ಬೆಂಗಳೂರು: ಐಪಿಎಲ್ 2024ನೇ (IPL 2024) ಆವೃತ್ತಿಯಲ್ಲಿ ಫೈನಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (KKR) ವಿರುದ್ಧ ಸನ್ರೈಸರ್ಸ್ ಹೈದರಾಬಾದ್ (SRH) ಸೋತಿದ್ದಕ್ಕೆ ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ (Amitabh Bachchan) ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸೋತ ತಕ್ಷಣ ಕಣ್ಣೀರು ಹಾಕಿದ ಮಾಲಕಿ ಕಾವ್ಯಾ ಮಾರನ್ಗೆ (Kavya Maran) ಸಾಂತ್ವನ ಹೇಳಿದ್ದಾರೆ. ಶಾರುಖ್ ತಂಡಕ್ಕಿಂತ ಮಾರನ್ ತಂಡವೇ ಗೆಲ್ಲಬೇಕಾಗಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಅವರು ನಟ ತನ್ನ ಬ್ಲಾಗ್ನಲ್ಲಿ ಶಾರುಖ್ ಖಾನ್ ಅವರ ತಂಡವನ್ನು ಅಭಿನಂದಿಸಿದರು. ಆದರೆ ಎಸ್ಆರ್ಎಚ್ ಸೋತಿದ್ದಕ್ಕೆ ಅವರು ನಿರಾಶೆಗೊಂಡಿದ್ದೇನೆ ಎಂದು ಹೇಳಿದರು.
Kavya Maran was hiding her tears. 💔
— Mufaddal Vohra (@mufaddal_vohra) May 26, 2024
– She still appreciated KKR. pic.twitter.com/KJ88qHmIg6
ಎಸ್ಆರ್ಎಚ್ ಈ ವರ್ಷದ ಅತ್ಯುತ್ತಮ ತಂಡಗಳಲ್ಲಿ ಒಂದಾಗಿದೆ ಎಂದು ಶ್ಲಾಘಿಸಿದ ಅಮಿತಾಭ್, ಐಪಿಎಲ್ 2024 ರ ವಿಜೇತ ಕಪ್ನಲ್ಲಿ ತಮ್ಮ ತಂಡ ಸೋತ ನಂತರ ಎಸ್ಆರ್ಎಚ್ ಮಾಲೀಕರಾದ ಕಾವ್ಯಾ ಮಾರನ್ ತಮ್ಮ ಅಳುವನ್ನು ಮರೆಮಾಚುತ್ತಿರುವುದನ್ನು ನೋಡಿ ಬೇಸರವಾಗಿದೆ ಎಂದು ಹೇಳಿದ್ದಾರೆ.
ಭಾನುವಾರ ರಾತ್ರಿ ಚೆನ್ನೈನಲ್ಲಿ ಕೆಕೆಆರ್ ತಂಡ ಎಸ್ಆರ್ಎಚ್ ತಂಡವನ್ನು ಎಂಟು ವಿಕೆಟ್ಗಳಿಂದ ಸೋಲಿಸಿದ ನಂತರ, ಕಾವ್ಯಾ ಸ್ಟ್ಯಾಂಡ್ಗಳಲ್ಲಿ ಗರಬಡಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದರು. ಅವರು ಆರಂಭದಲ್ಲಿ ಕೆಕೆಆರ್ ತಂಡಕ್ಕೆ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಈ ವೇಳೆ ಅವರಿಗೆ ಕಣ್ಣೀರು ಬಂತು. ತಕ್ಷಣ ಅವರು ಕ್ಯಾಮೆರಾಗೆ ಬೆನ್ನು ತಿರುಗಿಸಿ ಕಣ್ಣೀರು ಒರೆಸಿದರು. ವೈರಲ್ ವೀಡಿಯೊದಲ್ಲಿ ಅವಳು ತನ್ನ ಕಣ್ಣೀರನ್ನು ಒರೆಸುತ್ತಿರುವುದು ಕಂಡುಬಂದಿದೆ.
ಈ ಬಗ್ಗೆ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿರುವ ಅಮಿತಾಭ್, “ಐಪಿಎಲ್ ಫೈನಲ್ ಮುಗಿದಿದೆ ಮತ್ತು ಕೆಕೆಆರ್ ಅತ್ಯಂತ ವಿಶ್ವಾಸಾರ್ಹ ಗೆಲುವು ಸಾಧಿಸಿದೆ. ಎಸ್ಆರ್ಎಚ್ ಹೀನಾಯ ಸೋಲನುಭವಿಸಿತು.. ಇದು ನಿರಾಶಾದಾಯಕವಾಗಿದೆ. ಏಕೆಂದರೆ ಎಸ್ಆರ್ಎಚ್ ಉತ್ತಮ ತಂಡವಾಗಿತ್ತು. ಅವರು ಇತರ ಪಂದ್ಯಗಳನ್ನು ಆಡಿದ ದಿನಗಳಲ್ಲಿ ಅವರ ಅದ್ಭುತ ಪ್ರದರ್ಶನವನ್ನು ನೋಡಿದ್ದೇವೆ. ಹೀಗಾಗಿ ಶಾರುಖ್ ತಂಡಕ್ಕಿಂತ ಅವರೇ ಗೆಲ್ಲಬೇಕಾಗಿತ್ತು ಎಂದು ಬರೆದುಕೊಂಡಿದ್ದಾರೆ.
“ಸೋಲಿನ ಬಳಿಕ ಗಮನಿಸಬೇಕಾದ ಅತ್ಯಂತ ಹೃದಯಸ್ಪರ್ಶಿಯಾದ ಸಂಗತಿಯೆಂದರೆ ಆ ಸುಂದರ ಯುವತಿ, ಅಂದರೆ ಎಸ್ಆರ್ಎಚ್ ಮಾಲಕಿ ಕಣ್ಣೀರು ಹಾಕಿರುವುದು. ಸೋಲಿನ ನಂತರ ಅವರು ಭಾವುಕರಾಗುತ್ತಾರೆ ಮತ್ತು ಕಣ್ಣೀರು ಹಾಕುತ್ತಾರೆ. ತನ್ನ ಭಾವನೆಯನ್ನು ಪ್ರದರ್ಶಿಸದಂತೆ ಕ್ಯಾಮೆರಾಗಳಿಂದ ಮುಖ ತಿರುಗಿಸುತ್ತಾರೆ. ನನಗೆ ಆಕೆಯ ಬಗ್ಗೆ ಕನಿಕರ ಮೂಡಿದೆ. ಪರವಾಗಿಲ್ಲ.. ನಾಳೆ ಇನ್ನೊಂದು ದಿನ ನಿಮಗೆ ಇರುತ್ತದೆ. ಎಂದು ಅಮಿತಾಭ್ ಬರೆದಿದ್ದಾರೆ.
ಇದನ್ನೂ ಓದಿ: IPL 2024 : ಗೆಲ್ಲಬೇಕಾಗಿರುವುದು ಐಪಿಎಲ್ ಟ್ರೋಫಿ, ಆರೆಂಜ್ ಕ್ಯಾಪ್ ಅಲ್ಲ; ಅನಗತ್ಯವಾಗಿ ಕೊಹ್ಲಿಯ ಕಾಲೆಳೆದ ಅಂಬಾಟಿ ರಾಯುಡು
ಭಾನುವಾರ ರಾತ್ರಿ ನಡೆದ ಐಪಿಎಲ್ ಫೈನಲ್ನಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್ ಸಾಕಷ್ಟು ರನ್ ಬಾರಿಸಿರಲಿಲ್ಲ. ತಂಡವು 1.3 ಓವರ್ ಗಳಲ್ಲಿ 113 ರನ್ ಗಳಿಸಿತು. ಕೆಕೆಆರ್ ಬೌಲರ್ಗಳಿಗೆ ತಮ್ಮ ಎಲ್ಲಾ ವಿಕೆಟ್ಗಳನ್ನು ನೀಡಿದರು. ಎಸ್ಆರ್ಎಚ್ ಐಪಿಎಲ್ನಲ್ಲಿ ಇತಿಹಾಸದಲ್ಲಿ ಮೂರನೇ ಅತಿ ಕಡಿಮೆ ಮೊತ್ತ ಮತ್ತು ಐಪಿಎಲ್ ಫೈನಲ್ನಲ್ಲಿ ಅತ್ಯಂತ ಕಡಿಮೆ ಮೊತ್ತವನ್ನು ಗಳಿಸಿತು. 114 ರನ್ಗಳ ಗುರಿಯನ್ನು ಕೆಕೆಆರ್ ತಡೆರಹಿತವಾಗಿ ಸಾಧಿಸಿತು. ಕೇವಲ 2 ವಿಕೆಟ್ ಕಳೆದುಕೊಂಡು 10 ಓವರ್್ ಬಾಕಿ ಇರುವಾಗಲೇ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಅಮಿತಾಬ್ ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುತ್ತಿದ್ದರು. ಅವರು ಒಂದೆರಡು ಎಂಐ ಪಂದ್ಯಗಳಿಗೆ ಹಾಜರಾಗಿದ್ದರು. ಆದಾಗ್ಯೂ, ಐಪಿಎಲ್ 2024 ರಿಂದ ತಂಡವು ಬೇಗನೆ ನಿರ್ಗಮಿಸಿದ್ದು ಅಮಿತಾಭ್ ಅವರ ನಿಷ್ಠೆ ಹೈದರಾಬಾದ್ ಕಡೆಗೆ ತಿರುಗಿತ್ತು.