ ತಂಡದಲ್ಲಿದ್ದಾರೆ. ಆದರೆ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ಎಡವುತ್ತಿದ್ದಾರೆ.

ಬಲಿಷ್ಠ ಗುಜರಾತ್​ ತಂಡ

ಹಾಲಿ ಚಾಂಪಿಯನ್ ಗುಜರಾತ್​ ಟೈಟನ್ಸ್ ತಂಡ ಈ ಬಾರಿಯೂ ಅಮೋಘ ಪ್ರದರ್ಶನ ನೀಡುತ್ತಿದೆ. ತಂಡದ ಪ್ರತಿಯೊಬ್ಬ ಆಟಗಾರನೂ ಗೆಲುವಿನ ಕೊಡುಗೆ ಕೊಡುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ ಕೆಕೆಆರ್​ ತಂಡದ ರಿಂಕು ಸಿಂಗ್​ ಕೊನೇ ಐದು ಎಸೆತಗಳಲ್ಲಿ ಸಿಕ್ಸರ್​ ಹೊಡೆಯದೇ ಹೋಗಿದ್ದರೆ ಮೂರರಲ್ಲಿ ಮೂರು ಪಂದ್ಯಗಳನ್ನು ಗೆದ್ದ ಸಾಧನೆ ಮಾಡುತ್ತಿತ್ತು ಗುಜರಾತ್​. ಅಂದು ಆ ಗುಜರಾತ್​ ಬಳಗಕ್ಕೆ ದುರದೃಷ್ಟ ಮಾತ್ರ. ಇವೆಲ್ಲದರ ನಡುವೆ ಗುಜರಾತ್ ತಂಡದ ಕಾಯಂ ನಾಯಕ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಲಿದ್ದಾರೆ.

ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ಪಾಂಡ್ಯ ಅನಾರೋಗ್ಯಕ್ಕೆ ಒಳಗಾಗಿದ್ದರು. ಇದೀಗ ಅವರು ಅನಾರೋ್ಗ್ಯ ಸಮಸ್ಯೆಯಿಂದ ಗುಣಮುಖರಾಗಿದ್ದಾರೆ. ಹೀಗಾಗಿ ತಂಡಕ್ಕೆ ಮರಳುವುದು ಖಾತರಿ. ಹೀಗಾಗಿ ಮತ್ತೆ ಆ ತಂಡಕ್ಕೆ ಗೆಲುವಿ ನ ವಿಶ್ವಾಸ ಮೂಡಿದೆ. ಶುಭ್​ಮನ್ ಗಿಲ್​, ಸಾಯಿ ಸುದರ್ಶನ್​, ವಿಜಯ ಶಂಕರ್​, ಡೇವಿಡ್​ ಮಿಲ್ಲರ್​ ಬ್ಯಾಟಿಂಗ್​ನಲ್ಲಿ ಮಿಂಚುತ್ತಿದ್ದಾರೆ. ಬೌಲಿಂಗ್​ನಲ್ಲಿ ಮೊಹಮ್ಮದ್​ ಶಮಿ, ಅಲ್ಜಾರಿ ಜೋಸೆಫ್​, ರಶೀದ್ ಖಾನ್​, ಸೇರಿ ಎಲ್ಲರೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಸಂಭಾವ್ಯ ತಂಡಗಳು

ಪಂಜಾಬ್​ ಕಿಂಗ್​​: ಪ್ರಭಾಸಿಮ್ರಾನ್ ಸಿಂಗ್, ಶಿಖರ್ ಧವನ್(ನಾಯಕ), ಮ್ಯಾಥ್ಯೂ ಶಾರ್ಟ್, ಜಿತೇಶ್ ಶರ್ಮಾ, ಸ್ಯಾಮ್ ಕರ್ರನ್​, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ನಾಥನ್ ಎಲ್ಲಿಸ್, ಮೋಹಿತ್ ರಥಿ, ಅರ್ಶ್‌ದೀಪ್ ಸಿಂಗ್, ಸಿಕಂದರ್ ರಜಾ, ಕಗಿಸೋ ರಬಾಡ, ಹರ್‌ಪ್ರೀತ್ ಸಿಂಗ್ ಭಾಟಿಯಾ, ರಿಷಿ ಧವನ್, ಅಥರ್ವ ಟೈಡೆ, ಭಾನುಕಾ ರಾಜಪಕ್ಸೆ, ಬಲ್ತೇಜ್ ಸಿಂಗ್, ಲಿಯಾಮ್ ಲಿವಿಂಗ್ಸ್ಟೋನ್, ವಿಧ್ವತ್ ಕಾವೇರಪ್ಪ, ಗುರ್ನೂರ್ ಬ್ರಾರ್, ಶಿವಂ ಸಿಂಗ್.

ಗುಜರಾತ್​ ಟೈಟನ್ಸ್ : ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಸಾಯಿ ಸುದರ್ಶನ್, ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಜೋಶುವಾ ಲಿಟಲ್, ಜಯಂತ್ ಯಾದವ್, ಶ್ರೀಕರ್ ಭರತ್ , ಮೋಹಿತ್ ಶರ್ಮಾ, ಮ್ಯಾಥ್ಯೂ ವೇಡ್, ಪ್ರದೀಪ್ ಸಾಂಗ್ವಾನ್, ದಾಸುನ್ ಶನಕ, ಒಡಿಯನ್ ಸ್ಮಿತ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಶಿವಂ ಮಾವಿ, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್, ನೂರ್ ಅಹ್ಮದ್.

Exit mobile version