Site icon Vistara News

IPL 2023: ರಂಗು ರಂಗಿನ ಐಪಿಎಲ್​ಗೆ ಖ್ಯಾತ ತಾರೆಗಳಿಂದ ಮನರಂಜನೆಯ ರಸದೌತಣ

IPL 2023: A colorful IPL with entertainment from famous stars

IPL 2023: A colorful IPL with entertainment from famous stars

ಅಹಮದಾಬಾದ್​: ಹಲವು ನೂತನ ನಿಯಮಗಳ ಪ್ರಯೋಗದೊಂದಿಗೆ ಆರಂಭವಾಗಲಿರುವ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ(IPL 2023) ಈ ಬಾರಿ ತಾರೆಗಳ ಮನರಂಜನೆಯ ರಸದೌತಣ ಇರಲಿದೆ. ಶುಕ್ರವಾರ ಆರಂಭವಾಗಲಿರುವ ಈ ಟೂರ್ನಿಯ ಉದ್ಘಾಟನಾ ಸಮಾಂಭದಲ್ಲಿ ಪ್ರಮುಖ ತಾರೆಯರು ಪಾಲ್ಗೊಳ್ಳಲಿದ್ದಾರೆ.

ಮಾರ್ಚ್​ 31ರಿಂದ ಆರಂಭವಾಗುವ ಈ ಟೂರ್ನಿ 74 ದಿನಗಳ ಕಾಲ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಪಂದ್ಯ ಆರಂಭಕ್ಕೂ ಮುನ್ನ ಭರ್ಜರಿ ಮನರಂಜನಾ ಕಾರ್ಯಕ್ರಮ ಜರಗಲಿದೆ. ಈ ಅದ್ಧೂರಿ ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಅಣಿಯಾಗಲಿದೆ.

ಇತ್ತೀಚೆಗೆ ನಡೆದ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್​ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಕಿಯಾರಾ ಅಡ್ವಾಣಿ, ಕೃತಿ ಸನೋನ್ ಹಾಗೂ ಖ್ಯಾತ ಗಾಯಕ ಎಪಿ ಧಿಲ್ಲೋನ್ ಅವರ ಸಮ್ಮುಖದಲ್ಲಿ ಮನರಂಜನೆ ಕಾರ್ಯಕ್ರಮದ ಮೂಲಕ ಈ ಟೂರ್ನಿಗೆ ಚಾಲನೆ ನೀಡಲಾಗಿತ್ತು. ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಉದ್ಘಾಟನಾ ಸಮಾರಂಭ ಇದೀಗ ಬರೋಬ್ಬರಿ 4 ವರ್ಷಗಳ ಬಳಿಕ ನಡೆಯುತ್ತಿದೆ.

ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಾಗುವ ತಾರೆಗಳ ಪಟ್ಟಿಯನ್ನು ಐಪಿಎಲ್​ ಆಡಳಿತ ಮಂಡಳಿ ಈಗಾಗಲೇ ತಮ್ಮ ಟ್ವಿಟರ್​ ಖಾತೆಯಲ್ಲಿ ಫೋಟೊವನ್ನು ಹಂಚಿಕೊಂಡಿದೆ. ಈ ಪಟ್ಟಿಯಲ್ಲಿ ತಮನ್ನಾ ಭಾಟಿಯಾ(Tamanna Bhatia), ಗಾಯಕರಾದ ಅರಿಜಿತ್ ಸಿಂಗ್(arijit singh) ಮೊದಲ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜತೆಗೆ ನಟಿ ರಶ್ಮಿಕಾ ಮಂದಣ್ಣ, ಟೈಗರ್ ಶ್ರಾಫ್ ಮತ್ತು ಕತ್ರಿನಾ ಕೈಫ್ ಕೂಡ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Exit mobile version