Site icon Vistara News

IPL 2023 | ಹರಾಜಿನಲ್ಲಿ 21 ಆಟಗಾರರಿಗೆ 2 ಕೋಟಿ ರೂ. ಮೂಲ ಬೆಲೆ; ಭಾರತೀಯರು ಇಲ್ಲವೇ ಇಲ್ಲ!

IPL Auction 2022

ಮುಂಬಯಿ: ಐಪಿಎಲ್ 16ನೇ ಆವೃತ್ತಿಯ ಮಿನಿ ಹರಾಜಿಗೆ ಕ್ಷಣ ಗಣನೆ ಆರಂಭವಾಗಿದೆ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಈ ಬಾರಿಯ ಮಿನಿ ಹರಾಜು ನಡೆಯಲಿದೆ. ಅದರಂತೆ ಈಗಾಗಲೇ 991 ಆಟಗಾರರು ಹರಾಜಿಗೆ ಹೆಸರು ಕೂಡ ನೊಂದಾಯಿಸಿದ್ದಾರೆ. ಇದೀಗ 2 ಕೋಟಿ ರೂ. ಮೂಲ ಬೆಲೆ ಹೊಂದಿರುವ ಆಟಗಾರರ ಪಟ್ಟಿ ಪ್ರಕಟಗೊಂಡಿದೆ. ಆದರೆ ಈ ಪಟ್ಟಿಯಲ್ಲಿ ಒಬ್ಬರೂ ಭಾರತೀಯ ಆಟಗಾರ ಇಲ್ಲ ಎನ್ನುವುದು ವಿಪರ್ಯಾಸ.

ಮುಂಬರುವ ಐಪಿಎಲ್ ಹರಾಜಿನಲ್ಲಿ ಟಿ20 ವಿಶ್ವ ಕಪ್​ ವಿಜೇತ ತಂಡದ ಬೆನ್ ಸ್ಟೋಕ್ಸ್, ಸ್ಯಾಮ್ ಕರನ್​ ಮತ್ತು ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್, ಕಿವೀಸ್​ ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ 21 ವಿದೇಶಿ ಆಟಗಾರರಿಗೆ 2 ಕೋಟಿ ರುಪಾಯಿ ಮೂಲಬೆಲೆ ನಿಗದಿ ಪಡಿಸಲಾಗಿದೆ.

ಈ ಪಟ್ಟಿಯಲ್ಲಿ ಇರುವಂತಹ ಉಳಿದ ಸ್ಟಾರ್​ ಆಟಗಾರರೆಂದರೆ ವೆಸ್ಟ್‌ ಇಂಡೀಸ್‌ನ ಮಾಜಿ ನಾಯಕ ನಿಕೋಲಸ್ ಪೂರನ್, ಜೇಸನ್ ಹೋಲ್ಡರ್ ಮತ್ತು ಟಿ20 ವಿಶ್ವ ಕಪ್​ನಲ್ಲಿ ಶತಕ ಬಾರಿಸಿ ಮಿಂಚಿದ್ದ ದಕ್ಷಿಣ ಆಫ್ರಿಕಾದ ರಿಲೀ ರೊಸೊ ಪ್ರಮುಖ ಆಕರ್ಷಣೆಯಾಗಿದ್ದಾರೆ.

2ಕೋಟಿ ರೂ. ಮೂಲ ಬೆಲೆ ಹೊಂದಿದ ಆಟಗಾರ ಪಟ್ಟಿ

ಟಾಮ್ ಬ್ಯಾಂಟನ್, ಸ್ಯಾಮ್ ಕರನ್​, ಕ್ರಿಸ್​ ಜೋರ್ಡನ್​, ಟೈಮಲ್ ಮಿಲ್ಸ್, ಜೆಮ್ಮಿ ಓವರ್ಟನ್, ಕ್ರೇಗ್ ಓವರ್ಟನ್, ಆದಿಲ್ ರಶೀದ್,ಫಿಲ್ ಸಾಲ್ಟ್, ಬೆನ್​ ಸ್ಟೋಕ್ಸ್​, ನಾಥನ್ ಕೌಲ್ಟರ್-ನೈಲ್, ಕ್ಯಾಮರೂನ್​ ಗ್ರೀನ್​, ಟ್ರಾವಿಸ್ ಹೆಡ್, ಕ್ರಿಸ್ ಲಿನ್, ಕೇನ್​ ವಿಲಿಯಮ್ಸನ್​, ಆ್ಯಡಂ ಮಿಲ್ನೆ, ಜಿಮ್ಮಿ ನೀಶಾಮ್, ರೀಲಿ ರೊಸೊ, ರಸ್ಸಿ ವ್ಯಾನ್ ಡೆರ್ ಡುಸ್ಸೆನ್, ಏಂಜೆಲೊ ಮ್ಯಾಥ್ಯೂಸ್, ಜೇಸನ್ ಹೋಲ್ಡರ್, ನಿಕೋಲಸ್​ ಪೂರನ್​.

ಇದನ್ನೂ ಓದಿ | IPL 2023| ಐಪಿಎಲ್​ನಲ್ಲೂ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಗೆ ತರಲು ಬಿಸಿಸಿಐ ಚಿಂತನೆ!

Exit mobile version